ಸಿನಿಮಾ ಸುದ್ದಿ

ಧೋನಿ ಭೇಟಿ ಮಾಡಿದ 'ಕಾಕಾ ಮುತ್ತೈ' ಬಾಲನಟರು

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರಿಗೆ ಕನಸು ನನಸಾದ ಕ್ಷಣ. ಭಾರತ ಕ್ರಿಕೆಟ್ ತಾರೆ ಎಂ ಎಸ್

ಧೋನಿ ಭೇಟಿ ಮಾಡಿದ 'ಕಾಕಾ ಮುತ್ತೈ' ಬಾಲನಟರು
ಭಾರತ ಕ್ರಿಕೆಟ್ ತಾರೆ ಎಂ ಎಸ್ ಧೋನಿಯವರನ್ನು ಭೇಟಿ ಮಾಡಿದ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್
Published On :

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರಿಗೆ ಕನಸು ನನಸಾದ ಕ್ಷಣ. ಭಾರತ ಕ್ರಿಕೆಟ್ ತಾರೆ ಎಂ ಎಸ್ ಧೋನಿಯವರನ್ನು ಈ ಬಾಲನಟರು ಭೇಟಿ ಮಾಡಿದ್ದಾರೆ.

"ಧೋನಿ ಸರ್ ಜೊತೆ ಇದು ಸೂಪರ್ ಭೇಟಿಯಾಗಿತ್ತು. ಅವರು ನಮ್ಮ ಜೊತೆ ಗೆಳೆಯರಂತೆ ಮತ್ತು ಖುಷಿಯಿಂದಿದ್ದರು. ಅವರನ್ನು ನಮ್ಮನ್ನು ಅಭಿನಂದಿಸಿ ಆಲಿಂಗಿಸಿದರು. ಇದು ನಮಗೆ ಕನಸು ನನಸಾದಂತೆ" ಎಂದು ರಮೇಶ್ ತಿಳಿಸಿದ್ದಾರೆ.

ಧೋನಿ ತಮ್ಮ ಜೊತೆ ಮಾಡನಾಡುತ್ತಿದ್ದುದನ್ನು ನಂಬಲಾಗದೆ ನನ್ನನು ನಾನೇ ತಟ್ಟಿ ನೋಡಿಕೊಂಡೆ ಎನ್ನುತ್ತಾರೆ ವಿಜ್ಞೇಶ್.

"ಕಾಕ ಮುತ್ತೈ" ಬಾಲನಟರಿಗೆ ಧೋನಿ ಅವರನ್ನು ನೋಡುವಾಸೆಯನ್ನು ತಿಳಿದ ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ಸಂಸ್ಥೆ ಕೂಡಲೆ ಈ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ.

ಬಾಲನಟರನ್ನು ಸಿನೆಮಾದ ನಿರ್ದೇಶಕ ಎಂ ಮಣಿಕಂಠನ್ ಅವರೊಂದಿಗೆ ಕ್ರಿಕೆಟ್ ತಾರೆಯನ್ನು ಭೇಟಿ ಮಾಡಲು ಡಿ ವೈ ಪಾಟಿಲ್ ಮೈದಾನಕ್ಕೆ ಕೊಂಡೊಯ್ಯೊಲಾಗಿತ್ತು.

ಇಬ್ಬರು ಬೀದಿ ಮಕ್ಕಳು ಪಿಜ್ಜಾ ತಿನ್ನುವಾಸೆಯ ಸುತ್ತ ಹೆಣೆದಿರುವ ಈ ಸಿನೆಮಾ, ವಿಮರ್ಶಕರ ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.