'ಪೊಲೀಸ್ ಶಿವರಾಜ ಕುಮಾರ್ ವೀರಪ್ಪನ್ ಗಿಂತಲೂ ಭಯಂಕರ'
ನಿರ್ದೇಶಕ ಆರ್ ಜಿ ವಿ ಪ್ರಕಾರ 'ಕಿಲ್ಲಿಂಗ್ ವೀರಪ್ಪನ್ ಸಿನೆಮಾದಲ್ಲಿ' 'ಶಿವರಾಕ್ ಕುಮಾರ್ ಅವರ ಪಾತ್ರ ವೀರಪ್ಪನ್ ಗಿಂತಲೂ ಭಯಂಕರ' ಎಂದಿದ್ದಾರೆ.

ಬೆಂಗಳೂರು: ನಿರ್ದೇಶಕ ಆರ್ ಜಿ ವಿ ಪ್ರಕಾರ 'ಕಿಲ್ಲಿಂಗ್ ವೀರಪ್ಪನ್ ಸಿನೆಮಾದಲ್ಲಿ' 'ಶಿವರಾಕ್ ಕುಮಾರ್ ಅವರ ಪಾತ್ರ ವೀರಪ್ಪನ್ ಗಿಂತಲೂ ಭಯಂಕರ' ಎಂದಿದ್ದಾರೆ.
ಇದಕ್ಕೆ ಹೂಂಗುಟ್ಟುವ ನಟ "ಒಬ್ಬ ರಾಕ್ಷಸನ ಸಂಹಾರಕ್ಕೆ ಮತ್ತೊಬ್ಬ ರಾಕ್ಷಸನಾಗಿ ರೂಪಾಂತರಗೊಳ್ಳಬೇಕು ಮತ್ತು ಈ ಪಾತ್ರಕ್ಕೆ ಆ ರೂಪಾಂತರ ಅವಶ್ಯಕವಾಗಿತ್ತು" ಎನ್ನುತ್ತಾರೆ ಶಿವರಾಜಕುಮಾರ್.
ಈಗಾಗಲೇ ವೀರಪ್ಪನ್ ಬಗ್ಗೆ ಬಂದಿರುವ ಎರಡು ಸಿನೆಮಾಗಳಿಗಿಂತ ಹೇಗೆ ಭಿನ್ನ ಎಂಬ ಪ್ರಶ್ನೆಗೆ "ಇಲ್ಲಿ ಆರ್ ಜಿ ವಿ ಅವರ ಶೈಲಿ ಎದ್ದು ಕಾಣುತ್ತದೆ. ಹಿಂದೆಂದು ತೋರಿಸದ ವೀರಪ್ಪನ್ ಜೀವನವನ್ನು ಇಲ್ಲಿ ತೋರಿಸಲಾಗಿದೆ" ಎನ್ನುತ್ತಾರೆ ಶಿವಣ್ಣ.
ಆರ್ ಜಿ ವಿ ಹಲವಾರು ಪ್ರಾಕಾರಗಳ ಸಿನೆಮಾಗಳಲಿ ಕೈಯಾಡಿಸಿದವರು ಎನ್ನುವ ಶಿವರಾಜ ಕುಅಮಾರ್ "ನೀವು ಯಾವುದೇ ಪ್ರಾಕಾರದ ಸಿನೆಮಾ ಹೇಳಿ ಅವರು ಅದನ್ನು ಪ್ರಯತ್ನಿಸಿದ್ದಾರೆ. ಮತ್ತು ಅವರ ವಿಷಯಗಳು ದೊಡ್ಡ ನಟರಿಗೆ ಸಂಬಧಿಸಿದವು. ಅಮಿತಾಬ್ ಬಚ್ಚನ್, ಅಮೀರ್ ಖಾನ್, ವೆಂಕಟೇಶ್, ನಾಗಾರ್ಜುನ, ಜೆ ಡಿ ಚಕ್ರವರ್ತಿ, ಅಜಯ್ ದೇವಗನ್, ವಿವೇಕ್ ಓಬಿರಾಯ್ ಮೊದಲಾದವರು ನಟಿಸಿದ್ದಾರೆ. ಪ್ರತಿ ಸಿನೆಮಾದಲ್ಲಿ ಏನಾದರೊಂದು ಹೊಸತಿರುತ್ತದೆ ಹಾಗೆಯೇ 'ಕಿಲ್ಲಿಂಗ್ ವೀರಪ್ಪನ್' ಕೂಡ ಅವರ ಅದ್ಭುತ ಸಿನೆಮಾಗಳಲ್ಲೊಂದು" ಎಂದು ವಿವರಿಸುತ್ತಾರೆ.
ನಾಳೆ ವಿಶ್ವದಾದ್ಯಂತ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


