ಸಿನಿಮಾ ಸುದ್ದಿ

ರಜನಿಯ 'ಕಬಾಲಿ' ಚಿತ್ರದಲ್ಲಿ ಕನ್ನಡ ಕಿಶೋರ್!

ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ನಟನೆಯ 'ಕಬಾಲಿ' ಚಿತ್ರದಲ್ಲಿ ಕನ್ನಡದ ನಟ ಕಿಶೋರ್ ಗೆ ನಟಿಸುವ ಅವಕಾಶ ಸಿಕ್ಕಿದೆ...

ರಜನಿಯ 'ಕಬಾಲಿ' ಚಿತ್ರದಲ್ಲಿ ಕನ್ನಡ ಕಿಶೋರ್!
ಕಿಶೋರ್
Published On :
ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ನಟನೆಯ 'ಕಬಾಲಿ' ಚಿತ್ರದಲ್ಲಿ ಕನ್ನಡದ ನಟ ಕಿಶೋರ್ ಗೆ ನಟಿಸುವ ಅವಕಾಶ ಸಿಕ್ಕಿದೆ.
ಸದ್ಯ ಕನ್ನಡದ ವಾಸ್ಕೋಡಿಗಾಮ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕಿಶೋರ್ ಇದೀಗ ತಮಿಳಿಗೆ ಹಾರಿದ್ದಾರೆ. ಈ ಹಿಂದೆ ತೆಲುಗು, ತಮಿಳು ಚಿತ್ರಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದು, ಮೊದಲ ಬಾರಿಗೆ ರಜನಿಕಾಂತ್ ಜತೆ ನಟಿಸುವ ಅವಕಾಶ ಸಿಕ್ಕಿದೆ. 
ಯುವ ನಿರ್ದೇಶಕ ರಂಜೀತ್ ಕಬಾಲಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಂಜೀತ್ ಈವರೆಗೆ ಎರಡು ಸಿನಿಮಾ ನಿರ್ದೇಶಿಸಿದ್ದು, ಮೂರನೇ ಚಿತ್ರಕ್ಕೆ ರಜನಿಯನ್ನು ಡೈರಕ್ಟ್‌ ಮಾಡೋ ಅವಕಾಶ ಗಿಟ್ಟಿಸಿದ್ದಾರೆ. ಇನ್ನು 'ಕಬಲಿ' ಸಿನಿಮಾ ಮುಂದಿನ ಬೇಸಿಗೆಯಲ್ಲಿ ರಿಲೀಸ್‌ ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.