ರೆಡ್ ಅಲರ್ಟ್ ಚಿತ್ರೀಕರಣ ಅಂತ್ಯ
ಕೆಲ ದಿನಗಳ ಹಿಂದೆ ಸೆಟ್ಟೇರಿದ `ರೆಡ್ ಅಲರ್ಟ್' ಹೆಸರಿನ ಚಿತ್ರ ಶೂಟಿಂಗ್ ಮುಗಿಸಿಕೊಂಡಿದೆ. ಈ ಚಿತ್ರದ ನಿರ್ದೇಶಕರು...

ಕೆಲ ದಿನಗಳ ಹಿಂದೆ ಸೆಟ್ಟೇರಿದ `ರೆಡ್ ಅಲರ್ಟ್' ಹೆಸರಿನ ಚಿತ್ರ ಶೂಟಿಂಗ್ ಮುಗಿಸಿಕೊಂಡಿದೆ. ಈ ಚಿತ್ರದ ನಿರ್ದೇಶಕರು ಚಂದ್ರ ಮಹೇಶ್. ಚಿತ್ರದ ನಿರ್ಮಾಪಕರು ಮಹೇಶ್ ರೆಡ್ಡಿ. ಈಗ ಸಿನಿಮಾ ಯಾವುದೇ ಅಡೆತಡೆಗಳಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವುದಕ್ಕೆ ಕರಿಸುಬ್ಬು ಅವರ ಸಹಕಾರವೇ ಮುಖ್ಯ. ಚಂದ್ರ ಮಹೇಶ್ ತೆಲುಗಿನ ಎಂಟು ಸಿನಿಮಾಗಳಿಗೆ ಕೆಲಸ ಮಾಡಿದ್ದು, ಕನ್ನಡದಲ್ಲಿ `ರೆಡ್ ಅಲರ್ಟ್' ಮೊದಲ ಚಿತ್ರ.
`ನಾವು ಅಂದುಕೊಂಡಂತೆ ಸಿನಿಮಾ ಮೂಡಿಬಂದಿದೆ. ಕಾಮಿಡಿ ಸಿನಿಮಾ. ಆದರೂ ಚಿತ್ರದಲ್ಲಿ ಸಾಕಷ್ಟು ಗಂಭೀರ ವಿಷಯಗಳಿವೆ. ನಾಲ್ಕು ಮಂದಿ ಯುವಕರು ನಗರಕ್ಕೆ ಬರುತ್ತಾರೆ. ಮುಂದೆ ಅವರು ಭಯೋತ್ಪಾದಕರ ನೆರಳಿಗೆ ಸಿಕ್ಕಿಕೊಳ್ಳುತ್ತಾರೆ. ಮುಂದೇನಾಗುತ್ತದೆ ಎಂಬುದು ಚಿತ್ರಕಥೆ. ಚಿತ್ರದ ಎಲ್ಲ ಪಾತ್ರಧಾರಿಗಳು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಕರಿಸುಬ್ಬು ಅವರ ಸಹಕಾರದಿಂದ ಸಿನಿಮಾ ಮುಗಿಸಿದ್ದೇವೆ' ಎಂದರು ನಿರ್ದೇಶಕ ಚಂದ್ರ ಮಹೇಶ್.
ಮಹದೇವ್ ಚಿತ್ರದ ಮುಖ್ಯ ಪಾತ್ರಧಾರಿ. ಅಂಜನ್ ಮೆನನ್ ಚಿತ್ರದ ನಾಯಕಿ. ಇಬ್ಬರಿಗೂ ಮೊದಲ ಸಿನಿಮಾ. `ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ನಿರ್ದೇಶಕ ಚಂದ್ರ ಮಹೇಶ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನನ್ನ ಪ್ರಕಾರ ಈ ಸಿನಿಮಾ ಎಲ್ಲ ರೀತಿಯಲ್ಲೂ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ. ಮನರಂಜನೆ ಜತೆಗೆ ಯುವಕರ ಬದುಕಿನ ದಾರಿ ಕೂಡ ಇಲ್ಲಿ ತೋರಿಸಲಾಗಿದೆ' ಎಂದರು ಮಹದೇವ್.
ಅಂದಹಾಗೆ ಮಹದೇವ್ ಅನುಪಮ್ ಖೇರ್ ಅವರ ಅಭಿನಯದ ತರಬೇತಿ ಸಂಸ್ಥೆಯಲ್ಲಿ ನಟನೆ ಕಲಿತು ಬಂದಿದ್ದಾರೆ. ಚಿತ್ರದಲ್ಲಿ ಕುರಿಪ್ರತಾಪ್, ಬುಲೆಟ್‍ಪ್ರಕಾಶ್, ದಿವ್ಯಾಗೌಡ, ಅನುಪಮ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಶುಭ ಕೋರಲು ಉಮೇಶ್ ಬಣಕಾರ್ ಹಾಗೂ ಕರಿಸುಬ್ಬು ಆಗಮಿಸಿದ್ದರು. ಸಾಗರ, ಶಿವಮೊಗ್ಗ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ರವಿವರ್ಮ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ `ರೆಡ್ ಅಲರ್ಟ್' ಸಿನಿಮಾ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


