'ಶಿವಂ' ತಪ್ಪುಗಳಿಂದ ಕಲಿತ ರಾಜು
ತಮ್ಮ ಕಳೆದ ಸಿನೆಮ 'ಶಿವಂ' ಅತಿ ಪ್ರಚಾರದ ಹೊರತಾಗಿಯೂ ನೆಲ ಕಚ್ಚಿದ ನಂತರ ತಮ್ಮ ತಪ್ಪುಗಳಿಂದ ಪಾಠ ಕಲಿತಿರುವ ನಿರ್ದೇಶಕ ಶ್ರೀನಿವಾಸ ರಾಜು

ಬೆಂಗಳೂರು: ತಮ್ಮ ಕಳೆದ ಸಿನೆಮ 'ಶಿವಂ' ಅತಿ ಪ್ರಚಾರದ ಹೊರತಾಗಿಯೂ ನೆಲ ಕಚ್ಚಿದ ನಂತರ ತಮ್ಮ ತಪ್ಪುಗಳಿಂದ ಪಾಠ ಕಲಿತಿರುವ ನಿರ್ದೇಶಕ ಶ್ರೀನಿವಾಸ ರಾಜು, ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಪ್ಪು ಮಾಡುವದು ಮನುಷ್ಯನ ಸಹಜ ಗುಣ, ಅದರಿಂದ ಕಲಿಯುವುದ ದೈವತ್ವ ಗುಣ ಎನ್ನುವ ನಿರ್ದೇಶಕ ಇನ್ನೂ ಹೆಸರಿಡದ ಹಾರರ್-ಹಾಸ್ಯಚಿತ್ರಕ್ಕೆ ತಾವು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದಾರೆ.
ಮೊದಲನೆಯೆ ಪಾಠದ ಪ್ರಕಾರ ವರ್ಷಾನುಗಟ್ಟಲೆ ಯಾವುದೇ ಯೋಜನೆಗೆ ಅಂಟಿ ಕೂರಬಾರದೆಂಬುದು. ಈ ತಪ್ಪು ತಿದ್ದುಕೊಂಡಿರುವ ರಾಜು, ಪ್ರಿಯಾಮಣಿ ಮತ್ತು ಕೋಮಲ್ ನಟನೆಯ ಈ ಚಿತ್ರದ ಹಾಡುಗಳನ್ನೂ ಒಳಗೊಂಡಂತೆ ಚಿತ್ರೀಕರಣವನ್ನು ೨೭ ದಿನಗಳಲ್ಲಿ ಮುಗಿಸಿದ್ದಾರೆ. "ಇನ್ನು ಸ್ವಲ್ಪ ಕೆಲಸವಷ್ಟೇ ಉಳಿದಿದೆ. ನಂತರ ರೀ ರೆಕಾರ್ಡಿಂಗ್, ಸೆನ್ಸಾರ್ ಮತ್ತು ಮೇನಲ್ಲಿ ಬಿಡುಗಡೆಗೆ ಸಿದ್ಧವಾಗಲಿದೆ" ಎನ್ನುತ್ತಾರೆ ಶ್ರೀನಿವಾಸ್.
ಎರಡನೇ ಪಾಠ ಬಿಡುಗಡೆ ದಿನವನ್ನು ಮುಂದೂಡದೆ ಇರುವುದು. 'ಶಿವಂ' ಬಿಡುಗಡೆಗೆ ತಿಂಗಳುಗಟ್ಟಲೆ ಹಿಡಿದಿತ್ತು. ಈ ಬಾರಿ ಒಂದು ದಿನಕ್ಕೆ ಅಂಟಿಕೊಂಡು ಸರಿಯಾದ ದಿನ ಬಿಡುಗಡೆ ಮಾಡಲಿದ್ದಾರಂತೆ.
ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನೆಮಾದಲ್ಲಿ ಪೂಜಾ ಗಾಂಧಿ ಅತಿಥಿ ನಟಿಯಾಗಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿ ಜೊತೆ 'ನಾಟಿ ಕೋಳಿ' ಮತ್ತು ಪೂಜಾ ಗಾಂಧಿಯವರ ಜೊತೆ 'ದಂಡುಪಾಳ್ಯ-೨' ರಾಜು ಅವರ ಮುಂದಿನ ಯೋಜನೆಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


