ಸಿನಿಮಾ ಸುದ್ದಿ

ರುದ್ರಮ ದೇವಿ ಚಿತ್ರದ ಹಿಂದಿ ವಿತರಣೆ ಹಕ್ಕು ಆರ್.ಎಸ್ ಪ್ರೊಡಕ್ಷನ್ಸ್ ಪಾಲು

ಬಾಹುಬಲಿ ಚಿತ್ರದ ವಿತರಣೆ ಮಾಡಿದ್ದ ಆರ್.ಎಸ್ ಪ್ರೊಡಕ್ಷನ್ಸ್, ಈಗ ಮತ್ತೊಂದು ಬಹುನಿರೀಕ್ಷಿತ ಚಿತ್ರ 3 ಡಿ ಚಿತ್ರ ರುದ್ರಮ ದೇವಿಯ ಹಿಂದಿ ವಿತರಣಾ ಹಕ್ಕನ್ನು ಪಡೆದಿದೆ.

ರುದ್ರಮ ದೇವಿ ಚಿತ್ರದ ಹಿಂದಿ ವಿತರಣೆ ಹಕ್ಕು ಆರ್.ಎಸ್ ಪ್ರೊಡಕ್ಷನ್ಸ್ ಪಾಲು
ರುದ್ರಮ ದೇವಿ ಚಿತ್ರ
Published On :

ಬಾಹುಬಲಿ ಚಿತ್ರದ ವಿತರಣೆ ಮಾಡಿದ್ದ ಆರ್.ಎಸ್ ಪ್ರೊಡಕ್ಷನ್ಸ್, ಈಗ ಮತ್ತೊಂದು ಬಹುನಿರೀಕ್ಷಿತ ಚಿತ್ರ 3 ಡಿ ಚಿತ್ರ ರುದ್ರಮ ದೇವಿಯ ಹಿಂದಿ ವಿತರಣಾ ಹಕ್ಕನ್ನು ಪಡೆದಿದೆ.

ಅನುಷ್ಕಾ ಶೆಟ್ಟಿ, ಅಲ್ಲೂ ಅರ್ಜುನ್, ರಾಣಾ ದಗ್ಗುಭಾಟಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ರುದ್ರಮ ದೇವಿ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದ್ದು, ಅಪಾರ ನಿರೀಕ್ಷೆಯಿದೆ. ಹಿಂದಿಯಲ್ಲಿ ರುದ್ರಮದೇವಿ ಚಿತ್ರವನ್ನು ವಿಶ್ವಾದ್ಯಂತ ಬಿಡುಗಡೆ ಮಾಡುತ್ತೀವಿ ಎಂದು ಆರ್.ಎಸ್ ಪ್ರೊಡಕ್ಷನ್ಸ್ ನ ಆರ್.ಶ್ರೀನಿವಾಸ್, ಶ್ರೀಕಾಂತ್ ಹೇಳಿದ್ದಾರೆ.

ರುದ್ರಮ ದೇವಿ ಚಿತ್ರ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿರುವ ಆರ್.ಎಸ್ ಪ್ರೊಡಕ್ಷನ್ಸ್ ನವರು ಮುಂಬೈ ಯಲ್ಲೂ ಕಚೇರಿಯನ್ನು ಪ್ರಾರಂಭಿಸಿದ್ದು, ಇಂದು ಹೈದರಾಬಾದ್ ನಲ್ಲೂ ಒಂದು ಕಚೇರಿಗೆ ಚಾಲನೆ ನೀದಲಾಗುತ್ತದೆ.

ಎನ್.ಟಿ.ಆರ್ ಅವರೊಂದಿಗೆ ಈಗಾಗಲೇ ಸಿನಿಮಾಗಳನ್ನು ನಿರ್ಮಿಸಿದ್ದೇವೆ, ತೆಲುಗು ಚಿತ್ರ ರಂಗಕ್ಕೆ ಅನುಷ್ಕಾ ಶೆಟ್ಟಿ ಅವರನ್ನು ಪರಿಚಯಿಸಿದ್ದು ನಾವು ಎಂದು ಶ್ರೀನಿವಾಸ್ ಹೇಳಿದ್ದಾರೆ. ರುದ್ರಮದೇವಿ ಚಿತ್ರದೊಂದಿಗೆ ಮರಾಠಿ ಚಿತ್ರ ಹಿಂದಿಯಲ್ಲಿ ಬಿಡುಗಡೆ ಮಾಡುತ್ತೇವೆ. ಚಿತ್ರೀಕರಣ ಜನವರಿಯಿಂದ ನಡೆಯಲಿದೆ. ಆರ್.ಎಸ್ ಪ್ರಡಕ್ಷನ್ಸ್, ಕನ್ನಡದ ದನ ಕಯೋನು, ಜೆಸ್ಸಿ, ಭರ್ಜರಿ ಚಿತ್ರಗಳ ವಿತಣೆ ಹಕ್ಕನ್ನೂ ಪಡೆದಿದೆ  

ನಾಗಶೇಖರ್ ನಿರ್ದೇಶನದಲ್ಲಿ ಶೀಘ್ರವೇ ಹೊಸ ಚಿತ್ರವನ್ನು ಪ್ರಾರಂಭಿಸಲಿದ್ದು ಚೇತನ್ ನಾಯಕರಾಗಿರಲಿದ್ದಾರೆ. ನಾನಿ ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲಿ ವಿತರಣೆ ಮಾಡಲೂ ಕೇಳಿದ್ದು ಈ  ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.