ಹನ್ಸಿಕಾ, ಅನುಷ್ಕಾ ನಂತ್ರ ಇದೀಗ ಪೂಜಾ ರಹಸ್ಯ ವಿಡಿಯೋ
ನಟಿಯರಾದ ತ್ರಿಶಾ, ಅನುಷ್ಕಾ ಶೆಟ್ಟಿ, ರಾಧಿಕಾ ಆಪ್ಟೆ, ಶ್ರೀವಿದ್ಯಾ, ಲಕ್ಷ್ಮಿ ಮೆನನ್, ಪೂಜಾ ಉಮಾಶಂಕರ್, ಭೂಮಿಕಾ, ಹನ್ಸಿಕಾ, ಸೋನಾಕ್ಷಿ ಸಿನ್ಹಾ...

ಫೇಸ್‍ಬುಕ್, ಟ್ವಿಟ್ಟರ್, ವಾಟ್ಸ್‍ಅಪ್ ಮುಂತಾದ ಸಾಮಾಜಿಕ ಜಾಲ ತಾಣಗಳಿಗೆ ಚಿತ್ರ ನಟಿಯರ ಸೆಕ್ಸ್ ಸ್ಕ್ಯಾಂಡಲ್ ಹೆಸರಿನಲ್ಲಿ ಅಶ್ಲೀಲ ವಿಡಿಯೋಗಳ ಕಾಟ ಹೆಚ್ಚಾಗಿದೆ.
`ಇದು ಈ ನಟಿಯ ರಹಸ್ಯ ವಿಡಿಯೋ' ಎಂದು ಹರಿದಾಡುವ ವಿಡಿಯೋಗಳಿಗೆ ಕಮ್ಮಿ ಇಲ್ಲ. ನಟಿಯರಾದ ತ್ರಿಶಾ, ಅನುಷ್ಕಾ ಶೆಟ್ಟಿ, ರಾಧಿಕಾ ಆಪ್ಟೆ, ಶ್ರೀವಿದ್ಯಾ, ಲಕ್ಷ್ಮಿ ಮೆನನ್, ಪೂಜಾ ಉಮಾಶಂಕರ್, ಭೂಮಿಕಾ, ಹನ್ಸಿಕಾ, ಸೋನಾಕ್ಷಿ ಸಿನ್ಹಾ... ಹೀಗೆ ಪಟ್ಟಿ ಮಾಡುತ್ತ ಹೋದರೆ ಬಹುತೇಕ ಎಲ್ಲ ನಟಿಯರು ಈ ಸ್ಕ್ಯಾಂಡಲ್ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ!
ಇಂಥ ಪಟ್ಟಿಗೆ ಈಗ ಹೊಸ ಸೇರ್ಪಡೆ ಪೂಜಾ ಕುಮಾರ್. ನಟ ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿದ `ವಿಶ್ವರೂಪಂ' ಹಾಗೂ ರಮೇಶ್ ಅರವಿಂದ್ ನಿರ್ದೇಶನದ, ಕಮಲ್ ಅಭಿನಯದ `ಉತ್ತಮ್ ವಿಲನ್' ಚಿತ್ರಗಳನ್ನು ನೋಡಿದವರಿಗೆ ಈ ಪೂಜಾ ಕುಮಾರ್ ಮುಖ ಪರಿಚಯ ಇದ್ದೇ ಇರುತ್ತದೆ. ಈಗ ಈ ನಟಿಗೂ ಸೆಕ್ಸ್ ಸ್ಕ್ಯಾಂಡಲ್ ಬಣ್ಣ ಮೆತ್ತಿಕೊಂಡಿದೆ. `ಇದು ಪೂಜಾ ಕುಮಾರ್ ಇರುವ ವಿಡಿಯೋ ಎನ್ನುವಂತೆ ಒಂದು ಅಶ್ಲೀಲ ವಿಡಿಯೋ ಮೊಬೈಲ್‍ಗಳಿಂದ ಸೋಷಿಯಲ್ ಮೀಡಿಯಾಗೆ ಆಹಾರವಾಗಿದೆ.
ಎಂದಿನಂತೆ ಈ ವಿಡಿಯೋ ಸದ್ದು ಮಾಡುತ್ತಿರುವಂತೆ, `ಆ ವಿಡಿಯೋದಲ್ಲಿರುವುದು ನಾನಲ್ಲ. ನನ್ನಂತೆ ಇರುವ ಬೇರೊಬ್ಬ ಹುಡುಗಿ' ಎನ್ನುತ್ತಿದ್ದಾರೆ. ಆದರೆ, ರಾಧಿಕಾ ಆಪ್ಟೆ ಮೇಲೆ ಇಂಥ ಅರೋಪ ಬಂದಾಗ, `ನಾನೇ ಆ ವಿಡಿಯೋದಲ್ಲಿದ್ದರೆ ಐ ಡೋಂಟ್ ಕೇರ್. ನೋಡಿದರೆ ನೋಡಿಕೊಳ್ಳಲಿ ಬಿಡಿ' ಎಂದು ಗರಂ ಆಗಿಯೇ ಪ್ರತಿಕ್ರಿಯೆ ಕೊಟ್ಟರು. ಆದರೆ, ಎಲ್ಲ ನಟಿಯರು ಇಂಥ ಬೋಲ್ಡ್ ಹೇಳಿಕೆ ನೀಡಬೇಕಲ್ಲ? ಇದರ ನಡುವೆ ಕೆಲವರು ತಮ್ಮ ಪ್ರಚಾರಕ್ಕಾಗಿ ಇಂಥ ವಿಡಿಯೋ ಗಾಸಿಪ್‍ಗಳನ್ನು ಹಬ್ಬಿಸುತ್ತಾರೆ ಎನ್ನುತ್ತವೆ ಸಿನಿಮಾ ಮೂಲಗಳು.
ಫಾರಿನ್ ನಟಿ ಪೂಜಾ ಕುಮಾರ್ ಹೆಸರಿನಲ್ಲಿ ಪಡ್ಡೆಗಳ ನಿದ್ದೆಗೆಡಿಸಿರುವ ಈ ವಿಡಿಯೋ ಕೂಡ ಅಂಥ ಪ್ರಚಾರದ ಸಾಮಗ್ರಿಯೇ? ಗೊತ್ತಿಲ್ಲ. ಆದರೆ, ಪ್ರಚಾರಕ್ಕಾಗಿ ಚಿತ್ರ ನಟಿಯರು ತಮ್ಮ ದೇಹ ಸಿರಿಯನ್ನು ಹೀಗೆ ಸಾರ್ವಜನಿಕವಾಗಿ ಹರಾಜು ಹಾಕುತ್ತಾರೆಯೇ? ಎನ್ನುವ ಬಗ್ಗೆಯೂ ಯೋಚಿಸಿಬೇಕಿದೆ. ಒಟ್ಟಿನಲ್ಲಿ ಅಮೆರಿಕದಲ್ಲಿ ನೆಲೆಸಿರುವ ಕಮಲ್ ಸಿನಿಮಾಗಳ ಮೂಲಕ ಸಿನಿಮಾ ಪ್ರಿಯರಿಗೆ ಪರಿಚಯವಾಗುತ್ತಿರುವ ಪೂಜಾ ಕುಮಾರ್ ಸುತ್ತ ಈಗ ವಿಡಿಯೋ ಗಾಸಿಪ್ ಸುತ್ತಿಕೊಂಡಿರುವುದಂತೂ ನಿಜ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


