ಸಿನಿಮಾ ಸುದ್ದಿ

'ಲಿಂಗಾ' ವಿವಾದಗಳ ಸುತ್ತ ಹೆಣೆದಿರುವ 'ಸ್ಪೂಫ್' ಚಿತ್ರ: 'ನಾನುಂ ಹೀರೋಧಾನ್'

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಲಿಂಗಾ' ಸಿನೆಮಾದ ಸುತ್ತಲೂ ಇದ್ದ ವಿವಾದಗಳು ಈಗ ಸ್ಪೂಫ್ ಸಿನೆಮಾ ಆಗಲಿದೆ. 'ನಾನುಂ ಹೀರೋಧಾನ್'

'ಲಿಂಗಾ' ವಿವಾದಗಳ ಸುತ್ತ ಹೆಣೆದಿರುವ 'ಸ್ಪೂಫ್' ಚಿತ್ರ: 'ನಾನುಂ ಹೀರೋಧಾನ್'
'ಲಿಂಗಾ' ಚಿತ್ರದಲ್ಲಿ ನಟ ರಜನಿಕಾಂತ್
Published On :

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಲಿಂಗಾ' ಸಿನೆಮಾದ ಸುತ್ತಲೂ ಇದ್ದ ವಿವಾದಗಳು ಈಗ ಸ್ಪೂಫ್ ಸಿನೆಮಾ ಆಗಲಿದೆ. 'ನಾನುಂ ಹೀರೋಧಾನ್' ಎಂಬ ಹೆಸರಿನ ಸಿನೆಮಾಗೆ ನಾಯಕ ನಟ ಪವರ್ ಸ್ಟಾರ್ ಶ್ರೀನಿವಾಸನ್.

"ಶುಕ್ರವಾರ ಸಿನೆಮಾದ ಅಧಿಕೃತ ಅನಾವರಣವಾಗಿದೆ. ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ಮೂಲಗಳು ತಿಳಿಸಿದೆ.

ಹಲವು ತಮಿಳು ಸಿನೆಮಾಗಳನ್ನು ಸ್ಪೂಫ್ ಮಾಡಿ ಮಾಡಲಾಗಿದ್ದ 'ತಮಿಳು ಪದಮ್' ಸಿನೆಮಾ ಮಾದರಿಯಲ್ಲೇ ಈ ಸಿನೆಮಾ ಇರಲಿದೆ ಎನ್ನಲಾಗಿದೆ.

'ಲಿಂಗಾ' ಸಿನೆಮಾದ ವಿತರಕರೊಬ್ಬರಾದ ಸಿಂಗಾರವೇಲನ್ ಈ ಸ್ಪೂಫ್ ಸಿನೆಮಾದ ನಿರ್ಮಾಪಕ ಮತ್ತು ಈ ಸಿನೆಮಾವನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಮಾಪಕ ಚಿಂತಿಸುತ್ತಿದ್ದಾರಂತೆ!

"ಲಿಂಗಾ' ಸಿನೆಮಾ ವಿತರಿಸಿ ಕೈಸುಟ್ಟಿಕೊಂಡ ಎಲ್ಲರಿಗೂ ಸಹಾಯ ಮಾಡಬೇಕೆಂದಿದ್ದಾರೆ ನಿರ್ಮಾಪಕರು. ಆದುದರಿಂದ ಈ ಸಿನೆಮಾವನ್ನು ಉಚಿತವಾಗಿ ವಿತರಿಸಿ ವಿತರಕರು ಮತ್ತು ಚಲನಚಿತ್ರಮಂದಿರ ಮಾಲೀಕರು ಹಣ ಹಿಂಪಡೆಯಲು ಸಹಾಯ ಮಾಡಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

೨೦೧೪ ರ ರಜನಿಕಾಂತ್ ಹುಟ್ಟುಹಬ್ಬದ ದಿನ ಬಿಡುಗಡೆಯಾದ ಕೆ ಎಸ್ ರವಿಕುಮಾರ್ ನಿರ್ದೇಶನದ 'ಲಿಂಗಾ' ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತ್ತು. ಅತಿ ಹೆಚ್ಚಿನ ಮೊತ್ತ ನೀಡಿ ವಿತರಣೆಯ ಹಕ್ಕುಗಳನ್ನು ಪಡೆದಿದ್ದ ವಿತರಕರು ಬೀದಿಗಿಳಿದು ಪ್ರತಿಭಟಿಸಿದ್ದರು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಷ್ಟವನ್ನು ಹಂಚಿಕೊಳ್ಳಲು ನಿರಾಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.