ಬಾಫ್ಟಾ: ಭಾರತದ 'ದ ಲಂಚ್ ಬಾಕ್ಸ್' ಹಿಂದಿಕ್ಕಿದ ಪೋಲಿಶ್ ಸಿನೆಮಾ
ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಭಾರತದ ಸಿನೆಮಾ 'ದ ಲಂಚ್ ಬಾಕ್ಸ್' ಬಿ ಎ ಎಫ್ ಟಿ ಎ ೨೦೧೫

ಲಂಡನ್: ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಭಾರತದ ಸಿನೆಮಾ 'ದ ಲಂಚ್ ಬಾಕ್ಸ್' ಬಿ ಎ ಎಫ್ ಟಿ ಎ ೨೦೧೫ ಪ್ರಶಸ್ತಿಗಳ 'ಇಂಗ್ಲಿಶೇತರ ಸಿನೆಮಾ'ಗಳ ವಿಭಾಗದಲ್ಲಿ ಪ್ರಶಸ್ತಿ ಪಡೆಯಲು ವಿಫಲವಾಗಿದೆ. ಪೋಲಿಶ್-ಡ್ಯಾನಿಶ್ ಸಿನೆಮಾ 'ಇಡಾ' ಈ ಪ್ರಶಸ್ತಿಯನ್ನು ಗಳಿಸಿದೆ.
ಬ್ರಿಟಿಶ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಶನ್ ಆರ್ಟ್ಸ್ (ಬಾಫ್ಟಾ) ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ತನ್ನ ೬೮ ನೆ ಆವೃತ್ತಿಯ ಪ್ರಶಸ್ತಿಗಳನ್ನು ಘೋಷಿಸಿದೆ.
ಇರ್ಫಾನ್ ಖಾನ್ ಮತ್ತು ನಿಮ್ರತ್ ಕೌರ್ 'ದ ಲಂಚ್ ಬಾಕ್ಸ್' ಸಿನೆಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ಸ್ಟೀಫನ್ ಫ್ರೆ ನಡೆಸಿಕೊಟ್ಟ ರಾಯಲ್ ಒಪೇರಾ ಹೌಸ್ ನಲ್ಲಿ ನಡೆದ ಅಂತರಾಷ್ಟ್ರೀಯ ತಾರೆಗಳು ನೆರೆದಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


