ಸಿನಿಮಾ ಸುದ್ದಿ

ತಮಿಳುನಾಡು ಉದ್ಯಮಿಯಿಂದ ನಟಿ ಮೇಘನಾ ರಾಜ್ ವಿರುದ್ಧ ವಂಚನೆ ದೂರು ದಾಖಲು

: ಹಿರಿಯ ನಟ ಸುಂದಪ್ ರಾಜ್ ಹಾಗೂ ನಟಿ ಪ್ರಮೀಳಾ ಜೂಷಾಯ್ ದಂಪತಿ ಮಗಳಾದ ನಟಿ ಮೇಘನಾ ರಾಜ್ ವಿರುದ್ಧ ವ್ಯಕ್ತಿಯೊಬ್ಬ ವಂಚನೆ ಕೇಸು ದಾಖಲಿಸಿದ್ದಾರೆ...

ತಮಿಳುನಾಡು ಉದ್ಯಮಿಯಿಂದ  ನಟಿ ಮೇಘನಾ ರಾಜ್ ವಿರುದ್ಧ ವಂಚನೆ ದೂರು ದಾಖಲು
ಮೇಘನಾ ರಾಜ್
Published On :

ಬೆಂಗಳೂರು: ಹಿರಿಯ ನಟ ಸುಂದಪ್ ರಾಜ್ ಹಾಗೂ ನಟಿ ಪ್ರಮೀಳಾ ಜೂಷಾಯ್ ದಂಪತಿ ಮಗಳಾದ ನಟಿ ಮೇಘನಾ ರಾಜ್ ವಿರುದ್ಧ ವ್ಯಕ್ತಿಯೊಬ್ಬ ವಂಚನೆ ಕೇಸು ದಾಖಲಿಸಿದ್ದಾರೆ.

ತಮಿಳುನಾಡು ಮೂಲದ ಜನಾರ್ಧನ್ ಎಂಬುವರು ನಟಿ ಮೇಘನಾ ರಾಜ್ ತಮ್ಮನ್ನು ವಿವಾಹವಾಗಿ, ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ.ಜೊತೆಗೆ ಮದುವೆಯ ದಾಖಲೆಗಳನ್ನು ಕದ್ದಿದ್ದಾರೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮೆಘರಿಕ್ ಅವರಿಗೆ ಇ -ಮೇಲ್ ಮೂಲಕ  ದೂರು ನೀಡಿದ್ದಾರೆ.

ದೂರಿನಲ್ಲಿ ನಟಿ ಮೇಘನಾ ರಾಜ್ ತಮ್ಮನ್ನು ವಿವಾಹವಾಗಿ ವಂಚಿಸಿದ್ದಾರೆ. ಜೊತೆಗೆ ಮದುವೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಕದ್ದಿದ್ದಾರೆಂದು ಆರೋಪಿಸಿದ್ದಾರೆ. ಆದರೆ ನಟಿ ಮೇಘನಾ ರಾಜ್ ತಮ್ಮ ವಿರುದ್ಧದ ಈ ದೂರನ್ನು ಅಲ್ಲಗಳೆದಿದ್ದಾರೆ. ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತ ಎಸ್. ಮೆಘರಿಕ್ ಜೆ.ಪಿ ನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.