ಸಿನಿಮಾ ಸುದ್ದಿ

ಉತ್ತಮವಾಗಿಲ್ಲ "ಉತ್ತಮ ವಿಲನ್" ಆರಂಭ

ನಟ ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಉತ್ತಮ ವಿಲನ್ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆಕಾಣಬೇಕಿತ್ತು. ಆದರೆ ಮೊದಲ ದಿನದ ಎಲ್ಲ ಪ್ರದರ್ಶನಗಳು ರದ್ದಾಗಿವೆ...

ಉತ್ತಮವಾಗಿಲ್ಲ "ಉತ್ತಮ ವಿಲನ್" ಆರಂಭ
ಉತ್ತಮ ವಿಲನ್ ಚಿತ್ರದ ಪೋಸ್ಟರ್
Published On :

ಬೆಂಗಳೂರು: ನಟ ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಉತ್ತಮ ವಿಲನ್ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆಕಾಣಬೇಕಿತ್ತು. ಆದರೆ ನಿರ್ಮಾಪಕ ಮತ್ತು ವಿತರಕರ ನಡುವಿನ ಗೊಂದಲದಿಂದಾಗಿ ಮೊದಲ ದಿನದ ಎಲ್ಲ ಪ್ರದರ್ಶನಗಳು ರದ್ದಾಗಿವೆ.

ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಚಿತ್ರ ಇಂದು ದೇಶಾದ್ಯಂತ ತೆರೆಕಾಣ ಬೇಕಿತ್ತು. ಆದರೆ ಚಿತ್ರ ನಿರ್ಮಾಪಕರು ಮತ್ತು ವಿತರಕರ ನಡುವಿನ ಆರ್ಥಿಕ ಸಮಸ್ಯೆಯಿಂದಾಗಿ ಮೊದಲ ದಿನದ ಶೋ ರದ್ದುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳು ತಿಳಿಸಿರುವಂತೆ ನಿರ್ಮಾಪಕರು ಮತ್ತು ವಿತರಕರ ನಡುವೆ ಭುಗಿಲೆದ್ದಿರುವ ಈ ವಿವಾದ ಬಗೆಹರಿದಲ್ಲಿ ಮಾತ್ರ ಉತ್ತಮ ವಿಲನ್ ಬಿಡುಗಡೆ ನಿರಾತಂಕವಾಗಿ ಆಗಲಿದೆ. ಇಲ್ಲದಿದ್ದಲ್ಲಿ ಉತ್ತಮ ವಿಲನ್ ಬಿಡುಗಡೆಗೆ ಅಡ್ಡಿಯುಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ರಿಲೀಸ್ ಗೆ ಸಿದ್ಧವಾಗಿದ್ದ ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಉತ್ತಮ ವಿಲನ್ ಚಿತ್ರ ವೀಕ್ಷಣೆಗಾಗಿ  ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಟಿಕೆಟ್ ಬುಕ್ ಮಾಡಿದ್ದರು. ಆದರೆ ಇಂದು ಚಿತ್ರ ಪ್ರದರ್ಶನ ನಡೆಯದ ಹಿನ್ನಲೆಯಲ್ಲಿ ಚಿತ್ರಮಂದಿರದ ಬಳಿ ನೆರೆದಿರುವ ಸಾವಿರಾರು ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಚೆನ್ನೈ, ಹೈದರಾಬಾದ್ ಸೇರಿದಂತೆ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಅಭಿಮಾನಿಗಳು ನಿರ್ಮಾಪಕ ಮತ್ತು ವಿತರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮೊದಲ ದಿನದ ಶೋ ರದ್ದಾಗಿರುವುದರಿಂದ ಮಾಲೀಕರು ಟಿಕೆಟ್ ಹಣವನ್ನು ವಾಪಸ್ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನ ಊರ್ವಶಿ ಥಿಯೇಟರ್ ಸೇರಿದಂತೆ ನಗರದ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ವಿಲನ್ ಚಿತ್ರ ವೀಕ್ಷಣೆಗಾಗಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಶೋ ರದ್ದಾದ ಹಿನ್ನಲೆಯಲ್ಲಿ ಅವರು ವಾಪಸಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.