ದಕ್ಷಿಣದ ತಾರೆಯರ ಅಂತರಂಗ ಪ್ರದಕ್ಷಿಣ
ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯ ದಿಗ್ಗಜ ನಟನಟಿಯರು ಪ್ರತಿ ವರ್ಷ ಒಂದು ಕಡೆ ಸೇರಿ ಪಾರ್ಟಿ ಮಾಡುತ್ತಾರೆ...

ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯ ದಿಗ್ಗಜ ನಟನಟಿಯರು ಪ್ರತಿ ವರ್ಷ ಒಂದು ಕಡೆ ಸೇರಿ ಪಾರ್ಟಿ ಮಾಡುತ್ತಾರೆ. ಕಳೆದ ವರ್ಷ ಮಲೆಯಾಳಂ ನಟಿ ಲೆಸ್ಸಿ ಅವರ ಸಾರಥ್ಯದಲ್ಲಿ ಈ ಪಾರ್ಟಿ ನಡೆಯಿತು. ಈ ಬಾರಿ ನಟಿ ಖುಷ್ಬು ನೇತೃತ್ವದಲ್ಲಿ ಚೆನ್ನೈನ ಆಲಿವ್ ಬೀಸ್ ನಲ್ಲಿರುವ ನೀನಾ ರೆಡ್ಡಿ ಗೆಸ್ಟ್ ಹೌಸ್ ನಲ್ಲಿ ನಡೆಯಿತು.
ಭಾನುವಾರ ನಡೆದ ಈ ಪಾರ್ಟಿಗೆ ಪ್ರತಿ ವರ್ಷ ಸೇರುತ್ತಿದ್ದವರ ಪೈಕಿ ರಜನಿಕಾಂತ್, ಅಂಬರೀಶ್ ಹಾಗೂ ಬಾಲಕೃಷ್ಣ ಮಾತ್ರ ಗೈರುಹಾಜರಾಗಿದ್ದರು. ಈ ಸಲ ಮೆಗಾಸ್ಟಾರ್ ಚಿರಂಜೀವಿ ಸ್ಟೆಪ್ಸ್ ಹಾಕಿದರು. ವೆಂಕಟೇಶ್ ಕುಣಿತಕ್ಕೆ ಎಲ್ಲರು ಪಿsದಾ. ನಡುವೆ ಮೋಹನ್‍ಲಾಲ್ ಮಾ್ಯಜಿಕ್ ಮಾಡಿದರು. ಸುಮಲತಾ ಅಂಬರೀಶ್, ರಮ್ಯಕೃಷ್ಣ, ಜಯಸುಧಾ, ರಾಧಿಕಾ, ರೇವತಿ, ಶೋಭನ, ಸುಹಾಸಿನಿ ಅವರ ಚೇಷ್ಟೆಗಳಿಗೆ ಹದ್ದಿರಲಿಲ್ಲ. ಭಾಗ್ಯರಾಜ್, ಸತ್ಯರಾಜ್, ಪ್ರಭು, ಶರತ್ ಕುಮಾರ್, ನರೇಶ್, ಜಯರಾಂ, ರೆಹಮಾನ್, ಜಾಕಿ ಶ್ರಾಫ್, ಭಾನುಚಂದರ್, ಸುಮನ್, ರಾಜ್ ಕುಮಾರ್ ಹಾಗೂ ನಟಿಯರಾದ ಲೆಸ್ಸಿ, ಖುಷ್ಬು, ಸುಹಾಸಿನಿ, ಸುಮಲತ, ಸರಿತಾ, ರಾಧಾ, ರಾಧಿಕಾ, ರಮ್ಯಕೃಷ್ಣ, ಪೂರ್ಣಿಮಾ, ಮೇನಕ, ಪಾರ್ವತಿ, ಜಯಶ್ರೀ, ರೇವತಿ, ಜಯಸುಧಾ, ಸ್ವಪ್ನ, ಪೂನಂ, ಶೋಭನ... ಸೇರಿದ್ದರು.
1980ರಲ್ಲಿ ಬೆಳ್ಳಿತೆರೆಯನ್ನು ಆಳಿದನಟ-ನಟಿಯರು `ಎಯ್ಟೀಸ್ ರೀ ಯೂನಿಯನ್' ಹೆಸರಿನಲ್ಲಿ ಈ ಪಾರ್ಟಿ ಮಾಡುತ್ತಾರೆ. ಕನ್ನಡದಿಂದ ವಿಷ್ಣುವರ್ಧನ್, ಅಂಬರೀಶ್, ಸುಮಲತಾ ಹಾಗೂ ರಮೇಶ್ ಭಾಗಹಿಸುತ್ತಾರೆ. ಪ್ರತಿ ವರ್ಷ 35ಕ್ಕೂ ಹೆಚ್ಚು ನಟ, ನಟಿಯರು ಭಾಗಹಿಸುತ್ತಾರೆ. ಪ್ರತಿ ವರ್ಷಕ್ಕೂ ಒಂದು ಥೀಮï. ಈ ಬಾರಿ `ಮೌಲಿನ್ ರೂಗ್' ಹೆಸರಿನಲ್ಲಿ ಸಂಭ್ರಮ ಆಯೋಜಿಸಿದ್ದು, ರೆಡ್ ಹಾಗೂ ಬ್ರಿಜ್ ಕಲರ್ ಡ್ರೆಸ್‍ನಲ್ಲಿ ತಾರೆಗಳು ಮಿಂಚಿದರು. ಹಾಡು, ಕುಣಿತ, ಆಟ, ಸೆಲ್ಫಿ ಸೆಷನ್, ಕೊನೆಗೆ ಗ್ರೂಪ್ ಫೋಟೋ. ಈ ಪಾರ್ಟಿಯಲ್ಲಿ ಲುಂಗಿ ಡ್ಯಾನ್ಸ್‍ಗಾಗಿ ತರಿಸಿದ್ದ ಲುಂಗಿಗಳನ್ನು ನಟ ಜಾಕಿ ಶ್ರಾಫ್ ತಮ್ಮ ಮನೆಗೆ ತೆಗೆದುಕೊಂಡು ಹೋದರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


