ಸಿನಿಮಾ ಸುದ್ದಿ

ತೆಲುಗು ಚಿತ್ರದ ರೀಮೇಕ್ ನಲ್ಲಿ ಅತಿಥಿ ಪಾತ್ರ ನಿರ್ವಹಿಸಲಿರುವ ನಟ ಮಹತ್ ರಾಘವೇಂದ್ರ

ಕಾಲಿವುಡ್ ನಟ ಮಹತ್ ರಾಘವೇಂದ್ರ ತೆಲುಗಿನ ರೀಮೇಕ್ ಚಿತ್ರವೊಂದರಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ.

ತೆಲುಗು ಚಿತ್ರದ ರೀಮೇಕ್ ನಲ್ಲಿ ಅತಿಥಿ ಪಾತ್ರ ನಿರ್ವಹಿಸಲಿರುವ ನಟ ಮಹತ್ ರಾಘವೇಂದ್ರ
ಮಹತ್ ರಾಘವೇಂದ್ರ
Published On :

ಚೆನ್ನೈ: ಕಾಲಿವುಡ್ ನಟ ಮಹತ್ ರಾಘವೇಂದ್ರ ತೆಲುಗಿನ ರೀಮೇಕ್ ಚಿತ್ರವೊಂದರಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ.
ತೆಲುಗಿನ ನೇರಂ ಚಿತ್ರ ರೀಮೇಕ್ ಆಗುತ್ತಿದ್ದು, ಈ  ಚಿತ್ರದಲ್ಲಿ ಸಂದೀಪ್ ಕೃಷ್ಣ ರಿಮೇಕ್ ಮುಖ್ಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಸಂದೀಪ್ ಹಾಗು ನಾನು ಹಲವು ವರ್ಷಗಳಿಂದ ಸ್ನೇಹಿತರು, ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಮಹತ್ ರಾಘವೇಂದ್ರ ಹೇಳಿದ್ದಾರೆ.
ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಹತ್ ರಾಘವೇಂದ್ರ ಸಂದೀಪ್ ಕೃಷ್ಣ ಮಾತ್ರ ಅಲ್ಲದೇ ಹಲವು ಸ್ನೇಹಿತರೊಂದಿಗೆ ನಟನೆ ಮಾಡುತ್ತಿದ್ದಾರೆ. ಸಂದೀಪ್ ಅವರೊಂದಿಗೆ ಚಿತ್ರದ ನಿರ್ಮಾಪಕ ಅನಿಲ್ ಸಂಕರ, ಖಳನಾಯಕನಾಗಿ ನಟಿಸಲಿರುವ ಬಾಬಿ ಸಿಂಹ ಸಹ ಮಹತ್ ರಾಘವೇಂದ್ರ ಅವರ ಸ್ನೇಹಿತರಾಗಿದ್ದಾರೆ. ಅನಿಲ್ ಕನ್ನೆಗಂಟಿ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಮಹಾತ್ ಸದ್ಯ ತೆಲುಗು ಚಿತ್ರ 'ಶೀ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾರ್ಚ್ ನಿಂದ ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.