ಕಾನ್ ಚಲನಚಿತ್ರೋತ್ಸವ: ಉಡುಗೆ ಬಗ್ಗೆ ಟೀಕಿಸಿದವರಿಗೆ ಸೋನಮ್ ಉತ್ತರ
ತಮ್ಮ ಮುಂಬರುತ್ತಿರುವ ಸಿನೆಮಾ 'ನೀರಜ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಕಾನ್ ಚಲನಚಿತ್ರೋತ್ಸವದ ಕೆಂಪು ಹಾಸಿನ

ತಮ್ಮ ಮುಂಬರುತ್ತಿರುವ ಸಿನೆಮಾ 'ನೀರಜ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಕಾನ್ ಚಲನಚಿತ್ರೋತ್ಸವದ ಕೆಂಪು ಹಾಸಿನ ನಡಿಗೆಗೆ ತೊಟ್ಟಿದ್ದ ಉಡುಗೆಗೆ ಬಂದಿರುವ ವ್ಯಂಗ್ಯ ಪ್ರತಿಕ್ರಿಯೆಗಳಿಗೆ ಸಮಾಧಾನದ ಉತ್ತರ ನೀಡಿದ್ದಾರೆ.
"ನನಗೆ ರಾಣಿಯಂತೆ ಭಾಸವಾಯಿತು" ಎಂದು ಭರವಸೆಯಿಂದ ನುಡಿದಿರುವ ನಟಿ ತಮ್ಮ ಉಡುಗೆಯ ಬಗ್ಗೆ ಹಾಸ್ಯ ಮಾಡಿದವರಿಗೆ ಹಾಗು ಟೀಕಿಸಿದವರಿಗೆ ಸರಳ ಸಮಾಧಾನದ ಉತ್ತರ ನೀಡಿದ್ದಾರೆ.
"ಸೋನಮ್ ಅನಿಲ್ ಕಪೂರ್ ಅವರನ್ನೇ ತೊಟ್ಟಿದ್ದಾರೆ" ಎಂಬ ಜೋಕು ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು.
ಸೋನಮ್ ಅವರನ್ನು ಬೆಂಬಲಿಸಿರುವ ಸಹೋದರಿ ರಿಯಾ "ನೀವು ಸುಂದರವಾಗಿದ್ದೀರಿ ಎಂದೆನಿಸಿದರೆ ನಿಮಗೆ ಮನಬಂದದ್ದನ್ನು ಮಾಡಬೇಕು. ಬೇರೆಯವರ ಅನಿಸಿಕೆಗೆ ಯಾವ ಹುಡುಗಿಯೂ ನಯಾ ಪೈಸೆಯ ಬೆಲೆ ನೀಡುವುದಿಲ್ಲ. ನಿಮಗೆ ಇಷ್ಟವಾದದನ್ನು ತೊಡಬೇಕು ಹಾಗು ಧೈರ್ಯದಿಂದಿರಬೇಕು. ನಿಮಗೆ ಖುಷಿಯಾದರೆ ಅಷ್ಟೆ ಸಾಕು" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


