ಮತ್ತೊಬ್ಬ ರಾಜಕಾರಣಿಯ ಮಗ ಸಿನೆಮಾ ಪಾದಾರ್ಪಣೆಗೆ ಸಿದ್ಧ
ಈ ವಸಂತದಲ್ಲಿ ರಾಜಕಾರಿಣಿಗಳ ಮಕ್ಕಳ ದಂಡೇ ಕನ್ನಡ ಚಿತ್ರೋದ್ಯಮಕ್ಕೆ ಬರಲು ಕಾತರಿಸುತ್ತಿದೆ...

ಬೆಂಗಳೂರು: ಈ ವಸಂತದಲ್ಲಿ ರಾಜಕಾರಿಣಿಗಳ ಮಕ್ಕಳ ದಂಡೆ ಕನ್ನಡ ಚಿತ್ರೋದ್ಯಮಕ್ಕೆ ಬರಲು ಕಾತರಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಮತ್ತು ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಈಗಾಗಲೇ ಚಲನಚಿತ್ರ ಪಾದಾರ್ಪಣೆಯನ್ನು ಘೋಷಿಸಿದ್ದಾರೆ. ಈಗ ಇವರನ್ನು ಸೇರಿಕೊಳ್ಳಲು ಸಿದ್ಧರಾಗುತ್ತಿರುವುದು ಬೇರ್ಯಾರೂ ಅಲ್ಲ, ಕುಮಾರಸ್ವಾಮಿಯವರ ಸಹೋದ್ಯೋಗಿ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್.
ನಿರ್ದೇಶಕ ಮಹೇಶ್ ಸುಖಧರೆ ಅವರ '"ಹ್ಯಾಪಿ ಬರ್ತ್ ಡೇ" - ಮಗ್ನೇ ಐತೆ ನಿಂಗೆ' ಸಿನೆಮಾದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಸಚಿನ್ ನಟನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಸುಖಧರೆ ಅವರ ಸ್ವಂತ ಸಂಸ್ಥೆಯಡಿಯೇ ನಿರ್ಮಾಣವಾಗುತ್ತಿರುವ ಈ ಸಿನೆಮಾಗೆ ಹಿರಿಯ ನಟರಾದ ಅಂಬರೀಶ್, ಶಿವರಾಜಕುಮಾರ್, ದರ್ಶನ್ ಮತ್ತು ಯಶ್ ಅವರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ.
ಸಿನೆಮಾ ಉದ್ಯಮಕ್ಕೆ ಬಂದಿದ್ದು ಅನಿರೀಕ್ಷಿತ ಎನ್ನುತ್ತಾರೆ ಸಚಿನ್. "ಇಲ್ಲಿರುವ ಸ್ಪರ್ಧೆಯ ಬಗ್ಗೆ ಮಾತನಾಡುವುದಕ್ಕೆ ಇದಿನ್ನೂ ನನಗೆ ಆರಂಭ. ನಾನು ನನ್ನ ನಟನಾ ಕುಶಲತೆಯನ್ನು ತೋರಿಸುವತ್ತ ಗಮನ ಹರಿಸಲಿದ್ದೇನೆ" ಎನ್ನುತ್ತಾರೆ ಸಚಿನ್.
ಕನ್ನಡ ಚಿತ್ರರಂಗದ ಇತರ ನಟರಿಂದ ಸ್ಫೂರ್ತಿ ಪಡೆದಿದ್ದೇನೆ ಎನ್ನುವ ಸಚಿನ್ "ನಾನು ದರ್ಶನ್ ಅವರಿಂಗ ಆಕ್ಷನ್ ಕಲಿತೆ. ಸುದೀಪ್ ಅವರಿಂದ ಸಮರ್ಪಿಸಿಕೊಳ್ಳುವುದನ್ನು ಕಲಿತೆ. ಪುನೀತ್ ಅವರಿಂದ ಸ್ಟೈಲ್, ಯಶ್ ಅವರಿಂದ ಪರಿಪೂರ್ಣತೆ ಮತ್ತು ಶಿವರಾಜ್ ಕುಮಾರ್ ಅವರಿದ ಶಕ್ತಿಯುತವಾಗಿರುವುದನ್ನು ಕಲಿತೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


