ಸಿನಿಮಾ ಸುದ್ದಿ

ವಕೀಲೆ ಅಥವಾ ಪೊಲೀಸ್ ಆಗಬೇಕೆಂದು ನನ್ನ ಪೋಷಕರು ಬಯಸಿದ್ದರು: ರಚಿತಾ ರಾಮ್

ರಮೇಶ್ ಅರವಿಂದ್ ಅವರ 100ನೇ ಚಿತ್ರವಾದ ಪುಷ್ಪಕ ವಿಮಾನದಲ್ಲಿ ನಟಿ ರಚಿತಾ ರಾಮ್ ವಕೀಲೆ ಪಾತ್ರದಲ್ಲಿ ...

ವಕೀಲೆ ಅಥವಾ ಪೊಲೀಸ್ ಆಗಬೇಕೆಂದು ನನ್ನ ಪೋಷಕರು ಬಯಸಿದ್ದರು: ರಚಿತಾ ರಾಮ್
ರಚಿತಾ ರಾಮ್
Published On :

ಬೆಂಗಳೂರು: ರಮೇಶ್ ಅರವಿಂದ್ ಅವರ 100ನೇ ಚಿತ್ರವಾದ ಪುಷ್ಪಕ ವಿಮಾನದಲ್ಲಿ ನಟಿ ರಚಿತಾ ರಾಮ್ ವಕೀಲೆ ಪಾತ್ರದಲ್ಲಿ ಅಭಿನಯಸಿದ್ದಾರೆ.

ಇದೊಂದು ತಂದೆ ಮಗಳ ಬಾಂಧವ್ಯದ ಚಿತ್ರವಾಗಿದ್ದು, ತಂದೆಗೆ ನ್ಯಾಯ ದೊರಕಿಸಿಕೊಡಲು ರಚಿತಾ ರಾಮ್ ವಕೀಲೆ ಮಗಳಾಗಿ ಕಾಣಿಸಿಕೊಂಡಿದ್ದಾರೆ.

ಕಪ್ಪು ಕೋಟು ಧರಿಸಿ ನ್ಯಾಯಕ್ಕಾಗಿ ಹೋರಾಟ ಮಾಡುವ ಮಗಳ ಪಾತ್ರ ಎಂದ ಕೂಡಲೇ ನಾನು ಒಪ್ಪಿ ಕೊಂಡೆ, ನನ್ನ ಪಾತ್ರದಲ್ಲಿ ನಾನು ಪೂರ್ತಿ ತೊಡಗಿಸಿಕೊಂಡೇ ಎಂದು ರಚಿತಾ ರಾಮ್ ಹೇಳುತ್ತಾರೆ.

ಪುಷ್ಪಕ ವಿಮಾನದಲ್ಲಿ ರಚಿತಾ ರಾಮ ಅವರದ್ದು ಚಿಕ್ಕ ಪಾತ್ರ, ಆದರೆ ಅವರೇ ಹೇಳುವಂತೆ ತಮ್ಮ ಪಾತ್ರ ಕಥೆಯಲ್ಲಿ ಪರಿಣಾಮಕಾರಿಯಾಗಿದೆ, ನಾನು ಈ ಹಿಂದೆ ಅಭಿನಯಿಸಿರುವ ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿದೆ. ಈ ಚಿತ್ರದ ಪಾತ್ರ ನನ್ನ ಮನಸ್ಸಿನ ಮೇಲೆ ತುಂಬಾ ಗಾಢ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.

ರಚಿತಾ ಒಳ್ಳೆಯ ಕಲಾವಿದೆ ಎಂದು ಸಿನಿಮಾ ವೀಕ್ಷಿಸಿದ ಮೇಲೆ ಜನ ಹೇಳುತ್ತಾರೆ ಎಂದು ರಚಿತಾ ತಿಳಿಸಿದ್ದಾರೆ. ನಾನು ಪೊಲೀಸ್ ಪಡೆ ಇಲ್ಲವೇ ವಕೀಲೆಯಾಗಬೇಕೆಂಬುದು ನನ್ನ ಪೋಷಕರ ಬಯಕೆಯಾಗಿತ್ತು. ಆದರೆ ದಿನಕಳೆದಂತೆ  ಕೆಲ ಸಮಸ್ಯೆಗಳಿಗಾಗಿ ನಮ್ಮ ಕುಟುಂಬ ವಕೀಲರನ್ನು ಭೇಟಿಯಾಗುವ ಸಂದರ್ಭ ಬಂತು, ದುರಾದೃಷ್ಟವಶಾತ್ ಆ ವಕೀಲ ನಮ್ಮ ಬಳಿ ಹಣೆ ತೆಗೆದು ಕೊಂಡು ನಮಗೆ ದ್ರೋಹ ಮಾಡಿದ. ಅದಾದ ನಂತರ ನಮ್ಮ ತಂದೆ ಕಪ್ಪು ಕೋಟು ಧರಿಸುವ ವಕೀಲರನ್ನು ದ್ವೇಷಿಸಲು ಆರಂಭಿಸಿದರು ಎಂದು ರಚಿತಾ ತಿಳಿಸಿದ್ದಾರೆ.

ಅಂದಿನಿಂದ ವಕೀಲ ವೃತ್ತಿಯ ಬಗ್ಗೆ ಇದ್ದ ನಂಬಿಕೆ ಕಳೆದು ಹೋಯಿತು. ಪುಷ್ಪಕ ವಿಮಾನದಲ್ಲಿ ಈ ಪಾತ್ರದ ಬಗ್ಗೆ ಕೇಳಿದಾಗ ನನಗೆ ತುಂಬಾ ಕುತೂಹಲವಾಗಿತ್ತು, ಆ ಪಾತ್ರವನ್ನು ನಾನು ನನ್ನ ಕಣ್ಮುಂದೆ ಕಲ್ಪಿಸಿಕೊಳ್ಳುತ್ತಿದೆ ಎನ್ನುತ್ತಾರೆ ರಚಿತಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.