ಸಿನಿಮಾ ಸುದ್ದಿ

ಇದೆ ಮೊದಲ ಬಾರಿಗೆ ನೋಟ ಬದಲಾಯಿಸಿಕೊಳ್ಳುವುದಕ್ಕೆ ಒಪ್ಪಿದ್ದು: ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅದೃಷ್ಟದಲ್ಲಿ ನಂಬುತ್ತಾರೆ ಆದರೆ ಅದು ಆಕಸ್ಮಿಕವಾಗಿ ದಕ್ಕುವುದಿಲ್ಲ ಬದಲಾಗಿ ತಾವು ತೊಡಗಿಸಿಕೊಳ್ಳುವ ಯೋಜನೆಗಳಲ್ಲಿ ಶ್ರಮ ಮತ್ತು ಶಿಸ್ತಿನ ಕೆಲಸಗಳಿಂದ ಭವಿಷ್ಯದಲ್ಲಿ ನಗು

ಇದೆ ಮೊದಲ ಬಾರಿಗೆ ನೋಟ ಬದಲಾಯಿಸಿಕೊಳ್ಳುವುದಕ್ಕೆ ಒಪ್ಪಿದ್ದು: ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ
Published On :
ಬೆಂಗಳೂರು: ರಕ್ಷಿತ್ ಶೆಟ್ಟಿ ಅದೃಷ್ಟದಲ್ಲಿ ನಂಬುತ್ತಾರೆ ಆದರೆ ಅದು ಆಕಸ್ಮಿಕವಾಗಿ ದಕ್ಕುವುದಿಲ್ಲ ಬದಲಾಗಿ ತಾವು ತೊಡಗಿಸಿಕೊಳ್ಳುವ ಯೋಜನೆಗಳಲ್ಲಿ ಶ್ರಮ ಮತ್ತು ಶಿಸ್ತಿನ ಕೆಲಸಗಳಿಂದ ಭವಿಷ್ಯದಲ್ಲಿ ನಗು ತಂದುಕೊಡುತ್ತದೆ ಎನ್ನುತ್ತಾರೆ. 'ಗೋದಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಯಶಸ್ಸಿನ ನಂತರ ಈಗ ತಮ್ಮ ಗೆಳೆಯ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಬಿಡುಗಡೆಗೆ ಎದುರು ನೋಡುತ್ತಿದ್ದು, ಇದೆ ಶುಕ್ರವಾರ ಬಿಡುಗಡೆಯಾಗಲಿದೆ. 
ಇದು ಯವ್ವನದ ಸಿನೆಮಾ ಎನ್ನುವ ರಕ್ಷಿತ್ ತಮ್ಮ ಆಯ್ಕೆಯ ಸಿನೆಮಾಗಳು ಕ್ಲಾಸ್ ಮತ್ತು ಮಾಸ್ ಸಿನೆಮಾಗಳ ಸೇತುವೆ ಎಂದು ನಂಬಿದ್ದಾರೆ. "ನನಗೆ, ನಿಜವಾದ ಖುಷಿ ಇರುವುದು ಸಾಮಾನ್ಯವಾದದ್ದನ್ನು ತೆಗೆದುಕೊಂಡು ಅದನ್ನು ಕಮರ್ಷಿಯಲ್ ಮತ್ತು ರಿಯಾಲಿಟಿ ಸಿನೆಮಾಗಳ ನಡುವೆ ಸಮತೋಲನ ಮಾಡಿ ಜನಕ್ಕೆ ಒಪ್ಪಿಗೆಯಾಗುವಂತೆ ಮಾಡುವುದು" ಎನ್ನುತ್ತಾರೆ. 
ಇತರ ಭಾಷೆಗಳ ಸಿನೆಮಾಗಳ ಗುಣಮಟ್ಟಕ್ಕೆ ಸವಾಲೆಸೆಯುವಂತಹ ಸಿನೆಮಾಗಳನ್ನು ಮಾಡುವುದು ತಮ ಗುರಿ ಎನ್ನುವ ನಟ "ನನಗೆ ಮಸಾಲ ಸಿನೆಮಾಗಳು ಅಷ್ಟು ಒಪ್ಪಿತವಲ್ಲ ಆದರೆ ಅವಕ್ಕೆ ವಿರುದ್ಧವೂ ಇಲ್ಲ. ಕಮರ್ಷಿಯಲ್ ಸಿನೆಮಾಗಳಿಗಿರುವ ಕ್ರೇಜ್ ಯಾವೊತ್ತಿಗೂ ಕಡಿಮೆಯಾಗುವುದಿಲ್ಲ ಆದರೆ ನಾನು ನಂಬುವುದು, ಇತರ ಭಾಷೆಗಳ ಸಿನೆಮಾಗಳ ಜೊತೆಗೆ ಸ್ಪರ್ಧಿಸಬಲ್ಲ ರಿಯಾಲಿಟಿಗೆ ಹತ್ತಿರವಾದ ಸಿನೆಮಾಗಳನ್ನು" ಎನ್ನುತ್ತಾರೆ ರಕ್ಷಿತ್. 
'ಕಿರಿಕ್ ಪಾರ್ಟಿ' ಕಥೆಯನ್ನು ತಾವೇ ಬರೆದಿರುವುದಾಗಿ ತಿಳಿಸುವ ರಕ್ಷಿತ್, ಆದರೆ ಇಡೀ ತಂಡ ಅದನ್ನು ಅದ್ಭುತವಾಗಿ ರೂಪಿಸುವುದಕ್ಕೆ ಕೆಲಸ ಮಾಡಿದೆ ಎನ್ನುತ್ತಾರೆ,. "ನಾನು ಮತ್ತು ರಿಷಬ್ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ಇಬ್ಬರು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಯಾರಿಗಾದರೂ ಸಂಶಯ ಇದ್ದಾಗ ನಾನು ಜೊತೆಗೆ ಇರುತ್ತಲೇ ಇದ್ದೆ ಆದುದರಿಂದ ಸಿನೆಮಾ ಉತ್ತಮವಾಗಿ ಮೂಡಿಬರಲು ಸಾಧ್ಯವಾಯಿತು" ಎನ್ನುತ್ತಾರೆ. 
'ಕಿರಿಕ್ ಪಾರ್ಟಿ'ಯಲ್ಲಿ ತಮ್ಮದು ಕಾಲೇಜು ವಿದ್ಯಾರ್ಥಿಯ ಪಾತ್ರ ಎಂದು ತಿಳಿಸುವ ರಕ್ಷಿತ್, ತಮ್ಮ ನೋಟವನ್ನು ಬದಲಿಸಿಕೊಳ್ಳಲು ಇದೆ ಮೊದಲ ಬಾರಿಗೆ ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.