ಕಾಮಿಕ್ ಪುಸ್ತಕದ ಅವತಾರದಲ್ಲಿ ಮೂಡಲಿರುವ 'ಅವತಾರ್'
ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಮತ್ತು ತಂಡ ತಮ್ಮ 'ಅವತಾರ್' ಸಿನೆಮಾದ ಕಾಮಿಕ್ ಪುಸ್ತಕ ಅವತಾರವನ್ನು ಹೊರತರುವುದಾಗಿ ಘೋಷಿಸಿದ್ದಾರೆ.

ನ್ಯೂಯಾರ್ಕ್: ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಮತ್ತು ತಂಡ ತಮ್ಮ 'ಅವತಾರ್' ಸಿನೆಮಾದ ಕಾಮಿಕ್ ಪುಸ್ತಕ ಅವತಾರವನ್ನು ಹೊರತರುವುದಾಗಿ ಘೋಷಿಸಿದ್ದಾರೆ.
ನ್ಯೂಯಾರ್ಕ್ ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ಕ್ಯಾಮರಾನ್ ಮತ್ತು ಡಾರ್ಕ್ ಹೌಸ್ ಕಾಮಿಕ್ಸ್ 'ಅವತಾರ್' ಸಿನೆಮಾ ಆಧಾರಿಕ ಕಾಮಿಕ್ ಪುಸ್ತಕಗಳನ್ನು ಹೊರತರುವುದಾಗಿ ಹೇಳಿದೆ.
ನಿರ್ದೇಶಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಧ್ಯವಾಗದೆ ಹೋದದ್ದರಿಂದ, ವಿಶೇಷ ವಿಡಿಯೋ ಮೂಲಕ ಈ ಘೋಷಣೆ ಮಾಡಿದ್ದಾರೆ.
"ಅವತಾರ್ ಸಿನೆಮಾದ ಎರಡನೇ ಭಾಗದ ಬಿಡುಗಡೆಗೂ ಮುಂಚಿತವಾಗಿಯೇ, ಡಾರ್ಕ್ ಹೌಸ್ ಕಾಮಿಕ್ಸ್ ಪುಸ್ತಕಗಳನ್ನು ಹೊರತರಲಿದೆ" ಎಂದು ಕ್ಯಾಮರಾನ್ ಹೇಳಿದ್ದರೆ.
'ಅವತಾರ್-೨' ೨೦೧೭ ರಲ್ಲಿ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


