ಸಿನಿಮಾ ಸುದ್ದಿ

ಯೋಗರಾಜ್ ಭಟ್ರ 'ದನ ಕಾಯೋನು' ಚಿತ್ರಕ್ಕೆ ಕ್ರೇಜಿ ಕ್ಲಾಪ್

ದನ ಕಾಯೋನಾಗಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿದ್ದರೆ, ವಿಜಯ್ ಗೆ ಪ್ರಿಯಾಮಣಿ ಸಾಥ್ ನೀಡುತ್ತಿದ್ದಾರೆ...

ಯೋಗರಾಜ್ ಭಟ್ರ 'ದನ ಕಾಯೋನು' ಚಿತ್ರಕ್ಕೆ ಕ್ರೇಜಿ ಕ್ಲಾಪ್
ದನ ಕಾಯೋನು ಚಿತ್ರದ ಮುಹೂರ್ತ
Published On :

ಟಿಪಿಕಲ್ ಸಾಹಿತ್ಯದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಭಾಷ್ಯ ಬರೆದಿದ್ದ ನಿರ್ದೇಶಕ ಯೋಗಭಟ್ ಇದೀಗ ತಮ್ಮ ಮುಂದಿನ ಚಿತ್ರಕ್ಕೆ ಹೊಸ ಬಗೆಯ ಟೈಟಲ್ ಇಟ್ಟಿದ್ದಾರೆ. ಅದೇನೆಂದರೆ ದನ ಕಾಯೋನು ಅಂತ.

ಕರ್ನಾಟಕ ರಾಜಕೀಯದಲ್ಲಿ ಇತ್ತೀಚೆಗಷ್ಟೇ ದನ ಕಾಯೋದರ ಬಗ್ಗೆ ರಾಜಕೀಯ ಮುಖಂಡರು ಕೆಸರೆರಚಿಕೊಂಡಿದ್ದರು. ಇದೇ ದನ ಕಾಯೋ ವಿಚಾರವನ್ನು ಯೋಗರಾಜ್ ಭಟ್ ತೆರೆ ಮೇಲೆ ತರುತ್ತಾರಾ ಎಂದು ಕಾದುನೋಡಬೇಕಿದೆ. ದನ ಕಾಯೋನಾಗಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿದ್ದರೆ, ವಿಜಯ್ ಗೆ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಸಾಥ್ ನೀಡುತ್ತಿದ್ದಾರೆ.

ನಗರದ ರಾಜಾಜಿನಗರ ಮುನೇಶ್ವರ ದೇವಸ್ತಾನದಲ್ಲಿ ದನ ಕಾಯೋನು ಚಿತ್ರದ ಮುಹೂರ್ತ ನೆರವೇರಿತು. ಚಿತ್ರದ ಸನ್ನಿವೇಶಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಯಾಮೆರಾಗೆ ಚಾಲನೆ ನೀಡಿದರು.

ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಆರ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀನಿವಾಸ್ ಹಾಗೂ ಕೆ.ಪಿ ಶ್ರೀಕಾಂತ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು, ಸುಗ್ನಾನ್ ಛಾಯಾಗ್ರಹಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.