ಅಂಧ ಚೆಸ್ ಆಟಗಾರರ ಕುರಿತು 'ಅಲ್ಗಾರಿಥಮ್ಸ್' ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆ
ಅಂಧ ಚೆಸ್ ಆಟಗರಾರ ಕುರಿತು ನಿರ್ಮಿಸಿರುವ 'ಅಲ್ಗಾರಿಥಮ್ಸ್' ಸಾಕ್ಷ್ಯಚಿತ್ರವನ್ನು ಭಾರತದ ಮೆಟ್ರೋ ನಗರಗಳಲ್ಲಿ ಆಗಸ್ಟ್ ೨೧ರಂದು ಬಿಡುಗಡೆ

ನವದೆಹಲಿ: ಅಂಧ ಚೆಸ್ ಆಟಗರಾರ ಕುರಿತು ನಿರ್ಮಿಸಿರುವ 'ಅಲ್ಗಾರಿಥಮ್ಸ್' ಸಾಕ್ಷ್ಯಚಿತ್ರವನ್ನು ಭಾರತದ ಮೆಟ್ರೋ ನಗರಗಳಲ್ಲಿ ಆಗಸ್ಟ್ ೨೧ರಂದು ಬಿಡುಗಡೆ ಮಾಡಲಾಗುವುದು.
ಸಮಾಜಶಾಸ್ತ್ರಜ್ಞ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕ ಇಯಾನ್ ಮೆಕ್ ಡೋನಾಲ್ಡ್ ನಿರ್ದೇಶಿಸಿರುವ ಈ ಸಿನೆಮಾ ಪಿವಿಆರ್ ನಿರ್ದೇಶಕ ವಿರಳ ವಿಭಾಗದಲ್ಲಿ ಬಿಡುಗಡೆಯಾಗಲಿದ್ದು ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿ ಪ್ರದರ್ಶನ ಕಾಣಲಿದೆ.
ಎಲೆ ಮರೆ ಕಾಯಿಯಾಗಿರುವ ಭಾರತದಲ್ಲಿನ ಅಂಧ ಚೆಸ್ ಲೋಕದ ಬಗ್ಗೆ ಈ ಸಿನೆಮ ಮಾಡಲಾಗಿದೆ. ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಚಿತ್ರೀಕರಣ ಮಾಡಿರುವ ಈ ಸಾಕ್ಷ್ಯಚಿತ್ರ ಮೂರು ಯುವ ಅಂಧ ಚೆಸ್ ಆಟಗಾರರ ಸುತ್ತ ಹೆಣೆಯಲಾಗಿದೆ. ಅವರಲ್ಲಿ ಒಬ್ಬ ರಾಷ್ಟ್ರಮಟ್ಟದ ಹಾಗೂ ವಿಶ್ವ ಮಟ್ಟದ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕಥೆಯನ್ನು ಕೂಡ ಹೇಳಲಿದೆಯಂತೆ.
ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಈ ಸಾಕ್ಷ್ಯಚಿತ್ರದಲ್ಲಿ ಅಂಧ ಚೆಸ್ ಆಟಗಾರರಾದ ಚಾರುದತ್ತ ಜಾಧವ್, ದರ್ಪಣ್ ಇನಾನಿ, ಸಾಯಿ ಕೃಷ್ಣ ಮತ್ತು ಅನಂತ್ ಕುಮಾರ್ ನಾಯಕ್ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


