ಎಪಿ ಸಚಿವನ ವರ್ತನೆಗೆ ಕಣ್ಣೀರಿಟ್ಟ ಶ್ರುತಿ ಹಾಸನ್
ನಟಿ ಶ್ರುತಿ ಹಾಸನ್ ಕಣ್ಣೀರು ಹಾಕಿದ್ದಾರೆ. ಅದೂ ಆಂಧ್ರಪ್ರದೇಶ ಸಚಿವರ ಮಾತಿಗಾಗಿ. ಖಾಸಗಿ ವಿಮಾನವೊಂದಲ್ಲಿ ಶ್ರುತಿ ಹಾಸನ್ ಹಾಗೂ ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ತೀವ್ರವಾಗಿ ಮನನೊಂದ ಶ್ರುತಿ ಹಾಸನ್ ವಿಮಾನದಲ್ಲಿಯೇ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ...

ನಟಿ ಶ್ರುತಿ ಹಾಸನ್ ಕಣ್ಣೀರು ಹಾಕಿದ್ದಾರೆ. ಅದೂ ಆಂಧ್ರಪ್ರದೇಶ ಸಚಿವರ ಮಾತಿಗಾಗಿ. ಖಾಸಗಿ ವಿಮಾನವೊಂದಲ್ಲಿ ಶ್ರುತಿ ಹಾಸನ್ ಹಾಗೂ ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ತೀವ್ರವಾಗಿ ಮನನೊಂದ ಶ್ರುತಿ ಹಾಸನ್ ವಿಮಾನದಲ್ಲಿಯೇ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶ್ರುತಿ ಹಾಸನ್ ಅವರು ಹೈದರಾಬಾದ್ ನಿಂದ ತಿರುಪತಿಗೆ ವಿಮಾನದಲ್ಲಿ ಹೊರಡುತ್ತಿದ್ದರು. ಇದೇ ವಿಮಾನದಲ್ಲಿದ್ದ ಆಂಧ್ರಪ್ರದೇಶದ ಸಚಿವ ಪಿ ಮಾಣಿಕ್ಯಾಲ ರಾವ್ ಅವರು ತಮ್ಮ ಮೊಬೈಲ್ ನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಶ್ರುತಿ ಹಾಸನ್ ಅವರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಫೋನ್ ನ್ನು ಸ್ವಿಟ್ಚ್ ಆಫ್ ಮಾಡುವಂತೆ ಹೇಳಿದ್ದಾರೆ.
ಇದಕ್ಕೆ ತೀವ್ರವಾಗಿ ಕೆಂಡಾಮಂಡಲವಾದ ಸಚಿವ ಪಿ ಮಾಣಿಕ್ಯಾಲ ರಾವ್, ಶ್ರುತಿ ಹಾಸನ್ ಜೊತೆ ಮಾತಿನ ಚಕಮಕಿಗಿಳಿದಿದ್ದಾರೆ. ಸಚಿವನ ಮಾತಿಗೆ ಉತ್ತರಿಸಲಾಗದೆ ಶ್ರುತಿ ಹಾಸನ್ ಅವರು ವಿಮಾನದಲ್ಲಿ ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರುತಿ ಹಾಸನ್ ಮನನೋಯಿಸಿದ ಸಚಿವರ ಕುರಿತಂತೆ ಮಾಧ್ಯಮಗಳಲ್ಲಿ ಕೆಲವು ಘಂಟೆಗಳ ಕಾಲ ಗೊಂದಲಗಳು ಸೃಷ್ಟಿಯಾಗಿದ್ದವು. ಶ್ರುತಿ ಹಾಸನ್ ಕಣ್ಣೀರು ಹಾಕುವಂತೆ ಮಾಡಿದ್ದು ಆಂಧ್ರಪ್ರದೇಶದ ಆರೋಗ್ಯ ಸಚಿವ ಎ.ಪಿ.ಕಮಿನೇನಿ ಎಂದು ಹೇಳಲಾಗುತ್ತಿತ್ತು.
ಮಾಧ್ಯಮಗಳಲ್ಲಿ ತಮ್ಮ ಹೆಸರು ಕಂಡ ಸಚಿವ ಎ.ಪಿ.ಕಮಿನೇನಿ ಅವರು ಗಾಬರಿಗೊಂಡರಲ್ಲದೇ ಮಾಧ್ಯಮಗಳ ವಿರುದ್ಧ ತೀವ್ರರೀತಿಯಲ್ಲಿ ಕೆಂಡಾಮಂಡಲರಾದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎ.ಪಿ.ಕಮಿನೇನಿ ಅವರು, ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಕಟ್ಟುಕಥೆ. ನಾನು ತಿರುಪತಿಯ ವಿಮಾನವನ್ನೇ ಹತ್ತಿಲ್ಲ ಎಂದ ಮೇಲೆ ಆ ಹುಡುಗಿಯನ್ನು ಅಳುವಂತೆ ಮಾಡಿದ್ದೇನೆ ಎಂದು ಹೇಗೆ ಹೇಳುತ್ತಾರೆ.
ಇಷ್ಟಕ್ಕೂ ಶ್ರುತಿ ಹಾಸನ್ ಅವರನ್ನು ನನ್ನ ಜೀವನದಲ್ಲಿಯೇ ನೋಡಿಲ್ಲ. ನಾನು ಈ ವರೆಗೂ ಯಾವುದೇ ತಪ್ಪು ಮಾಡಿಲ್ಲ. ಯಾವ ಮಹಿಳೆಯ ಮನಸ್ಸನ್ನೂ ನೋಯಿಸಿಲ್ಲ. ಘಟನೆ ಕುರಿತಂತೆ ನನ್ನ ತಪ್ಪಿದೆ ಎಂದು ಯಾರಾದರೂ ಸಾಬೀತು ಮಾಡಿದರೆ, ನನ್ನ ಅಧಿಕಾರವನ್ನೇ ತ್ಯಜಿಸುತ್ತೇನೆ ಎಂದು ಎ.ಪಿ.ಕಮಿನೇನಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


