'ಬೆತ್ತನಗೆರೆ'ಯಲ್ಲಿ ಭೂಗತ ದೊರೆಯಾಗಿ ಸುಮಂತ್
ಹಲವಾರು ಬಗೆತ ಪಾತ್ರಗಳಲ್ಲಿ ನಟಿಸಲು ಇಚ್ಛಿಸುವ ಸುಮಂತ್ ಶೈಲೇಂದ್ರ, ಬಿಜಿ ಮೋಹನ್ ಗೌಡ ನಿರ್ದೇಶನದ ಬೆತ್ತನೆಗೆರೆ ಸಿನೆಮಾದಲ್ಲಿ ಭೂಗತ ದೊರೆಯ ವೇಷ

ಬೆಂಗಳೂರು: ಹಲವಾರು ಬಗೆತ ಪಾತ್ರಗಳಲ್ಲಿ ನಟಿಸಲು ಇಚ್ಛಿಸುವ ಸುಮಂತ್ ಶೈಲೇಂದ್ರ, ಬಿಜಿ ಮೋಹನ್ ಗೌಡ ನಿರ್ದೇಶನದ ಬೆತ್ತನೆಗೆರೆ ಸಿನೆಮಾದಲ್ಲಿ ಭೂಗತ ದೊರೆಯ ವೇಷ ಹಾಕಿದ್ದಾರೆ. ನಿಜ ಜೀವನದಲ್ಲಿ ರೌಡಿಗಳಾದ ಬೆತ್ತನಗೆರೆ ಸೀನ ಮತ್ತು ಶಂಕರ ಇವರ ಜೀವನಾಧಾರಿತ ಸಿನೆಮಾ ಇದು.
"ದಿಲ್ವಾಲೇ ಮತ್ತು ತಿರುಪತಿ ಎಕ್ಸ್ಪ್ರೆಸ್ಸ್ ಕಮರ್ಶಿಯಲ್ ಸಿನೆಮಾಗಳಲ್ಲಿ ಹಾಸ್ಯದ ಜೊತೆ ಪ್ರಯೋಗ ಮಾಡಿದೆ. ಬಿಡುಗಡೆಯಾಗಬೇಕಿರುವ 'ಭಲೇ ಜೋಡಿ' ರೋಮ್ಯಾಂಟಿಕ್ ಕಾಮಿಡಿ ಚಿತ್ರ. ಬೆತ್ತನೆಗೆರೆ ಆಕ್ಷನ್ ಚಿತ್ರ, ಇದು ಸ್ ಗೆ ಇಷ್ಟವಾಗುವಂತಹ ವಿಷಯ" ಎನುತ್ತಾರೆ ಸುಮಂತ್.
ಮತ್ತೊಬ್ಬ ನಾಯಕ ನಟ ಅಕ್ಷಯ್ ಅವರೊಂದಿಗೆ ಬೆತ್ತನಗೆರೆಯಲ್ಲಿ ನಟಿಸಿರುವ ಸುಮಂತ್ "ಬೆತ್ತನಗೆರೆ ಸಹೋದರರ ಜೀವನ ಬಹಳ ಆಸಕ್ತಿ ಮೂಡಿಸಿತು. ನಾನು ಹೆಚ್ಚಾಗಿ ಕ್ರೈಮ್ ಸುದ್ದಿ ಓದುವುದಿಲ್ಲ. ಈ ರೌಡಿ ಸಹೋದರರ ಸಂಬಧಿಗಳ ಬಗ್ಗೆ ನಿರ್ದೇಶಕ ತಿಳಿಸಿದಾಗ ನೆಲಮಂಗಲದಲ್ಲಿ ನನಗೆ ಗೊತ್ತಿರುವ ಜನರ ಬಳಿ ಸೀನ ಮತ್ತು ಶಂಕರರ ಬಗ್ಗೆ ತಿಳಿದುಕೊಂಡೆ. ಈ ಸಂಗತಿಗಳೆಲ್ಲಾ ತಿಳಿದ ಮೇಲೆ ಈ ಪಾತ್ರದಲ್ಲಿ ನಟಿಸಲು ಆಸಕ್ತಿ ಹೆಚ್ಚಾಗುತ್ತಾ ಹೋಯಿತು" ಎನ್ನುತ್ತಾರೆ ನಟ.
ರೌಡಿಗಳ ಬೆಗ್ಗೆ ಸಿನೆಮಾ ಮಾಡುವುದ ಎಷ್ಟು ಮುಖ್ಯ ಎಂದು ಸುಮಂತ್ ಅವರನ್ನು ಪ್ರಶ್ನಿಸಿದರೆ "ಇಂದು ಜನ ಕೇವಲ ಮನರಂಜನೆಗಾಗಿ ಸಿನೆಮಾ ನೋಡುತ್ತಾರೆ, ಸಿನೆಮಾದಲ್ಲಿ ಸಂದೇಶ ಇದೆಯೇ, ಅದರಿಂದ ಏನಾದರೂ ಕಲಿಯಬಹುದೇ ಎಂಬುದು ಅವರಿಗೆ ಬೇಕಾಗಿಲ್ಲ. ತಮ್ಮ ಒತ್ತಡ ಜೀವನದಿಂದ ತಪ್ಪಿಸಿಕೊಳ್ಳಲು ಜನ ಸಿನೆಮಾ ನೋಡುತ್ತಾರೆ, ಪ್ರೀತಿ ಕೌಟುಂಬಿಕ ಭಾವನೆಗಳಿಗೂ ನೋಡುತ್ತಾರೆ, ಈ ಸಿನೆಮಾದಲ್ಲಿ ರೌಡಿ ಸಹೋದರರಿಗೆ ಏನಾಯಿತು ಎಂದು ಹೇಳಿದ್ದೇವೆ. ವಿನೋದ್ ಕಾಂಬ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದು, ಹಾಸ್ಯವೂ ಬಹಳಷ್ಟಿದೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


