'ರನ್ನ'ನಿಗೆ 'ಚಿನ್ನ' ಸಿಗುತ್ತಿಲ್ಲವಂತೆ
ನಟ ಸುದೀಪ್ ಅಭಿನಯದ, ಕೆ ಎಸ್ ರವಿಕುಮಾರ್ ನಿರ್ದೇಶನದ ದ್ವಿಭಾಷಾ (ಕನ್ನಡ ಮತ್ತು ತಮಿಳು) ಚಲನಚಿತ್ರ ಚಿತ್ರೀಕರಣಕ್ಕೆ ಸಿದ್ಧವಾಗಿದೆ.

ಬೆಂಗಳೂರು: ನಟ ಸುದೀಪ್ ಅಭಿನಯದ, ಕೆ ಎಸ್ ರವಿಕುಮಾರ್ ನಿರ್ದೇಶನದ ದ್ವಿಭಾಷಾ (ಕನ್ನಡ ಮತ್ತು ತಮಿಳು) ಚಲನಚಿತ್ರ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಆದರೆ ನಿರ್ಮಾಪಕ ಸೂರಪ್ಪ ಬಾಪು ಹೇಳುವ ಪ್ರಕಾರ ಎಲ್ಲವೂ ಸಿದ್ದವಾಗಿದೆ ಆದರೆ, ನಾಯಕ ನಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಮುಂದುವರೆಯಲಾಗುತ್ತಿಲ್ಲ ಎಂದಿದ್ದಾರೆ.
"ಈ ಯೋಜನೆಗೋಸ್ಕರ ನಾಯಕ ನಟಿಯ ಆಯ್ಕೆಗೋಸ್ಕರ ಎಷ್ಟು ಜನರ ಮುಖ ನೋಡಿದ್ದೇನೋ ಲೆಕ್ಕವೇ ಇಲ್ಲ. ಸುದೀಪ್ ಸಾಮರ್ಥ್ಯಕ್ಕೆ ಸರಿಸಮನಾಗಬಲ್ಲ ನಾಯಕಿಯ ಶೋಧಕಾರ್ಯ ಮುಂದುವರೆಯುತ್ತಲೇ ಇದೆ. ಅಲ್ಲದೆ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಸಿನೆಮಾ ನಿರ್ಮಿಸಲಾಗುತ್ತಿರುವುದರಿಂದ ಸಶಕ್ತ ನಾಯಕನಟಿಯ ಅವಶ್ಯಕತೆ ಇದೆ" ಎನ್ನುತ್ತಾರೆ ನಿರ್ಮಾಪಕ.
ಇವರು ಸೂಕ್ತ ಎಂದುಕೊಂಡಿರುವ ನಾಯಕ ನಟಿ ಇವರಿಗೆ ಸಮಯ ನೀಡುತ್ತಿಲ್ಲವಂತೆ. "ಕೆ ಎಸ್ ರವಿಕುಮಾರ್ ಒಳಗೊಂಡಂತೆ ನಮ್ಮ ಇಡೀ ತಂಡ ಸೂಕ್ತವಾದ ಹುಡುಗಿಗೆ ಹುಡುಕಾಟ ನಡೆಸಿದೆ. ಬೇರೆಲ್ಲ ಸಿದ್ಧವಿದ್ದರು ಮುಂದುವರೆಯಲಾಗುತ್ತಿಲ್ಲ. ಆದುದರಿಂದ ಇದಕ್ಕಾಗಿ ನಾನು ತೆರೆದ ಆಡಿಶನ್ ನಡೆಸಿದ್ದೇನೆ. ಸುದೀಪ್ ಎದುರು ನಟಿಸಲು ಇಚ್ಚಿಸುವವರು ಹಾಗು ಅವರ ಸಾಮರ್ಥ್ಯವನ್ನು ಸರಿಗಟ್ಟಬಲ್ಲವರು ನನ್ನ ಈ ಈಮೇಲ್ ವಿಳಾಸಕ್ಕೆ (rambabuproductions@gmail.com) ತಮ್ಮ ಫೋಟೋ ಮತ್ತು ಸ್ವವಿರಗಳನ್ನು ಕಳುಹಿಸಬಹುದು ಎನ್ನುತ್ತಾರೆ" ಸೂರಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


