ತಮಿಳು ನಿರ್ದೇಶಕ ರಾಜೀವ್ ಮೆನನ್ ಚಿತ್ರದಲ್ಲಿ ಶ್ರುತಿ ಹರಿಹರನ್
ಲೂಸಿಯಾ ಹುಡಿಗಿ ಶ್ರುತಿ ಹರಿಹರನ್, ವಿವಿಧ ನಿರ್ದೇಶಕರ ಜೊತೆಗೆ ವಿವಿಧ ಪಾತ್ರಗಳಲ್ಲಿ ನಟಿಸಲು ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡವರು. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ತಳವೂರಿರುವ ನಟಿ,

Published On :
ಬೆಂಗಳೂರು: ಲೂಸಿಯಾ ಹುಡಿಗಿ ಶ್ರುತಿ ಹರಿಹರನ್, ವಿವಿಧ ನಿರ್ದೇಶಕರ ಜೊತೆಗೆ ವಿವಿಧ ಪಾತ್ರಗಳಲ್ಲಿ ನಟಿಸಲು ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡವರು. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ತಳವೂರಿರುವ ನಟಿ, ಬೇರೆ ಭಾಷೆಗಳ ಚಿತ್ರರಂಗದಲ್ಲಿ ಕೂಡ ಅವಕಾಶಗಳನ್ನು ಅರಸುತ್ತಿದ್ದಾರೆ.
ಇತ್ತೀಚೆಗಷ್ಟೇ 'ಉಪ್ಪಿ ಮತ್ತೆ ಹುಟ್ಟಿ ಬಾ-ಇಂತಿ ಪ್ರೇಮ' ಚಿತ್ರೀಕರಣ ಮುಗಿಸಿರುವ ಶ್ರುತಿ, ೨೦೧೬ ಅವರ ವೃತ್ತಿಜೀವನದ ಪಾಲಿಗೆ ಅತ್ಯುತ್ತಮ ವರ್ಷ. ಅಂತಹುದೇ ಉತ್ಸಾಹಿ ೨೦೧೭ನ್ನು ಕೂಡ ಅವರು ನಿರೀಕ್ಷಿಸುತ್ತಿದ್ದಾರೆ.
ಪ್ರಕಾಶ್ ಜಯರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಲನಚಿತ್ರದಲ್ಲಿ ದರ್ಶನ್ ಎದುರು ಕೂಡ ನಟಿಸುವ ಅವಕಾಶ ಪಡೆದಿರುವ ನಟಿ, ಫೆಬ್ರವರಿಯಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ನಿರ್ದೇಶಕ ರಾಜೀವ್ ಮೆನನ್ ಜೊತೆಗೆ ತಮಿಳು ಚಿತ್ರದಲ್ಲಿ ಕೂಡ ನಟಿಸುತ್ತಿದ್ದು, ಅಲ್ಲಿ ಜಿವಿ ಪ್ರಕಾಶ್ ಎದುರು ನಟಿಸುತ್ತಿದ್ದಾರೆ. ಈ ಸಿನೆಮಾ ಮುಂದಿನ ವರ್ಷ ಜನವರಿಯಿಂದ ಚಿತ್ರೀಕರಣಗೊಳ್ಳಲಿದೆ.
"ನಾನು ಕೊನೆಯ ತಮಿಳು ಸಿನೆಮಾದಲ್ಲಿ ಅರ್ಜುನ್ ಸರ್ಜಾ ಜೊತೆಗೆ ನಟಿಸಿದ್ದೆ. ಇದು ದ್ವಿಭಾಷಾ ಚಿತ್ರ, ಕನ್ನಡ ಮತ್ತು ತಮಿಳಿನದ್ದು, ಕಳೆದ ವರ್ಷದ ಪ್ರಾರಂಭದಲ್ಲಿ ಚಿತ್ರೀಕರಣವಾಗಿತ್ತು" ಎನ್ನುತ್ತಾರೆ ಶ್ರುತಿ.
ತಮಿಳು ಭಾಷೆಯನ್ನು ತಾವು ಚೆನ್ನಾಗಿ ಬಲ್ಲವರಾಗಿದ್ದರು, ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆಯುವುದು ಕಷ್ಟದ ಕೆಲಸ ಎನ್ನುವ ನಟಿ ಶ್ರುತಿ "ನಾನು ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದೇನೆ, ಆದರೆ ಕಾಲಿವುಡ್ ಪ್ರವೇಶಿಸುವುದು ಸುಲಭವಲ್ಲ. ನಾನು ಬಾಲಾಜಿ ಶಕ್ತಿವೇಲು ಸಿನೆಮಾದ ಭಾಗವಾಗಿದ್ದೆ, ಆದರೆ ಅದು ತಡವಾಗುತ್ತಿದೆ. ಆದರೆ ರಾಜೀವ್ ಮೆನನ್ ಅವರ ಚಿತ್ರವನ್ನು ಎದುರು ನೋಡುತ್ತಿದ್ದೆ. ಅವರ ಚಿತ್ರದಲ್ಲಿ ನಟಿಸುವುದು ನನ್ನ ಮಹದಾಸೆಗಳಲ್ಲಿ ಒಂದಾಗಿತ್ತು. ನಾನು ಅವರ ಸಿನೆಮಾಗಳ ಅತಿ ದೊಡ್ಡ ಅಭಿಮಾನಿ. 'ಕಂಡುಕೊಂಡೈನ್ ಕಂಡುಕೊಂಡೈನ್' ಮತ್ತು 'ಮಿನ್ಸರ ಕಣವು' ಸಿನೆಮಾಗಳನ್ನು ನೋಡಿಕೊಂಡು ಬೆಳೆದವಳು. ಅವರ ಜೊತೆ ಕೆಲಸ ಮಾಡುವುದಿರಲಿ, ಅವರನ್ನು ಸಿನೆಮಾ ಸೆಟ್ ನಲ್ಲಿ ಕಂಡರೆ ಸಾಕು ನನಗೆ ಉತ್ಸಾಹ ಮೂಡುತ್ತದೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


