ಗೀತಾ ಬ್ಯಾಂಗಲ್ ಸ್ಟೋರ್ ಗೆ ಥಿಯೇಟರ್ ಸಮಸ್ಯೆ
ಬಿಡುಗಡೆಯಾದ ಒಂದು ವಾರದಲ್ಲೇ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರವನ್ನು ಹಲವು ಥಿಯೇಟರ್ ಗಳಿಂದ ತೆಗೆದುಹಾಕಲಾಗಿರುವುದಕ್ಕೆ ನಿರ್ದೇಶಕ ಮಂಜು ಮಿತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಡುಗಡೆಯಾದ ಒಂದು ವಾರದಲ್ಲೇ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರವನ್ನು ಹಲವು ಥಿಯೇಟರ್ ಗಳಿಂದ ತೆಗೆದುಹಾಕಲಾಗಿರುವುದಕ್ಕೆ ನಿರ್ದೇಶಕ ಮಂಜು ಮಿತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದರೂ, ಗಿರಿನಗರದಲ್ಲಿರುವ ಅನುಪಮ ಥಿಯೇಟರ್ ನಿಂದ ಚಿತ್ರವನ್ನು ಕೈಲಾಶ್ ಗೆ ವರ್ಗಾವಣೆ ಮಾಡಲಾಗಿದ್ದು, ನೀನೆ ಬರಿ ನೀನೆ ಚಿತ್ರ ಬಿಡುಗಡೆ ಮಾಡಿದ್ದಾರೆ. ಇದರಿಂದ ಪ್ರೋತ್ಸಾಹ ವಂಚಿತ ಭಾವನೆ ಮೂಡುತ್ತಿದೆ ಎಂದು ಮಂಜು ಮಿತ್ರ ಹೇಳಿದ್ದಾರೆ.
"ಹೊಸದಾಗಿ ಚಿತ್ರರಂಗವನ್ನು ಪ್ರವೆಶಿಸಿದ್ದೇವೆ, ಜನಗಳನ್ನು ತಲುಪಲು ಮತ್ತಷ್ಟು ಸಮಯ ಬೇಕಾಗಿದೆ. ಆದರೆ ಚಿತ್ರಮಂದಿರಗಳು ನಮಗೆ ಅವಕಾಶ ನೀಡುತ್ತಿಲ್ಲ, ಮೂರು ವರ್ಷಗಳ ಕಠಿಣ ಪರಿಶ್ರಮ ಒಂದೇ ವಾರದಲ್ಲಿ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯಾರನ್ನು ಸಹಾಯ ಕೇಳಬೇಕೆಂಬುದು ತಿಳಿಯದೆ, ಚಿತ್ರತಂಡ ಮಾಧ್ಯಮಗಳ ಮೂಲಕ ಸಾರ್ವಜನಿಕ ಅಭಿಪ್ರಾಯ ಪಡೆಯಲು ಮುಂದಾಗಿದೆ. ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ಬಿಡುಗಡೆಯಾದ ದಿನವೇ ಐದು ಚಿತ್ರಗಳು ಬಿಡುಗಡೆಯಾಗಿದ್ದು ಚಿತ್ರವನ್ನು ಬಿಡುಗಡೆ ಮಾಡಿದ ಸಮಯ ಸಹ ಥಿಯೇಟರ್ ಸಮಸ್ಯೆಗೆ ಕಾರಣವಾಗಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


