ಹಂಗಾಮ ಮಾಡಿದ ಪುನೀತ್ ಪವರ್!
ಭಾರತದ ಮೊದಲ ಹಾಗೂ ಅತ್ಯಂತ ಬೇಡಿಕೆಯ ಡಿಜಿಟಲ್ ಮನರಂಜನಾ...

ಭಾರತದ ಮೊದಲ ಹಾಗೂ ಅತ್ಯಂತ ಬೇಡಿಕೆಯ ಡಿಜಿಟಲ್ ಮನರಂಜನಾ ಸ್ಥಾನ ಹಂಗಾಮ ಡಾಟ್ ಕಾಮ್, ಇತ್ತೀಚೆಗೆ ಕನ್ನಡ ಚಲನಚಿತ್ರಗಳ ಟಾಪ್ 50 ಹಾಡುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುನೀತ್ ಅಭಿನಯದ ಪವರ್ ಚಿತ್ರದ 'ಗುರುವಾರ ಸಂಜೆ...' ಹಾಡಿಗೆ ಅಗ್ರ ಸ್ಥಾನ ಲಭಿಸಿದ್ದರೆ, ಮಾಣಿಕ್ಯ ಚಿತ್ರದ ಸಂಗೀತಕ್ಕೆ ಕೇಳುಗರ ಟಾಪ್ 15 ಪಟ್ಟಿಯಲ್ಲಿ ಪ್ರಥಮ ಸ್ಥಾನ ಸಿಕ್ಕಿದೆ.
2015ರಲ್ಲಿ ಬಿಡುಗಡೆಯಾದ ಚಲನಚಿತ್ರಗಳ ಅತ್ಯುತ್ತಮ ಹಾಡುಗಳ ಸಂಗ್ರಹದಿಂದ ಆನ್‌ಲೈನ್ ಸ್ಟ್ರೀಮಿಂಗ್, ಡೌನ್‌ಲೋಡ್‌ಗಳು ಮತ್ತು ಹಾಡಿನ ಜನಪ್ರಿಯತೆ ಹಾಗೂ ಫೇಸ್‌ಬುಕ್ ಲೈಕ್‌ಗಳನ್ನು ಆಧರಿಸಿ ಇದನ್ನು ಆಯ್ಕೆ ಮಾಡಲಾಗುತ್ತದೆ.
ಈ ಪ್ರಕಾರ ಕನ್ನಡದ ಮೊದಲ 10 ಅತ್ಯಂತ ಜನಪ್ರಿಯ ಹಾಡುಗಳ ಪೈಕಿ, ಮೊದಲ ಸ್ಥಾನದಲ್ಲಿ ಗುರುವಾರ ಸಂಜೆ ಹಾಡಿದ್ದರೆ, ಪವರ್, ಮಾಣಿಕ್ಯ ಹಾಗೂ ಉಳಿದವರು ಕಂಡಂತೆ ಚಿತ್ರದ ಹಾಡುಗಳು ಟಾಪ್ ಟೆನ್ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿವೆ.
ಪವರ್‌ಸ್ಟಾರ್ ಪುನೀತ್ 2014ರ ಅತ್ಯಂತ ಜನಪ್ರಿಯ ಗಾಯಕ ಎನ್ನುವ ಹೆಮ್ಮೆಗೆ ಪಾತ್ರರಾಗಿದಾರೆ.
ಬಾಲಿವುಡ್ ಮ್ಯೂಸಿಕ್‌ನಲ್ಲಿ ಅರಿಜಿತ್ ಸಿಂಗ್ 2014ರ ಅತ್ಯಂತ ಜನಪ್ರಿಯ ಗಾಯಕ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ನಟಿ ಪ್ರಿಯಾಂಕ ಚೋಪ್ರಾ 'ಐ ಕಾಂಟ್ ಮೇಕ್ ಯು ಲವ್ ಮೀ' ಹಾಡಿಗಾಗಿ 2014ರ ಟಾಪ್ 10 ಅತ್ಯಂತ ಜನಪ್ರಿಯ ಅಂತಾರಾಷ್ಟ್ರೀಯ ಕಲಾವಿದರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೇಸಿ ಕಲಾಕಾರ್ ಹಾಗೂ ಶಾರೂಖ್ ಖಾನ್ ಅಭಿನಯದ ಹ್ಯಾಪಿ ನ್ಯೂ ಇಯರ್ ಹಾಡುಗಳು 2014ರ ಎರಡು ಅತ್ಯಂತ ಜನಪ್ರಿಯ ಆಲ್ಬಂಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


