ಸಿನಿಮಾ ಸುದ್ದಿ

ತಾರಾ ಬಲ ತೋರಿದ ಮದುವೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಶಿವರಾಜ್ ಕುಮಾರ್ ಪುತ್ರಿ...

ತಾರಾ ಬಲ ತೋರಿದ ಮದುವೆ
ಶುಭ ಹಾರೈಸಿದ ಕಿಚ್ಚ ಸುದೀಪ್
Published On :

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಶಿವರಾಜ್ ಕುಮಾರ್ ಪುತ್ರಿ ಡಾ.ನಿರುಪಮಾ ಹಾಗೂ ಡಾ.ದಿಲೀಪ್ ಅವರ ವಿವಾಹ ಮಹೋತ್ಸವ, ಈ ವರ್ಷದ ಸ್ಮರಣೀಯ ಕಾರ್ಯಕ್ರಮಗಳಲ್ಲೊಂದಾಯ್ತು. ಹೈ ಪ್ರೊಫೈಲ್ ತಾರೆಯರ ಆಗಮನ ವಿವಾಹಕ್ಕೆ ವಿಶೇಷ ಕಳೆ ನೀಡಿತು.

ಬೆಳಗ್ಗೆ ಏಳು ಗಂಟೆಯಿಂದಲೇ ನಾನಾ ಪೂಜೆ, ಸಂಪ್ರದಾಯಗಳು ನಡೆದವು. ಬಳಿಕ ನಟ ವಿನಯ್ ರಾಜ್‍ಕುಮಾರ್ ಮತ್ತು ಸಂಬಂಧಿಕರು ಬಿಲ್ಲು ಶಾಸ್ತ್ರದಲ್ಲಿ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದರು.

ವರನನ್ನು ಕಾಶಿಯಾತ್ರೆ ಕಳುಹಿಸುವ ಶಾಸ್ತ್ರ ವಿಶೇಷವಾಗಿತ್ತು. ಒಂಭತ್ತು ಗಂಟೆಗೆ ವಧು-ವರರು ಸಂಬಂಧಿಕರೊಂದಿಗೆ ಮಂಟಪ ಪ್ರವೇಶಿಸಿದರು. ಆನಂತರ ಅಂತರ್ಪಟ ಸರಿಸುವ ಶಾಸ್ತ್ರ ನಡೆಯಿತು. 9.30ಕ್ಕೆ ಡಾ.ದಿಲೀಪ್, ನಿರುಪಮಾ ಅವರಿಗೆ ಮಾಂಗಲ್ಯ ಧಾರಣೆ ಮಾಡಿದರು. ಈ ಶುಭಗಳಿಗೆಯಲ್ಲಿ ಗಣ್ಯಾತಿಗಣ್ಯರು, ಬಂಧುಗಳು, ಹಿತೈಷಿಗಳು ನವದಂಪತಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು. ಅಲ್ಲಿಂದ ಸಪ್ತಪದಿ ತುಳಿಯುವ ಶಾಸ್ತ್ರ ನಡೆಯಿತು. ಮಧ್ಯಾಹ್ನವೇ ಮನೆ ತುಂಬಿಸುವ ಶಾಸ್ತ್ರವೂ ನಡೆಯಿತು. ಹೀಗೆ ದಿನವಿಡೀ ನಡೆದ ಮದುವೆ ಆಚರಣೆಗಳಿಗೆ ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗದ ತಾರೆಯರೆಲ್ಲ ಆಗಮಿಸಿ, ಮೆರಗು ನೀಡಿದರು.

ಮುಂಜಾನೆಯ ಮುಹೂರ್ತದಲ್ಲಿ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ, ಕೇಂದ್ರ ಸಚಿವ ಅನಂತ್ ಕುಮಾರ್, ಸಚಿವರಾದ ಡಿ.ಕೆ.ಶಿವಕುಮಾರ್, ಆಂಜನೇಯ ಪಾಲ್ಗೊಂಡರು.

ತೆಲುಗು ಚಿತ್ರರಂಗದ ಹಿರಿಯ ನಟ ಹರಿಕೃಷ್ಣ , ನಾಗಾರ್ಜುನ್, ಶ್ರೀಕಾಂತ್, ರಾಜ್‍ಮೌಳಿ, ತಮಿಳಿನ ಶಿವಾಜಿ ಪ್ರಭು, ಪಿ. ವಾಸು, ಕನ್ನಡದ  ಸುದೀಪ್, ಉಪೇಂದ್ರ ದಂಪತಿ, ಜಗ್ಗೇಶ್ ದಂಪತಿ, ಸುಧಾರಾಣಿ, ಜಯಂತಿ, ಭಾರತಿ ವಿಷ್ಣುವರ್ಧನ್, ನಟ ಗಣೇಶ್ ಸೇರಿದಂತೆ ತಾರೆಯರ ದಂಡೇ ಆಗಮಿಸಿತ್ತು. ಸಂಜೆ ಸದಾನಂದ ಗೌಡ, ರಾಹುಲ್ ದ್ರಾವಿಡ್, ಡಿಎಂಕೆ ಮುಖಂಡ ಸ್ಟಾಲಿನ್, ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದರು. ಅಲ್ಲದೇ ರಾತ್ರಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಘಟಾನುಘಟಿ ನಾಯಕರು ಆಗಮಿಸಿ, ಕಾರ್ಯಕ್ರಮ ಕಳೆಗಟ್ಟುವ ಹಾಗೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.