ಸಿನಿಮಾ ಸುದ್ದಿ

ಗಿನ್ನಿಸ್ ದಾಖಲೆ ಸೇರಿದ ಬಾಹುಬಲಿ ಪೋಸ್ಟರ್!

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ರಿಲೀಸ್‌ಗೆ ಮುನ್ನವೇ ಗಿನ್ನಿಸ್ ದಾಖಲೆಗೆ ಸೇರ್ಪಡೆ ಸೇರಿ ಸುದ್ದಿಯಾಗಿದೆ...

ಗಿನ್ನಿಸ್ ದಾಖಲೆ ಸೇರಿದ ಬಾಹುಬಲಿ ಪೋಸ್ಟರ್!
ಬಾಹುಬಲಿ ಪೋಸ್ಟರ್
Published On :

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ರಿಲೀಸ್‌ಗೆ ಮುನ್ನವೇ ಗಿನ್ನಿಸ್ ದಾಖಲೆಗೆ ಸೇರ್ಪಡೆ ಸೇರಿ ಸುದ್ದಿಯಾಗಿದೆ. ಅದು ಹೇಗೆ ಅಂತೀರಾ? ಸದ್ಯ, ಗಿನ್ನಿಸ್ ದಾಖಲೆಗೆ ಸೇರಿರುವುದು ಬಾಹುಬಲಿ ಸಿನಿಮಾ ಅಲ್ಲ ಬಾಹುಬಲಿ ಪೋಸ್ಟರ್ . ಕೇರಳದ ಕೊಚ್ಚಿಯಲ್ಲಿ ನಡೆದ ಬಾಹುಬಲಿ ಮಲಯಾಳಂ ಆವೃತ್ತಿಯ ಸಂಗೀತ ಬಿಡುಗಡೆಯ ಸಂದರ್ಭದಲ್ಲಿ ಬೃಹತ್ ಪೋಸ್ಟರ್‌ವೊಂದನ್ನು ನಿರ್ಮಿಸಲಾಗಿತ್ತು. ಈ ಬೃಹತ್ ಪೋಸ್ಟರ್ ಈಗ ಗಿನ್ನಿಸ್ ದಾಖಲೆಗೆ ಸೇರಿದೆ. 51, 961.32 ಚ.ಮೀ ದೊಡ್ಡಗಾಗಿರುವ ಪೋಸ್ಟರ್ ಆಗಿದೆ ಇದು.

ಬಾಹುಬಲಿ ಸಿನಿಮಾದ ಮಲಯಾಳಂ ಆವೃತ್ತಿ ಸಂಗೀತ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಗಿತ್ತು. ಈ ಸಮಾರಂಭದಲ್ಲಿ ನಿರ್ದೇಶಕ ಪ್ರಿಯದರ್ಶನ್, ಬಾಹುಬಲಿ ಚಿತ್ರದ ತಾರೆಗಳಾದ ಪ್ರಭಾಸ್, ರಾಣಾ ದುಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ನಿರ್ಮಾಪಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.