ಸಿನಿಮಾ ಸುದ್ದಿ

ಪುತ್ರಿ ಶೃತಿ ಜೊತೆ ನಟಿಸಲಿರುವ ಕಮಲ ಹಾಸನ್; ಏಪ್ರಿಲ್ ೨೯ ರಿಂದ ಚಿತ್ರೀಕರಣ

ಇನೂ ಹೆಸರಿಡದ ತಮಿಳು ಚಲನಚಿತ್ರದಲ್ಲಿ ಖ್ಯಾತ ನಟ ಕಮಲ ಹಾಸನ್ ತಮ್ಮ ಮಗಳೊಂದಿಗೆ ನಟಿಸಲಿದ್ದು, ಈ ತಿಂಗಳ ಕೊನೆಯ ಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ಪುತ್ರಿ ಶೃತಿ ಜೊತೆ ನಟಿಸಲಿರುವ ಕಮಲ ಹಾಸನ್; ಏಪ್ರಿಲ್ ೨೯ ರಿಂದ ಚಿತ್ರೀಕರಣ
ಕಮಲ ಹಾಸನ್, ಪುತ್ರಿ ಶೃತಿ ಹಾಸನ್
Published On :

ಚೆನ್ನೈ: ಇನೂ ಹೆಸರಿಡದ ತಮಿಳು ಚಲನಚಿತ್ರದಲ್ಲಿ ಖ್ಯಾತ ನಟ ಕಮಲ ಹಾಸನ್ ತಮ್ಮ ಮಗಳೊಂದಿಗೆ ನಟಿಸಲಿದ್ದು, ಈ ತಿಂಗಳ ಕೊನೆಯ ಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ಮಂಗಳವಾರ ಸಹನಟ ಆರ್ ಮಾಧವನ್ ಜೊತೆಗೆ ಟ್ವಿಟರ್ ನಲ್ಲಿ ನಡೆಸಿದ ಸಂಭಾಷಣೆಯಲ್ಲಿ ಕಮಲ ಹಾಸನ್ ಈ ವಿಷಯ ಬಹಿರಂಗಪಡಿಸಿದ್ದು, ತಮ್ಮ ಮುಂದಿನ ಸಿನೆಮಾದಲ್ಲಿ ಏಪ್ರಿಲ್ ೨೯ ರಿಂದ ಮಗಳು ಶೃತಿ ಹಾಸನ್ ಜೊತೆಗೆ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

"ಮಾಧವನ್ ಧನ್ಯವಾದಗಳು. ಎರಡನೆ ಭಾಗಕ್ಕೆ ಶುಭಾಶಯಗಳು. ಶೃತಿ ಜೊತೆಗೆ ನನ್ನ ಸಿನೆಮಾ ೨೯ಕ್ಕೆ ಪ್ರಾರಂಭವಾಗಲಿದೆ. ನೀವು ಚನ್ನೈನಲ್ಲಿ ಇರುತ್ತಿರಾ?" ಎಂದು ಕಮಲ ಹಾಸನ್ ಟ್ವೀಟ್ ಮಾಡಿದ್ದಾರೆ.

ರಾಜೀವ್ ಕುಮಾರ್ ನಿರ್ದೇಶಿಸಲಿರುವ ಈ ಸಿನೆಮಾ ಹಾಸ್ಯ ಚಿತ್ರವಾಗಿರಲಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಅಮೆರಿಕಾದಲ್ಲಿಯೇ ನಡೆಯಲಿದೆಯಂತೆ. ತಮ್ಮ ಸ್ವಂತ ನಿರ್ಮಾಣ ಸಂಸ್ಥೆ 'ರಾಜಕಮಲ್ ಫಿಲ್ಮ್ಸ್' ಅಡಿ ಕಮಲಹಾಸನ್ ಈ ಚಿತ್ರ ನಿರ್ಮಿಸಲಿದ್ದಾರಂತೆ.

ಇಳಯರಾಜ ಅವರ ಸಂಗೀತ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.