ಸಿನಿಮಾ ಸುದ್ದಿ

ಒಂದೇ ಸಿನೆಮಾದಲ್ಲಿ ೧೬ ಪಾತ್ರಗಳಲ್ಲಿ ಹರೀಶ್ ರಾಜ್

ಸಿನೆಮಾದಲ್ಲಿ ನಟನೊಬ್ಬ ಒಂದಕ್ಕಿಂತಲೂ ಹೆಚ್ಚಾಗಿ ದ್ವಿಪಾತ್ರ, ಮೂರೂ ಪಾತ್ರಗಳಲ್ಲಿ ನಟಿಸುವುದನ್ನು ನಾವು ವಿರಳವಾಗಿ ಕಾಣಬಹುದಾಗಿದ್ದರೂ, ಒಬ್ಬನೇ ನಟ, ಒಂದೇ ಸಿನೆಮಾದಲ್ಲಿ ೧೬ ಪಾತ್ರಗಳಲ್ಲಿ

ಒಂದೇ ಸಿನೆಮಾದಲ್ಲಿ ೧೬ ಪಾತ್ರಗಳಲ್ಲಿ ಹರೀಶ್ ರಾಜ್
'ಶ್ರೀ ಸತ್ಯನಾರಾಯಣ' ಸಿನೆಮಾದಲ್ಲಿ ನಾರದನ ಪಾತ್ರದಲ್ಲಿ ಹರೀಶ್ ರಾಜ್
Published On :

ಬೆಂಗಳೂರು: ಸಿನೆಮಾದಲ್ಲಿ ನಟನೊಬ್ಬ ಒಂದಕ್ಕಿಂತಲೂ ಹೆಚ್ಚಾಗಿ ದ್ವಿಪಾತ್ರ, ಮೂರೂ ಪಾತ್ರಗಳಲ್ಲಿ ನಟಿಸುವುದನ್ನು ನಾವು ವಿರಳವಾಗಿ ಕಾಣಬಹುದಾಗಿದ್ದರೂ, ಒಬ್ಬನೇ ನಟ, ಒಂದೇ ಸಿನೆಮಾದಲ್ಲಿ ೧೬ ಪಾತ್ರಗಳಲ್ಲಿ ನಟಿಸುವುದೆಂದರೆ? ಹೌದು ನಟ ಹರೀಶ್ ರಾಜ್ ಇಂತಹುದೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ಹರೀಶ್ ರಾಜ್ ಅವರೇ ನಿರ್ದೇಶಿಸುತ್ತಿರುವ 'ಶ್ರೀ ಸತ್ಯನಾರಾಯಣ' ಸಿನೆಮಾದಲ್ಲಿ ಹರೀಶ್ ೧೬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಯಕ ನಟ, ತುಂಗಧ್ವಜ ರಾಜ, ಕೋಪಗೊಂಡ ಋಷಿ ವೇಷದಲ್ಲಿರುವ ನಾರಾಯಣ, ರಾಜ ಚಂದ್ರಕೇತು, ದರೋಡೆಕಾರ, ಸುಂದರ ಯುವಕ, ಬಡ ಬ್ರಾಹ್ಮಣ, ಮುದುಕನ ವೇಷದಲ್ಲಿರುವ ನಾರಾಯಣ, ಮರ ಕಡಿಯುವವ, ರಾಜ ಉಲ್ಕಮುಖ, ವ್ಯಾಪಾರಿ, ನಾರದ ಮಹರ್ಷಿ, ನಾರಾಯಣ, ಸುತ ಮಹಾಮುನಿ, ಶೌನಕ ಮಹರ್ಷಿ, ವ್ಯಾಸ ಮಹಾಮುನಿ ಪಾತ್ರಗಳಲ್ಲಿ ಹರೀಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.