ಸಿನಿಮಾ ಸುದ್ದಿ

ಬಾರ್ನ್ಸ್ ಕಾದಂಬರಿಯನ್ನು ಇಂಗ್ಲೀಶ್ ಸಿನೆಮಾಗೆ ಅಳವಡಿಸಲಿರುವ 'ಲಂಚ್ ಬಾಕ್ಸ್' ನಿರ್ದೇಶಕ

ವಿಮರ್ಶಕರ ಅಪಾರ ಮೆಚ್ಚುಗೆ ಪಡೆದು ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ 'ದಿ ಲಂಚ್ ಬಾಕ್ಸ್' ಸಿನೆಮಾದ ನಿರ್ದೇಶಕ ರಿತೇಶ್ ಭಾತ್ರ ಹೊಸ

ಬಾರ್ನ್ಸ್ ಕಾದಂಬರಿಯನ್ನು ಇಂಗ್ಲೀಶ್ ಸಿನೆಮಾಗೆ ಅಳವಡಿಸಲಿರುವ 'ಲಂಚ್ ಬಾಕ್ಸ್' ನಿರ್ದೇಶಕ
ಭಾತ್ರಾ ನಿರ್ದೇಶನದ 'ದಿ ಲಂಚ್ ಬಾಕ್ಸ್' ಚಲನಚಿತ್ರದ ಸ್ಟಿಲ್
Published On :

ಮುಂಬೈ: ವಿಮರ್ಶಕರ ಅಪಾರ ಮೆಚ್ಚುಗೆ ಪಡೆದು ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ 'ದಿ ಲಂಚ್ ಬಾಕ್ಸ್' ಸಿನೆಮಾದ ನಿರ್ದೇಶಕ ರಿತೇಶ್ ಭಾತ್ರ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಬೂಕರ್ ಪ್ರಶಸ್ತಿ ಪಡೆದ ಜೂಲಿಯನ್ ಬಾರ್ನ್ಸ್ ಅವರ ಕಾದಂಬರಿ 'ದ ಸೆನ್ಸ್ ಆಫ್ ಎನ್ ಎಂಡಿಂಗ್' ಅನ್ನು ಇಂಗ್ಲೀಶ್ ಸಿನೆಮಾವೊಂದಕ್ಕೆ ಅಳವಡಿಸಲು ಸಿದ್ದರಾಗುತ್ತಿದ್ದಾರೆ. ಈ ಸಿನೆಮಾದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಜಿಮ್ ಬ್ರಾಡ್ ಬೆಂಟ್ ನಟಿಸಲಿದ್ದಾರೆ.

ಇರ್ಫಾನ್ ಖಾನ್, ನಿಮ್ರತ್ ಕೌರ್ ಮತ್ತು ನವಾಜುದ್ದೀನ್ ಸಿದ್ಧಿಕಿ ಇವರುಗಳನ್ನು ಒಳಗೊಂಡ ಮಧ್ಯಮ ವರ್ಗದ ಪ್ರಣಯ ಕಥೆ 'ದಿ ಲಂಚ್ ಬಾಕ್ಸ್' ನಿರ್ದೇಶಿಸಿ ಭಾತ್ರ ವಿಶ್ವವಿಖ್ಯಾತರಾಗಿದ್ದರು. 'ಟಾಪ್ಸಿ ಟರ್ವಿ', 'ಐರಿಸ್', 'ಮೌಲಿನ್ ರೋಗ್', 'ದ ಐರನ್ ಲೇಡಿ', 'ಹ್ಯಾರಿ ಪಾಟರ್' ಸಿನೆಮಾಗಳಿಂದ ಬ್ರಾಡ್ ಬೆಂಟ್ ಹೆಸರುವಾಸಿ. ಈ ಹೊಸ ಚಿತ್ರದಲ್ಲಿ ತಮ್ಮ ವಕೀಲನಿಂದ ಬರುವ ಪತ್ರದಿಂದ ತಮ್ಮ ಹಿಂದಿನ ಜೀವನದ ಜೊತೆ ಮುಖಾಮುಖಿಯಾಗಿ ತನ್ನ ಬಾಲ್ಯಕಾಲದ ಗೆಳೆಯನ ಆತ್ಮಹತ್ಯೆಯ ಕಾರಣ ಹುಡುಕುವ ವ್ಯಕ್ತಿಯ ಕಥೆಯನ್ನು ಈ ಸಿನೆಮಾ ಅಳವಡಿಸಲಿದೆ.

"ನನ್ನ ಅತಿ ಮೆಚ್ಚುಗೆಯ ಕಾದಂಬರಿಗಳಲ್ಲಿ ಒಂದಾದ ಪುಸ್ತಕವನ್ನು ಸಿನೆಮಾಗೆ ಅಳವಡಿಸಲು ಹಾಗು ಅತ್ಯುತ್ತಮ ತಂಡದೊಂದಿಗೆ ಕೆಲಸ ಮಾಡಲು ಥ್ರಿಲ್ ಆಗಿದ್ದೇನೆ" ಎಂದಿದ್ದಾರೆ ಭಾತ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.