ಡ್ರಾಮಾ ಕ್ವೀನ್ ಗೌಹರ್!
ಇಂಡಿಯನ್ ರಾ ಸ್ಟಾರ್ ರಿಯಾಲಿಟಿ ಶೋ ನಿರೂಪಕಿ ನಟಿ ಗೌಹರ್ ಖಾನ್ ಕೆನ್ನೆ ಊದಿಸಿದ...

ಇಂಡಿಯನ್ ರಾ ಸ್ಟಾರ್ ರಿಯಾಲಿಟಿ ಶೋ ನಿರೂಪಕಿ ನಟಿ ಗೌಹರ್ ಖಾನ್ ಕೆನ್ನೆ ಊದಿಸಿದ ಪ್ರೇಕ್ಷಕನೊಬ್ಬ ಈಗ ಕೆನ್ನೆ ತಟ್ಟಿದ್ದ ಪ್ರಸಂಗದ ಅಸಲಿ ಕಥೆ ಹೇಳಿದ್ದಾನೆ. ಈ ಘಟನೆಯಿಂದ ನನಗೆ ನೋವಾಗಿದೆ ಆದರೆ ನಾನು ಧೃತಿಗೆಟ್ಟಿಲ್ಲ ಎಂದು ಕೆನ್ನೆ ಊದಿಸಿಕೊಂಡ ಗೌಹರ್ ಸುಧೀರ್ಘ ಪತ್ರ ಬರೆದು ಮಾಧ್ಯಮಗಳಿಗೆ ನೀಡಿದ್ದರು.
ಗೌಹರ್ ಕೆನ್ನೆ ತಟ್ಟಿದ್ದ ಆಗುಂತಕನ ವಿರುದ್ಧ ಅಭಿಮಾನಿಗಳು, ಬಾಲುವುಡ್ ಸಹದ್ಯೋಗಿಗಳು ಹರಿಹಾಯ್ದಿದ್ದರು. ಆದರೆ, ಅಸಲಿಗೆ ರಿಯಾಲಿಟಿ ಶೋ ಟಿಆರ್‌ಪಿ ಹೆಚ್ಚಳಕ್ಕಾಗಿ ಕೆನ್ನೆಗೆ ಬಾರಿಸುವ ಪ್ರಸಂಗವನ್ನು ಗೌಹರ್ ಅವರೇ ಸೃಷ್ಟಿಸಿದ್ದರಂತೆ! ಆರೋಪಿಗೆ ಸುಪಾರಿ ನೀಡಿ ಈ ರೀತಿ ನಡೆದುಕೊಳ್ಳುವಂತೆ ಹೇಳಿದ್ದರಂತೆ! ಗೌಹರ್ ಖಾನ್ ಕಪಾಳಮೋಕ್ಷ ಪಬ್ಲಿಸಿಟಿ ಸ್ಟಂಟ್ ಅಂತೆ! ಈ ರಿಯಾಲಿಟಿ ಶೋನ ಫೈನಲ್ ಎಪಿಸೋಡ್‌ನಲ್ಲಿ ಗೌಹರ್ ಅವರಿಗೆ ನಾನು ಕೆನ್ನೆಗೆ ಬಾರಿಸಿ ಅವರ ಉಡುಪಿನ ಬಗ್ಗೆ ಕಾಮೆಂಟ್ ಮಾಡಬೇಕಿತ್ತು.
ನಾನು ಅದರಂತೆ ನಡೆದುಕೊಂಡೆ ಎಂದು ಆತ ಹೇಳಿದ್ದಾನೆ. ಆದರೆ ಈ ಬಗ್ಗೆ ಡ್ರಾಮಾ ಕ್ವೀನ್ ಗೌಹ್ ತುಟಿ ಪಿಟಿಕ್ ಅಂದಿಲ್ಲ. ಅಬ್ಬಾ! ಪಬ್ಲಿಸಿಟಿಗಾಗಿ ಏನೆಲ್ಲಾ ಮಾಡ್ತಾರಪ್ಪಾ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


