ಸಿನಿಮಾ ಸುದ್ದಿ

ಸೆಪ್ಟೆಂಬರ್ ನಲ್ಲಿ ಭಾರತಕ್ಕ ಭೇಟಿ ನೀಡಲಿರುವ 'ಹ್ಯಾರಿ ಪಾಟರ್' ಖ್ಯಾತಿಯ ಅಫ್ಶಾನ್ ಆಜಾದ್

'ಹ್ಯಾರಿ ಪಾಟರ್' ಖ್ಯಾತಿಯ ನಟಿ ಅಫ್ಶಾನ್ ಆಜಾದ್ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಹೈದರಾಬಾದ್ ಕಾಮಿಕ್ ಕಾನ್-2016 ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತಕ್ಕೆ ಬರಲಿದ್ದಾರೆ.

ಸೆಪ್ಟೆಂಬರ್ ನಲ್ಲಿ ಭಾರತಕ್ಕ ಭೇಟಿ ನೀಡಲಿರುವ 'ಹ್ಯಾರಿ ಪಾಟರ್' ಖ್ಯಾತಿಯ ಅಫ್ಶಾನ್ ಆಜಾದ್
'ಹ್ಯಾರಿ ಪಾಟರ್' ಖ್ಯಾತಿಯ ನಟಿ ಅಫ್ಶಾನ್ ಆಜಾದ್
Published On :
ಹೈದರಾಬಾದ್: 'ಹ್ಯಾರಿ ಪಾಟರ್' ಖ್ಯಾತಿಯ ನಟಿ ಅಫ್ಶಾನ್ ಆಜಾದ್ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಹೈದರಾಬಾದ್ ಕಾಮಿಕ್ ಕಾನ್-2016 ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತಕ್ಕೆ ಬರಲಿದ್ದಾರೆ. ಇದು ಭಾರತಕ್ಕೆ ಮೊದಲ ಭೇಟಿಯಾಗಿರುವುದರಿಂದ ಇಂಗ್ಲಿಷ್ ನಟಿ ಉತ್ಸುಕರಾಗಿದ್ದಾರೆ. 
ಬಾಂಗ್ಲಾದೇಶಿ ಮೂಲದ ಅಫ್ಶಾನ್, ವಿಶೇಷ ಚರ್ಚೆಗಳಲ್ಲಿ ಭಾಗವಹಿಸಿ, ಪೋಸ್ಟರ್ ಗಳಿಗೆ ಸಹಿಮಾಡಿ, ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಎರಡು ದಿನದ ಕಾಮಿಕ್ ಕಾನ್ ಸಮಾವೇಶ ಹೈದರಾಬಾದ್ ನ ಹೈಟೆಕ್ಸ್ ಪ್ರದರ್ಶನ ಕೇಂದ್ರದಲ್ಲಿ ಸೆಪ್ಟೆಂಬರ್ 24-25 ರಂದು ನಡೆಯಲಿದೆ.
"ಹೈದರಾಬಾದ್ ಕಾಮಿಕ್ ಕಾನ್ ನಲ್ಲಿ ನನ್ನ ಅಭಿಮಾನಿಗಳನ್ನು ನೋಡಲು ಭಾರತಕ್ಕೆ ಭೇಟಿ ನೀಡಲು ಉತ್ಸುಕಳಾಗಿದ್ದೇನೆ. ಇದು ಅದ್ಭುತ ಕಾರ್ಯಕ್ರಮವಾಗಲಿದೆ ಮತ್ತು ನಿಮ್ಮನ್ನೆಲ್ಲ ಅಲ್ಲಿ ನೋಡಲಿದ್ದೇನೆ" ಎಂದು ಅಫ್ಶಾನ್ ಹೇಳಿದ್ದಾರೆ. 
'ಹ್ಯಾರಿ ಪಾಟರ್' ಸರಣಿ ಸಿನೆಮಾಗಳ ಐದು ಸಿನೆಮಾಗಳಲ್ಲಿ ಪದ್ಮಾ ಪಾಟೀಲ್ ಪಾತ್ರವನ್ನು ಅಫ್ಶಾನ್ ನಿರ್ವಹಿಸಿದ್ದರು. ಅವರು ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ ನೆಲೆಸಿದ್ದಾರೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.