ಸಿನಿಮಾ ಸುದ್ದಿ

ಬಿಎಂಸಿಯ ಬಯಲು ಶೌಚ ಮುಕ್ತ ಅಭಿಯಾನಕ್ಕೆ ಸಲ್ಮಾನ್ ಖಾನ್ ರಾಯಭಾರಿ

ಬ್ರಿಹಾನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಾರಂಭಿಸಿರುವ ಬಯಲು ಶೌಚ ಮುಕ್ತ ಅಭಿಯಾನಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ.

ಬಿಎಂಸಿಯ ಬಯಲು ಶೌಚ ಮುಕ್ತ ಅಭಿಯಾನಕ್ಕೆ ಸಲ್ಮಾನ್ ಖಾನ್ ರಾಯಭಾರಿ
ಸಲ್ಮಾನ್ ಖಾನ್
Published On :
ಮುಂಬೈ: ಬ್ರಿಹಾನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಾರಂಭಿಸಿರುವ ಬಯಲು ಶೌಚ ಮುಕ್ತ ಅಭಿಯಾನಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. 
ಅಭಿಯಾನಕ್ಕೆ ರಾಯಭಾರಿಯಾಗುವಂತೆ ಬಿಎಂಸಿ ಸಲ್ಮಾನ್ ಖಾನ್ ಅವರನ್ನು ರಾಯಭಾರಿಯಾಗುವಂತೆ ಆಹ್ವಾನಿಸಿತ್ತು. ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿರುವ ಬಯಲು ಶೌಚ ಮುಕ್ತ ಅಭಿಯಾನವನ್ನು ಪ್ರಚಾರ ಮಾಡಲಿದ್ದಾರೆ. ಬಯಲು ಶೌಚ ಮುಕ್ತ ಅಭಿಯಾನದ ಭಾಗವಾಗಲಿರುವ ಸಲ್ಮಾನ್ ಖಾನ್ ಹೊಸ ವಿನ್ಯಾಸದ 5 ಸಂಚಾರಿ ಶೌಚಾಲಯಗಳನ್ನು ಅಭಿಯಾನಕ್ಕಾಗಿ ಕೊಡುಗೆ ನೀಡುವುದಾಗಿ ಘೋಷಿಸಿದ್ದಾರೆ. 
ಬೀಯಿಂಗ್ ಹ್ಯೂಮನ್ ಫೌಂಡೇಷನ್ ಮೂಲಕ ಅಭಿಯಾನದ ಭಾಗವಾಗಿರುವುದಕ್ಕೆ ಸಲ್ಮಾನ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. "ಮುಂಬೈ ನಂತಹ ನಗರಗಳಲ್ಲಿ ಬಯಲು ಶೌಚಾಲಯ ಇರುವುದು ನಿಜಕ್ಕೂ ಬೇಸರದ ಸಂಗತಿ, ಬಯಲು ಶೌಚ ಮುಕ್ತ ಅಭಿಯಾನ ಯಶಸ್ವಿಯಾಗಲು ಶ್ರಮಿಸುವುದಾಗಿ ಸಲ್ಮಾನ್ ಖಾನ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.