ಒಂದೇ ವಾರದಲ್ಲಿ 100 ಕೋಟಿ ಗಳಿಸಿದ ಎಬಿಸಿಡಿ-2 ಚಿತ್ರ
ಎನಿಬಡಿ ಕ್ಯಾನ್ ಡಾನ್ಸ್-2 (ಎಬಿಸಿಡಿ-2 ) ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ದಾಖಲೆ ನಿರ್ಮಿಸಿದ್ದು, ಒಂದು ವಾರದ ಪ್ರದರ್ಶನದಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ.

ನವದೆಹಲಿ: ಎನಿಬಡಿ ಕ್ಯಾನ್ ಡಾನ್ಸ್-2 (ಎಬಿಸಿಡಿ-2 ) ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ದಾಖಲೆ ನಿರ್ಮಿಸಿದ್ದು, ಒಂದು ವಾರದ ಪ್ರದರ್ಶನದಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ.
ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್ ನಟಿಸಿರುವ ಚಿತ್ರ ಜನಪ್ರಿಯವಾಗಿದ್ದು ಕಳೆದ ವಾರವೇ 46 ಕೋಟಿರೂಪಾಯಿಗಳನ್ನು ಗಳಿಸಿತ್ತು. ನಿರೀಕ್ಷೆಗೂ ಮೀರಿ ರೆಮೋ ಡಿಸೋಜ ಅವರ ಸಿನಿಮಾ ಪ್ರದರ್ಶನ ಕಾಣುತ್ತಿದ್ದು ದಾಖಲೆಯ 100 ಕೋಟಿ ಮೊತ್ತ ಗಳಿಸಿದೆ.
ಎಬಿಸಿಡಿ-2 100 ಸಂಗ್ರಹಿಸಿರುವುದನ್ನು ಸ್ಪಷ್ಟಪಡಿಸಿರುವ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್, ಚಿತ್ರ ತೆರೆಕಂಡದಿನದಿಂದಲೂ ದಾಖಲೆಯ ಸಂಗ್ರಹ ಮಾಡುತ್ತಿದೆ ಎಂದು ಹೇಳಿದ್ದಾರೆ. ತರಣ್ ಆದರ್ಶ್, ಟ್ವೀಟ್ ಪ್ರಕಾರ, ಎಬಿಸಿಡಿ ಚಿತ್ರ ಭಾರತದಲ್ಲಿ 92 .85 ಕೋಟಿ ಗಳಿಸಿದ್ದು, ಹೊರದೇಶಗಳಲ್ಲಿ 11 .45 ಕೋಟಿ ಗಳಿಸಿದೆಯಂತೆ.
ಪ್ರಥಮ ವಾರದ ಗಳಿಕೆ ತನು ವೆಡ್ಸ್ ಮನು ರಿಟನ್ಸ್ ಚಿತ್ರಕ್ಕಿಂತಲೂ ಕಡಿಮೆಯಿತ್ತಾದರೂ, ನಂತರದ ದಿನಗಳಲ್ಲಿ ದಾಖಲೆಯತ್ತ ಸಾಗಿರುವುದು ಅಚ್ಚರಿಸಿದೆ. ಎಬಿಸಿಡಿ- 2 , 2015 ರಲ್ಲಿ ಪ್ರಥಮ ವಾರ ಅತಿ ಹೆಚ್ಚು ಗಳಿಸಿರುವ ಚಿತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


