ಮೊದಲ ದಿನವೇ ರು.40 ಕೋಟಿ
ದೇಶಾದ್ಯಂತ ಬಹುಭಾಷಾ ಚಿತ್ರ ಬಾಹುಬಲಿ ಧೂಳೆಬ್ಬಿಸಿದೆ. ನಿಮಿಷಕ್ಕೆರಡು ಕೋಟಿ ಖರ್ಚು ಮಾಡಿದ ಚಿತ್ರವೆಂದೇ ಪ್ರಚಾರ ಪಡೆದ...

ಹೈದರಾಬಾದ್: ದೇಶಾದ್ಯಂತ ಬಹುಭಾಷಾ ಚಿತ್ರ ಬಾಹುಬಲಿ ಧೂಳೆಬ್ಬಿಸಿದೆ. ನಿಮಿಷಕ್ಕೆರಡು ಕೋಟಿ ಖರ್ಚು ಮಾಡಿದ ಚಿತ್ರವೆಂದೇ ಪ್ರಚಾರ ಪಡೆದ ರಾಜಮೌಳಿ-ಪ್ರಭಾಸ್ ಕಾಂಬಿನೇಷನ್ನಿನ ಬಾಹುಬಲಿ ವಿಶ್ವಾದ್ಯಂತ 4 ಸಾವಿರಕ್ಕೂ ಹೆಚ್ಚು ಥೇಟರುಗಳಲ್ಲಿ ಬಿಡುಗಡೆಯಾಗಿದ್ದು, ಭಾರತದ ಅತ್ಯಂತ ದುಬಾರಿ ಚಿತ್ರವೆಂದೇ ಜನರಲ್ಲಿ ಕ್ರೇಜ್ ಹುಟ್ಟಿಸಿದೆ. ದೇಶಿಯ ಚಿತ್ರಮಂದಿರಗಳಲ್ಲಿ ಶುಕ್ರವಾರ ಮೊದಲ ದಿನವೇ ತೆಲುಗು ಆವೃತ್ತಿಯ ಗಳಿಕೆ ಏನಿಲ್ಲವೆಂದರೂ ರು. 40 ಕೋಟಿ ದಾಟುವ ಸಾಧ್ಯತೆ ಇದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ರು. 8.20 ಕೋಟಿ ಬಾಚಿಕೊಂಡಿದೆ. ಇದರ ಜತೆಗೆ ಅಮೆರಿಕದಲ್ಲಿ ಪಿಕೆ ಸಿನಿಮಾದ ಹಣಗಳಿಕೆಯ ದಾಖಲೆಯನ್ನೂ ಹಿಂದಿಕ್ಕಿದ ಹೆಗ್ಗಳಿಕೆ ಪಡೆದು ಕೊಂಡಿದೆ.
ಬೆಳಗಿನ ಜಾವವೇ ಪ್ರದರ್ಶನ ಶುರು: ಆಂಧ್ರ ಮತ್ತು ತೆಲಂಗಾಣದಲ್ಲಿ ಬೆಳಗಿನ ಜಾವವೇ ಪ್ರದರ್ಶನ ಶುರು ವಾಗಿ ಥೇಟರುಗಳ ಸುತ್ತಮುತ್ತ ಪ್ರೇಕ್ಷಕರನ್ನು ನಿಯಂತ್ರಿ ಸುವುದೇ ಪೊಲೀಸರಿಗೆ ಹರಸಾಹಸವಾಗಿ ಹೋಗಿತ್ತು. ಮುಂಗಡ ಬುಕಿಂಗ್ಗೂ ಆನ್ಲೈನ್ನಲ್ಲಿ ಟ್ರಾಫಿಕ್ ಜಾಮ್ ಆದ ಕಾರಣ, ಸರ್ವರ್ಗಳೂ ಸ್ಥಗಿತಗೊಂಡಿತ್ತೆಂದು ತಿಳಿದುಬಂದಿದೆ.
ಕೇರಳದಲ್ಲೂ ಭರ್ಜರಿ ಪ್ರತಿಕ್ರಿಯೆ: ಕೇರಳದಾದ್ಯಂತ 84 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಮುಂದಿನ ವಾರ ದಿಂದ ಇನ್ನೂ 100 ಚಿತ್ರಮಂದಿರಗಳಿಗೆ ವಿಸ್ತರಣೆಯಾಗಲಿದೆ. ಈ ನಡುವೆ ಪರಭಾಷಾ ಚಿತ್ರವಾದ ಬಾಹುಬಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದನ್ನು ವಿರೋಧಿಸಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ಕ್ಕೆ ಕೇರಳ ಚಲನಚಿತ್ರ ರಂಗ ದೂರು ಕೂಡ ಸಲ್ಲಿಕೆಯಾಗಿದೆ ಎಂದು ಹೇಳಲಾಗಿದೆ.
ಟ್ರೆಂಡಿಂಗ್: ಬಾಹುಬಲಿಗೆ ಟ್ವಿಟರ್ಗಿಂತ ಫೇಸ್ಬುಕ್ ಟ್ರೆಂಡಿಂಗ್ ಹೆಚ್ಚಾಗಿದ್ದು, ಬೆಳಗ್ಗೆ 9ಗಂಟೆಯಿಂದಲೇ ಪುಂಖಾನುಪುಂಖ ವಿಮರ್ಶೆಗಳೂ ಹೊರಬಂದಿವೆ. ಥೇಟರ್ ಮುಂದಿನ ಕ್ಯೂನಿಂದ ಹಿಡಿದು ಸ್ಕ್ರೀನ್ ಮುಂದೆ ಹುಚ್ಚೆದ್ದು ಕುಣಿಯುವ ರೀತಿಯ ಫೋಟೋಗಳು ಹರಿದಾಡಿ ಇನ್ನಷ್ಟು ಕ್ರೇಜ್ ಹೆಚ್ಚಿ ಸಿವೆ. ರು.150ರ ಟಿಕೆಟ್ ರು. 5000ಕ್ಕೆ ಕಾಳಸಂತೆಯಲ್ಲಿ ಮಾರಾಟವಾಗಿದ್ದರೆ, ಆಂಧ್ರದ ಕಾಲೇಜಿ ನಲ್ಲಿ ವಿದ್ಯಾರ್ಥಿ ಗಳು ಬಾಹುಬಲಿ ಚಿತ್ರಕ್ಕೆ ಹೋಗಲು ರಜೆ ಚೀಟಿ ಕಳಿಸಿ, ಟೀಚರ್ಗೂ ಟಿಕೆಟ್ ಬುಕ್ ಮಾಡಿ ಕರೆ ದಿರುವ ತಮಾಷೆ ಪ್ರಸಂಗಗಳೂ ಕಂಡುಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


