ಪ್ರೀತಿಯ ಪಯಣ ಮುಂದುವರೆಸಲಿರುವ 'ಮುಗುಳು ನಗೆ'
ಕಳೆದ ಬಾರಿ ಯೋಗರಾಜ್ ಭಟ್ ಮತ್ತು ಗಣೇಶ್ ಒಂದಾಗಿದ್ದಾಗ, 'ಮುಂಗಾರು ಮಳೆ' ಮತ್ತು 'ಗಾಳಿಪಟ' ಸಿನೆಮಾಗಳ ಮೂಲಕ ಅಸಂಖ್ಯಾತ ಹೃದಯಗಳನ್ನು ಗೆಲ್ಲಲು ಯಶಸ್ವಿಯಾಗಿದ್ದರು.

Published On :
ಬೆಂಗಳೂರು: ಕಳೆದ ಬಾರಿ ಯೋಗರಾಜ್ ಭಟ್ ಮತ್ತು ಗಣೇಶ್ ಒಂದಾಗಿದ್ದಾಗ, 'ಮುಂಗಾರು ಮಳೆ' ಮತ್ತು 'ಗಾಳಿಪಟ' ಸಿನೆಮಾಗಳ ಮೂಲಕ ಅಸಂಖ್ಯಾತ ಹೃದಯಗಳನ್ನು ಗೆಲ್ಲಲು ಯಶಸ್ವಿಯಾಗಿದ್ದರು. ಈಗ 'ಮುಗುಳು ನಗೆ' ಸಿನೆಮಾದ ಮೂಲಕ ಈ ಜೋಡಿ ಮತ್ತೆ ಒಂದಾಗಿರುವುದು ಗಾಂಧಿನಗರದಲ್ಲಿ ಸಿನಿರಸಿಕರ ನಡುವೆ ಸಂಚಲನ ಮೂಡಿಸಿದೆ.
ಈ ಜೋಡಿಯಿಂದ ಈ ಬಾರಿ ಕೂಡ ರೋಮ್ಯಾಂಟಿಕ್ ಚಿತ್ರವನ್ನು ಪ್ರೇಕ್ಷಕರು ನಿರೀಕ್ಷಿಸುತ್ತಿರುವುದು ನಿಜ. ಶೀರ್ಷಿಕೆ ಅಂತಿಮಗೊಳಿಸಿದ ನಂತರ ಈಗ ತಂಡ ಮೂವರು ನಾಯಕನಟಿಯರನ್ನು ಕೂಡ ಅಂತಿಮಗೊಳಿಸಿದೆ.
ಅಮೂಲ್ಯ, ಆಶಿಕಾ ಮತ್ತು ನಿಖಿತಾ ನಾರಾಯಣ್ ಮುಖ್ಯ ನಾಯಕನಟಿಯರಾಗಿ ನಟಿಸುತ್ತಿದ್ದರೆ, 'ರೋಮಿಯೋ' ಖ್ಯಾತಿಯ ಭಾವನಾ ರಾವ್ ಅತಿಥಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
'ಮುಗುಳು ನಗೆ'ಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಪ್ರೀತಿಯ ವಿಭಿನ್ನ ಹಂತಗಳನ್ನು ಹೇಳಲಿದ್ದು, 'ನಗುವಿನ' ಮೇಲೆಯೇ ಸಿನೆಮಾ ಚಲಿಸಲಿದೆಯಂತೆ. "ಇಂದು, ಪ್ರೀತಿಯ ಬಗೆಗೆ ಪುರುಷನ ದೃಷ್ಟಿಕೋನ ವಯಸ್ಸಿಗೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ. ಇದನ್ನು ಈ ಸಿನೆಮಾದಲ್ಲಿ ನಾವು ಹುಡುಕಲಿದ್ದೇವೆ" ಎನ್ನುತ್ತವೆ ಚಿತ್ರತಂಡದ ಮೂಲಗಳು.
ಈ ಚಿತ್ರದಲ್ಲಿ ಯಾವುದೇ ಪ್ರಮುಖ ಖಳನಾಯಕನಿರದೆ ಇರುವುದು ವಿಶೇಷ. ಕೆಲವು ಪರಿಸ್ಥಿತಿಗಳೇ ಖಳನಾಯಕನ ಪಾತ್ರ ವಹಿಸಲಿವೆಯಂತೆ. "ಸಿನೆಮಾದಲ್ಲಿ ಯಾವುದೇ ವಿಲನ್ ಭೌತಿಕವಾಗಿ ಕಾಣಿಸಿಕೊಳ್ಳುವುದಿಲ್ಲ" ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಗಣೇಶ್ ಜೊತೆಗೆ ಇದು ಅಮೂಲ್ಯ ಅವರಿಗೆ ನಾಲ್ಕನೇ ಸಿನೆಮಾ. ನಿರ್ದೇಶಕ-ನಟ ಜೋಡಿ ನೋಡಿ ಈ ಸಿನೆಮಾ ಆರಿಸಿಕೊಂಡೆ ಎನ್ನುವ ನಟಿ "ಈ ಇಬ್ಬರು ತಮ್ಮ ಹಿಂದಿನ ಸಿನೆಮಾಗಳ ಮೂಲಕ ದಾಖಲೆ ಬರೆದಿದ್ದಾರೆ. ಈಗ ಕಥೆಯನ್ನು ಕೇಳಿದ ಮೇಲೆ ಭಟ್ ಅವರಿಂದ ಅಧ್ಭುತ ರೋಮ್ಯಾನ್ಸ್ ಸಿನೆಮಾ ಮೂಡಿಬರಲಿದೆ" ಎನ್ನುತ್ತಾರೆ ಅಮೂಲ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


