ಬಾಹುಬಲಿ ಮಾದರಿಯ ಗಣೇಶ ವಿಗ್ರಹ, ಈ ಬಾರಿಯ ವಿಶೇಷ ಆಕರ್ಷಣೆ
ಗಣೇಶ ಚತುರ್ಥಿ ಕೆಲವು ದಿನಗಳಷ್ಟೇ ಬಾಕಿ ಇದ್ದು, ಬಾಹುಬಲಿ ಚಿತ್ರದ ನಾಯಕನ ಪೋಸ್ ನಲ್ಲಿ ಗಣೇಶ ವಿಗ್ರಹಗಳು ತಯಾರಾಗುತ್ತಿರುವುದು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ.

ನವದೆಹಲಿ: ಗಣೇಶ ಚತುರ್ಥಿ ಕೆಲವು ದಿನಗಳಷ್ಟೇ ಬಾಕಿ ಇದ್ದು, ಬಾಹುಬಲಿ ಚಿತ್ರದ ನಾಯಕನ ಪೋಸ್ ನಲ್ಲಿ ಗಣೇಶ ವಿಗ್ರಹಗಳು ತಯಾರಾಗುತ್ತಿರುವುದು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ.
ಬಾಹುಬಲಿ ಚಿತ್ರದ ನಾಯಕ ಶಿವಲಿಂಗವನ್ನು ಭುಜದ ಮೇಲೆ ಕೊಂಡೊಯ್ಯುತ್ತಿಯುವ ಮಾದರಿಯ ಪೋಸ್ ವಿಗ್ರಹ ತಯಾರಕರ ಮೇಲೆ ಪ್ರಭಾವ ಬೀರಿದ್ದು ಅಂತಹ ಮಾದರಿಯಲ್ಲೇ ವಿಗ್ರಹಗಳನ್ನು ಮಾಡುವುದಾಗಿ ಹೇಳಿದ್ದಾರೆ. ಬಾಹುಬಲಿಯ ಶಿವುಡು ಪಾತ್ರದ ಮಾದರಿಯಲ್ಲೇ ಗಣೇಶ ವಿಗ್ರಹಗಳು ತಯಾರಾಗುತ್ತಿರುವುದಕ್ಕೆ ಚಿತ್ರದ ನಾಯಕ ಪ್ರಭಾಸ್ ಸಂತಸಗೊಂಡಿದ್ದಾರೆ.
ಗಣೇಶ ಹಬ್ಬದ ದಿನ ಶಿವುಡು ಪಾತ್ರದ ಮಾದರಿಯ ಗಣೇಶನ ದರ್ಶನ ಮಾಡಲು ಪ್ರಭಾಸ್ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಬಾಹುಬಲಿ ಚಿತ್ರದಲ್ಲಿ ತಮ್ಮ ಪಾತ್ರ ಪ್ರೇಕ್ಷಕರನ್ನು ಅತಿ ಹೆಚ್ಚು ತಲುಪಿ, ಗಣೆಶ ವಿಗ್ರಹಗಳಾಗುವವರೆಗೂ ಪ್ರಸಿದ್ಧಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


