ಸಿನಿಮಾ ಸುದ್ದಿ

ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಭಾವುಕರಾದ ನಟಿ ಕರೀನಾ

ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್ 2016ರಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಭಾವುಕರಾಗಿರುವ ಘಟನೆ...

ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಭಾವುಕರಾದ ನಟಿ ಕರೀನಾ
ಲ್ಯಾಕ್ಮಿ ಫ್ಯಾಷನ್‌ ವೀಕ್‌ನಲ್ಲಿ ನಟಿ ಕರೀನಾ
Published On :

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್ 2016ರಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಭಾವುಕರಾಗಿರುವ ಘಟನೆ ನಡೆದಿದೆ.

ಫ್ಯಾಷನ್ ವೀಕ್ ಭಾಗಿಯಾಗಿದ್ದ ಕರೀನಾ ಕಪೂರ್ ಅವರು ಸಬ್ಯಸಾಚಿ ವಿನ್ಯಾಸ ಮಾಡಿದ್ದ ಧಿರಸನ್ನು ಧರಿಸಿ ರ್ಯಾಂಪ್ ಮೇಲೆ ವಾಕ್ ಮಾಡಿದ್ದರು. ನಂತರ ಕರೀನಾ ಅವರು ಭಾವುಕರಾಗಿಯೇ ಮಾತನಾಡಲು ಆರಂಭಿಸಿದ್ದರು.

ಈ ಕ್ಷಣ ನನ್ನ ಜೀವನದಲ್ಲಿ ಎಂದಿಗೂ ನೆನಪಿನಲ್ಲಿರುತ್ತದೆ. ಇಂದು ನಾನು ರ್ಯಾಂಪ್ ಮೇಲೆ ಒಬ್ಬಳೇ ವಾಕ್ ಮಾಡುತ್ತಿಲ್ಲ. ನನ್ನ ಜೊತೆಗೆ ನನ್ನ ಮಗು ಕೂಡ ವಾಕ್ ಮಾಡುತ್ತಿದೆ. ಮೊದಲ ಬಾರಿಗೆ ಇಬ್ಬರೂ ರ್ಯಾಂಪ್ ಮೇಲೆ ಬಂದಿದ್ದೇವೆ. ಇದೊಂದು ಅತ್ಯಂತ ವಿಶೇಷ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಸಬ್ಯಸಾಚಿಯವರು ವಿನ್ಯಾಸ ಮಾಡಿದ್ದ ಡ್ರೆಸ್ ನ್ನು ಹಾಕಿ ಈ ಹಿಂದೆ ಎಂದಿಗೂ ರ್ಯಾಂಪ್ ಮೇಲೆ ವಾಕ್ ಮಾಡಿರಲಿಲ್ಲ. ಈ ಹಿಂದೆ ಎಂದಿಗೂ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿಲ್ಲ. ಆದರೆ, ಇಂದು ಅವರು ವಿನ್ಯಾಸ ಮಾಡಿದ್ದ ಬಟ್ಟೆಯನ್ನು ತೊಟ್ಟು ಮೊದಲ ಬಾರಿಗೆ ನನ್ನ ಮಗುವೊಂದಿಗೆ ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದೇನೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ಇತಿಹಾಸವಾಗಲಿದೆ.

ನಿಜ ಹೇಳಬೇಕೆಂದರೆ ಪ್ರಸ್ತುತ ನಾನು ಭಾವುಕಳಾಗಿ ಮಾತನಾಡುತ್ತಿದ್ದೇನೆ. ಈ ಕ್ಷಣವನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಸಬ್ಯಸಾಚಿಯಲವರು ಕೇವಲ ವಿನ್ಯಾಸಕಾರರಲ್ಲ ಅವರು ಕಲೆಗಾರರು. ಇಂತಹ ಕಲೆಗಾರರು ವಿನ್ಯಾಸವನ್ನು ನಾನು ಗೌರವಿಸುತ್ತೇನೆಂದು ಹೇಳಿದ್ದಾರೆ.

ಕರೀನಾ ಕಪೂರ್ ಮೊದಲ ಬಾರಿಗೆ ತಮ್ಮ ಮಗುವೊಂದಿಗೆ ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದ ಕ್ಷಣಗಳನ್ನು ಸಹೋದರಿ ಕರೀಷ್ಮಾ ಕಪೂರ್ ಫೋಟೋ ಹಿಡಿಯುವ ಮೂಲಕ ಸೆರೆ ಹಿಡಿಯುತ್ತಿದ್ದರು. ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆ, ಕಾಜಲ್ ಅಗರ್ವಾಲ್, ನಿರ್ಮಾಪಕಿ-ನಿರ್ದೇಶಕಿ ದಿವ್ಯಾ ಕುಮಾರ್ ಖೋಸ್ಲಾ ಹಾಗೂ ಇನ್ನಿತರೆ ಸೆಲೆಬ್ರಿಟಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.