ರಜನಿಕಾಂತ್ ಮೇಲೆ ಸಿನೆಮಾ ಮಾಡಲು ೩೦೦ ಕೋಟಿ ಬೇಕು: ಸಾಜಿದ್
ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಧರಿಸಿ ಸಿನೆಮಾ ಮಾಡಲು ೩೦೦ ಕೋಟಿ ರೂ ಬೇಕಾಗುತ್ತದೆ ಆದುದರಿಂದ ಅದು ಕಷ್ಟ ಎಂದಿದ್ದಾರೆ ನಿರ್ದೇಶಕ ಸಾಜಿದ್ ಖಾನ್.

ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಧರಿಸಿ ಸಿನೆಮಾ ಮಾಡಲು ೩೦೦ ಕೋಟಿ ರೂ ಬೇಕಾಗುತ್ತದೆ ಆದುದರಿಂದ ಅದು ಕಷ್ಟ ಎಂದಿದ್ದಾರೆ ನಿರ್ದೇಶಕ ಸಾಜಿದ್ ಖಾನ್.
"ನಾವದನ್ನು (ಸಿನೆಮಾ) ಮಾಡಲಾಗುವುದಿಲ್ಲ. ಆದರೆ ನಾವು ಮಾಡಬೇಕಿದ್ದರೆ, ಏಕಾಗಬಾರದು? ಮಹತ್ವಾಕಾಂಕ್ಷೆಯಾಗಿ ತೆಗೆದುಕೊಳ್ಳಬೇಕು... ಅವರ ಮೇಲೆ ಸಿನೆಮಾ ಮಾಡಲು ೩೦೦ ಕೋಟಿಯಿಂದ ೪೦೦ ಕೋಟಿ ಬಜೆಟ್ ಬೇಕು" ಎಂದಿದ್ದಾರೆ ಸಾಜಿದ್.
"ರೋಬೋಟ್ ಮತ್ತು ಶಿವಾಜಿಯಂತಹ ಸಿನೆಮಾಗಳಲ್ಲಿ ಅವರನ್ನು ತೊಡಗಿಸಿಕೊಂಡ ಶಂಕರ್ ಅಂತಹ ನಿರ್ದೇಶಕರಿಗೆ ನನ್ನ ನಮನಗಳು" ಎಂದಿದ್ದಾರೆ.
ಅವರ ಬಗ್ಗೆ ಸಿನೆಮಾ ಮಾಡಬೇಕಾದರೆ ಬಹಳ ಎಚ್ಚರಿಕೆಯಿಂದರಬೇಕು ಏಕೆಂದರೆ ಅವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ ಎಂದು ಕೂಡ 'ಹೇ ಬೇಬಿ' ಸಿನೆಮಾ ನಿರ್ದೇಶಕರು ಹೇಳಿದ್ದಾರೆ.
"ಅವರನ್ನು ಸರಿಯಾದ ಬೆಳಕಿನಲ್ಲಿ ತೋರಿಸಿಸಬೇಕು. ಸಿನೆಮಾಗಿಂತಲೂ ನಟ ದೊಡ್ಡವನಾಗುವುದು ವಿರಳ ಆದರೆ ರಜನಿಕಾಂತ್ ಅದಕ್ಕೆ ಸರಿಯಾದ ಉದಾಹರಣೆ. ನೀವು ಸಿನೆಮಾ ನೋಡುವುದಿಲ್ಲ ಬದಲಾಗಿ ಅವರನ್ನು ನೋಡುತ್ತೀರಿ ಮತ್ತು ಸಿನೆಮಾ ಅವರ ಸುತ್ತ ಸುತ್ತುತ್ತದೆ ಅಷ್ಟೇ" ಎಂದು ಸೂಪರ್ ಸ್ಟಾರ್ ಅವರ ಅತಿ ದೊಡ್ಡ ಅಭಿಮಾನಿ ಎಂದು ಕರೆದುಕೊಳ್ಳುವ ನಿರ್ದೇಶಕ ಸಾಜಿದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


