ಸಿನಿಮಾ ಸುದ್ದಿ

ಮೇ ತಿಂಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 2 ಚಿತ್ರಗಳು ತೆರೆಗೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬುಗುರು ಚಿತ್ರ ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದು ಬಳಿಕ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ...

ಮೇ ತಿಂಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 2 ಚಿತ್ರಗಳು ತೆರೆಗೆ
ಗಣೇಶ್
Published On :

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬುಗುರು ಚಿತ್ರ ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದು ಬಳಿಕ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ.

ಇದೀಗ 2016 ಗಣೇಶ್ ಅವರಿಗೆ ಅದೃಷ್ಟದ ವರ್ಷವಾದಂತಿದೆ. ಇದೇ ಮೇ ತಿಂಗಳಿನಲ್ಲಿ ಅವರ ನಟನೆಯ ಎರಡೆರಡು ಚಿತ್ರಗಳು ತೆರೆಗೆ ಬರುವ ಸೂಚನೆ ನೀಡವೆ.

2014ರಲ್ಲೇ ಅಧಿಕೃತವಾಗಿ ಲಾಂಚ್ ಆಗಿದ್ದ ಪಿಸಿ ಶೇಖರ್ ನಿರ್ದೇಶನದ ಸ್ಟೈಲ್ ಕಿಂಗ್ ಚಿತ್ರದ ಬಿಡುಗಡೆ ದಿನಾಂಕ ಮೇ 6ಕ್ಕೆ ನಿಗದಿಯಾಗಿದೆ. ಇನ್ನು ಜೂಮ್ ಚಿತ್ರದ ನಿರ್ಮಾಪಕರು ಸಹ ಚಿತ್ರವನ್ನು ಮೇ 20ರಂದು ತೆರೆಗೆ ತರುವ ಸೂಚನೆಗಳನ್ನು ನೀಡಿದ್ದಾರೆ.

ಇನ್ನು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಗಣೇಶ್ ಸೂಪರ್ ಮೀನಿಟ್ ನಂತರ ಗಂಡು ಎಂದರೆ ಗಂಡು ಚಿತ್ರದಲ್ಲಿ ನಟಿಸಲಿದ್ದಾರೆ. ಗಣೇಶ್ ನಟನೆ ನಾಲ್ಕು ಚಿತ್ರಗಳು ಶೂಟಿಂಗ್ ಮುಗಿಸಿವೆ. ಅದರಲ್ಲಿ ಸ್ಟೈಲ್ ಕಿಂಗ್ ಹಾಗೂ ಜೂಮ್ ತೆರೆಗೆ ಬರಲು ಸಿದ್ಧವಾಗಿದ್ದು, ಇನ್ನು ಪಟಾಕಿ ಹಾಗೂ ಮುಂಗಾರು ಮಳೆ2 ಚಿತ್ರಗಳ ಪೋಸ್ಟ್ ಪ್ರೋಡೆಕ್ಷನ್ ಕೆಲಸಗಳು ನಡೆಯುತ್ತಿವೆ.

ಒಂದೇ ತಿಂಗಳಲ್ಲಿ ಗಣೇಶ್ ನಟನೆಯ ಎರಡೆರಡು ಚಿತ್ರಗಳು ತೆರೆಗೆ ಬರುತ್ತಿರುವುದು ಇದೀಗ ನಿರ್ಮಾಪಕರಿಗೆ ತಲೆ ನೋವಾದಂತಿದೆ. ಸದ್ಯ ಮೊದಲು ತೆರೆಗೆ ಬರುತ್ತಿರುವ ಸ್ಟೈಲ್ ಕಿಂಗ್ ಚಿತ್ರದ ನಿರ್ದೇಶಕ ಪಿಸಿ ಶೇಖರ್ ಜೂಮ್ ಚಿತ್ರದ ನಿರ್ದೇಶಕ ನಿರ್ಮಾಪಕ ಪ್ರಶಾಂತ್ ರಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಸ್ಟೈಲ್ ಕಿಂಗ್ ಚಿತ್ರವನ್ನು ತೆರೆಗೆ ತರುವುದಾಗಿ ಘೋಷಿಸಿದ್ದೇನೆ ಆದರೂ ಜೂಮ್ ಚಿತ್ರವನ್ನು ಅದೇ ತಿಂಗಳಲ್ಲಿ ತೆರೆಗೆ ತರುತ್ತಿರುವುದು ನನ್ನ ತಾಳ್ಮೆ ಕೆಡೆಸುವಂತಿದೆ ಎಂದರು. ಇನ್ನು ಗಣೇಶ್ ಅವರನ್ನು ಕೇಳಿದರೆ ನಾನೊಬ್ಬ ನಟ ಚಿತ್ರದ ಬಿಡುಗಡೆ ದಿನಾಂಕಗಳನ್ನು ತೀರ್ಮಾನಿಸುವ ಅಧಿಕಾರ ನನಗಿಲ್ಲ ಎಂದು ಹೇಳಿರುವುದಾಗಿ ಶೇಖರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.