'ಪಾಪು' ಜೊತೆ ಕೃತಿ ಕರಬಂದ ಸಿಕ್ಕಾಬಟ್ಟೆ ಬ್ಯೂಸಿ
ನಟಿ ಕೃತಿ ಕರಬಂದ ಸಿನೆಮಾಗಳ ಆಯ್ಕೆ ಮಾಡಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ. ಎಸ್ ಮಹೇಂದರ್ ಅವರ 'ಪಾಪು', ನಂತರ...

ಬೆಂಗಳೂರು: ನಟಿ ಕೃತಿ ಕರಬಂದ ಸಿನೆಮಾಗಳ ಆಯ್ಕೆ ಮಾಡಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ. ಎಸ್ ಮಹೇಂದರ್ ಅವರ 'ಪಾಪು', ನಂತರ ನಾಗಶೇಖರ್ ಅವರ 'ಸಂಜು ಮತ್ತು ಗೀತ' ಹೀಗೆ ಸಿನೆಮಾಗಳ ಸಾಲೇ ಅವರ ಮುಂದಿದೆ.
'ಸಂಜು ಮತ್ತು ಗೀತಾ' ಸಿನೆಮಾದ ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂಬುದರ ಸುಳಿವಿಲ್ಲದ ಕೃತಿ, ಎಸ್ ಮಹೇಂದರ್ ಅವರ 'ಪಾಪು' ಸಿನೆಮಾದಲ್ಲಿ ಶ್ರೀನಗರ ಕಿಟ್ಟಿ ಅವರ ಜೊತೆ ನಟಿಸಲು ಸಹಿ ಮಾಡಿದ್ದಾರೆ. 'ಪಾಪು' ಸಿನೆಮಾದ ಚಿತ್ರೀಕರಣ ಈಗಾಗಲೇ ೪೦% ಮುಗಿದಿದ್ದು, ಕೃತಿ ಅವರ ಭಾಗ ಜುಲೈ ೭ ರಿಂದ ಪ್ರಾರಂಭವಾಗಿ ೨೦ ದಿನಗಳು ಮುಂದುವರೆಯಲಿದೆ.
"ಪಾಪು ಚೆನ್ನಾಗಿ ಮುಂದುವರೆಯುತ್ತಿದೆ. ಮುಂದಿನ ಚಿತ್ರೀಕರಣದ ವೇಳೆಯಲ್ಲಿ ಸಿನೆಮಾ ಸಂಪೂರ್ಣಗೊಳ್ಳುತ್ತದೆ. ನಾಗಶೇಖರ್ ಅವರ ಸಿನೆಮಾ ಯಾವಾಗ ಪ್ರಾರಂಭವಾಗುತ್ತದೆ ಎಂದು ತಿಳಿದಿಲ್ಲ ಆದರೆ ಸಹಿ ಮಾಡಿದ್ದೇನೆ" ಎನ್ನುತ್ತಾರೆ ಕೃತಿ .
"ನಾನು ಯಾವುದೇ ಸಿನೆಮಾ ಯೋಜನೆಯ ವಾಣಿಜ್ಯಾತ್ಮಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನಿರ್ಮಾಪಕರಿಗೆ ಬಿಟ್ಟಿದ್ದು. ನಾನು ಒಳ್ಳೆಯ ಪಾತ್ರಗಳಲ್ಲಿ ನಟಿಸಲು ಪ್ರಯತ್ನಿಸಿದ್ದೇನೆ. 'ಚಿರು'ವಿನ ಮಧು ಆಗಲೀ, 'ಪ್ರೇಮ್ ಅಡ್ಡ'ದ ಗಿರಿಜಾ ಆಗಲೀ ಅಥವಾ 'ಗೂಗ್ಲಿ'ಯ ಸ್ವಾತಿ ಆಗಲೀ ಜನರು ನೆನಸಿಕೊಳ್ಳುವಂತಹ ಪಾತ್ರ. ಹೌದು ಬಾಕ್ಸ್ ಆಫೀಸಿನಲ್ಲಿ ಗೆಲ್ಲುವುದು ಎಲ್ಲರಿಗೂ ಬೇಕು" ಎನ್ನುತ್ತಾರೆ ಕೃತಿ .
ಪಾಪು ಸಿನೆಮಾದ ಸಿನೆಮ್ಯಾಟೋಗ್ರಾಫರ್ ಜಗದೀಶ್ ವಾಲಿ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


