ಸಿನಿಮಾ ಸುದ್ದಿ

ಹಿಂದೆ ಮುಜುಗರ ತಂದ ಆಯ್ಕೆಗಳಿಗಿಂತಲೂ 'ಕೋರ್ಟ್' ಉತ್ತಮ: ಇರ್ಫಾನ್ ಖಾನ್

೮೮ನೆ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ನಾಮಾಂಕಿತವಾಗಿರುವ ಚೈತನ್ಯ ತಮ್ಹಾನೆ ಅವರ ಮರಾಠಿ ಸಿನೆಮಾ 'ಕೋರ್ಟ್', ಹಿಂದಿನ ವರ್ಷಗಳಲ್ಲಿ ಕಳುಹಿಸಲಾಗಿದ್ದ

ಹಿಂದೆ ಮುಜುಗರ ತಂದ ಆಯ್ಕೆಗಳಿಗಿಂತಲೂ 'ಕೋರ್ಟ್' ಉತ್ತಮ: ಇರ್ಫಾನ್ ಖಾನ್
ನಟ ಇರ್ಫಾನ್ ಖಾನ್
Published On :

ನವದೆಹಲಿ: ೮೮ನೆ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ನಾಮಾಂಕಿತವಾಗಿರುವ ಚೈತನ್ಯ ತಮ್ಹಾನೆ ಅವರ ಮರಾಠಿ ಸಿನೆಮಾ 'ಕೋರ್ಟ್', ಹಿಂದಿನ ವರ್ಷಗಳಲ್ಲಿ ಕಳುಹಿಸಲಾಗಿದ್ದ ಮುಜುಗರ ತರುವಂತಹ ಆಯ್ಕೆಗಳಿಗಿಂತಲೂ ಉತ್ತಮವಾದದ್ದು ಎಂದಿದ್ದಾರೆ ನಟ ಇರ್ಫಾನ್ ಖಾನ್.

"'ಕೋರ್ಟ್' ಒಳ್ಳೆಯ ಸಿನೆಮಾ. ನನಗೆ ಇನ್ನುಳಿದ ಸಿನೆಮಾಗಳ ಬಗ್ಗೆ ತಿಳಿದಿಲ್ಲ. ಹಿಂದಿನ ವರ್ಷಗಳಲ್ಲಿ ಆಅಸ್ಕರ್ ಗೆ ಕಳುಹಿಸಿದ್ದ ಸಿನೆಮಾಗಳು ಮುಜುಗರ ತಂದಿದ್ದವು. ಅವುಗಳಿಗಿಂತಲೂ ಇದು ಉತ್ತಮ ಸಿನೆಮಾ" ಎಂದಿದ್ದಾರೆ ಇರ್ಫಾನ್.

ಕಳೆದ ವರ್ಷ ಇದೇ ನಟನ 'ಪಾನ್ ಸಿಂಗ್ ತೋಮರ್' ಮತ್ತು 'ದ ಲಂಚ್ ಬಾಕ್ಸ್' ಆಸ್ಕರ್ ಗೆ ನಾಮಕಾರಣವಾಗುವ ಸಿನೆಮಾಗಳಲ್ಲಿ ಮುಂಚೂಣಿಯಲ್ಲಿದ್ದವು. ಆದರೆ ಕೊನೆಯ ಘಳಿಗೆಯಲ್ಲಿ 'ಬರ್ಫಿ' ಮತ್ತು 'ದ ಗುಡ್ ರೋಡ್' ಸಿನೆಮಾಗಳನ್ನು ಫಿಲ್ಮ್ ಫೆಡರೇಶ ಆಫ್ ಇಂಡಿಯಾದ ಜ್ಯೂರಿ ಆಯ್ಕೆ ಮಾಡಿತ್ತು.

ಆಸ್ಕರ್ ಪ್ರಶಸ್ತಿ ಗೆದ್ದಿರುವ 'ಸ್ಲಂ ಡಾಗ್ ಮಿಲಿಯನೇರ್' ಮತ್ತು 'ಲೈಫ್ ಆಫ್ ಪೈ' ಸಿನೆಮಾಗಳಲ್ಲಿ ನಟಿಸಿರುವ ನಟನ ಈ ಪ್ರತಿಕ್ರಿಯೆ ಈಗ ಮಹತ್ವ ಪಡೆದುಕೊಂಡಿದೆ.

ಇರ್ಫಾನ್ ಖಾನ್ ಅವರ ನಟನೆಯ 'ತಲ್ವಾರ್' ಕೂಡ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸ್ವೀಕರಿಸಿದ್ದು, ಅವರ ಮುಂದಿನ ಚಿತ್ರ 'ಜಸ್ಬಾ'ದ ಪ್ರಚಾರದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.