ದರ್ಶನ್ 'ವಿರಾಟ್' ಟೀಸರ್ ಬಿಡುಗಡೆ
ಮೂರು ವರ್ಷದಿಂದ ಚಿತ್ರೀಕರಣಗೊಳ್ಳುತ್ತಿರುವ ದರ್ಶನ್ ಅಭಿನಯದ 'ವಿರಾಟ್' ಚಲನಚಿತ್ರದ ಅಧಿಕೃತ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು ವೈರಲ್

ಬೆಂಗಳೂರು: ಮೂರು ವರ್ಷದಿಂದ ಚಿತ್ರೀಕರಣಗೊಳ್ಳುತ್ತಿರುವ ದರ್ಶನ್ ಅಭಿನಯದ 'ವಿರಾಟ್' ಚಲನಚಿತ್ರದ ಅಧಿಕೃತ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು ವೈರಲ್ ಆಗುವತ್ತ ಮುನ್ನುಗ್ಗಿದೆ. "ವಿರಾಟ್ ಪಾತ್ರ ನಿರ್ವಹಿಸಿರುವ ನಟನ ಮೊದಲ ನೋಟವನ್ನು ಟೀಸರ್ ನೀಡುತ್ತದೆ" ಎನ್ನುತ್ತಾರೆ ನಿರ್ದೇಶಕ ಎಚ್ ವಾಸು. "ವಿರಾಟ್ ಕಮರ್ಶಿಯಲ್ ಸಿನೆಮಾಗೆ ಬೇಕಾದ ಎಲ್ಲ ಅಂಶಗಳನ್ನೂ ಹೊಂದಿದೆ" ಎನ್ನುತ್ತಾರೆ.
ದರ್ಶನ್ ಎದುರು ಮೂರು ನಟಿಯರು ವಿದಿಶಾ ಶ್ರೀವಾಸ್ತವ, ಇಶಾ ಚಾವ್ಲಾ ಮತ್ತು ಚೈತ್ರ ಚಂದ್ರನಾಥ್ ಅವರು ನಟಿಸಿದ್ದಾರೆ.
ಸಿನೆಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಡಬ್ಬಿಂಗ್ ಹಂತದಲ್ಲಿದೆ. ಸಿನೆಮಾ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ನಿರ್ದೇಶಕ.
ಸಿ ಕಲ್ಯಾಣ್ ನಿರ್ಮಾಣದ 'ವಿರಾಟ್' ಸಿನೆಮಾಗೆ ಎಂ ಎಸ್ ರಮೇಶ್ ಸ್ಕ್ರೀನ್ ಪ್ಲೇ ಬರೆದಿದ್ದು, ವಿ ಹರಿಕೃಷ್ಣ ಅವರ ಸಂಗೀತವಿದೆ. ಸುಹಾಸಿನಿ ಮಣಿರತ್ನಂ, ಸುಮಲತಾ, ರವಿಶಂಕರ್, ಶ್ರೀನಿವಾಸ್ ಮೂರ್ತಿ ಸಹನಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


