ಸಿನಿಮಾ ಸುದ್ದಿ

ಅನನ್ಯಾ ಕಾಸರವಳ್ಳಿಯವರ 'ಹರಿಕಥಾ ಪ್ರಸಂಗ'

ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ನಿರ್ದೇಶನಕ್ಕೆ ಇಳಿದಿದ್ದಾರೆ. ಯಕ್ಷಗಾನ ಸ್ತ್ರೀ ಪಾತ್ರಧಾರಿ ಕಥಾ ಹಂದರವುಳ್ಳ 'ಹರಿಕಥಾ ಪ್ರಸಂಗ'

ಅನನ್ಯಾ ಕಾಸರವಳ್ಳಿಯವರ 'ಹರಿಕಥಾ ಪ್ರಸಂಗ'
ಅನನ್ಯ ಮತ್ತು ಗಿರೀಶ್ ಕಾಸರವಳ್ಳಿ
Published On :

ಬೆಂಗಳೂರು: ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ನಿರ್ದೇಶನಕ್ಕೆ ಇಳಿದಿದ್ದಾರೆ. ಯಕ್ಷಗಾನ ಸ್ತ್ರೀ ಪಾತ್ರಧಾರಿ ಕಥಾ ಹಂದರವುಳ್ಳ 'ಹರಿಕಥಾ ಪ್ರಸಂಗ' ತನ್ನ ವ್ಯಕ್ತಿತ್ವ ಮತ್ತು ಸ್ವೀಕೃತಿಯನ್ನು ಹುಡುಕುವ ಕಥೆಯಂತೆ.

"ಸಿನೆಮಾ ನಿರ್ದೇಶನ ಧಿಡೀರ್ ನಿರ್ಧಾರ. ನನ್ನ ತಂದೆ ಮತ್ತು ಸಹೋದರ, ಸ್ಕ್ರಿಪ್ಟ್ ಲೇಖಕ ಗೋಪಾಲಕೃಷ್ಣ ಪೈ ಅವರೊಂದಿಗೆ ಮಾತುಕತೆ ನಡೆಸಿದ್ದರು. ನಾನು ಕೂಡ ಜೊತೆಗೆ ಸೇರಿಕೊಂಡೆ. ಎಲ್ಲರೂ ಕಥೆ ಇಷ್ಟ ಪಟ್ಟರು ಆಗ ಈ ಯೋಜನೆಯನ್ನು ಯಾರು ನಿರ್ದೇಶಿಸಬೇಕು ಎಂಬ ಸ್ಪರ್ಧೆ ಬಂತು. ಅಂಕಲ್ ಪೈ ನನಗೆ ಆಶೀರ್ವಾದ ಮಾಡಿದರು" ಎಂದು ವಿವರಿಸುತ್ತಾರೆ ಅನನ್ಯ.

ಅವರ ತಂದೆಯ ಮತ್ತು ಸಹೋದರನ ಸಿನೆಮಾಗಳಿಂದ ಸ್ಫೂರ್ತಿ ಪಡೆದಿದ್ದೇನೆ ಎನ್ನುವ ಅನನ್ಯ ಅವರ ಹೆಸರನ್ನು ಹೊತ್ತಿರುವುದರ ಬಗ್ಗೆ ಎಚ್ಚರಿಕೆ ಇದೆ ಎಂದು ಕೂಡ ತಿಳಿಸುತ್ತಾರೆ.

ಅನನ್ಯ ಈ ಹಿಂದೆ ಕೆಲವು ಸಿನೆಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಂದೆಯ ಸಿನೆಮಾಗಳಿಗೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿರುವುದಲ್ಲದೆ ಶಾರ್ಟ್ ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ.

ಬಸಂತ್ ಕುಮಾರ್ ಪಾಟಿಲ್ ಈ ಸಿನೆಮಾದ ನಿರ್ಮಾಪಕರಾಗಿದ್ದು, ಬೈಂದೂರು, ಕುಂದಾಪುರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಂಪಾ ಶೆಟ್ಟಿ, ಕೆ ಜಿ ಕೃಷ್ಣಮೂರ್ತಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.