ಐರಾವತಕ್ಕೆ ದರ್ಶನ್ ಸಿಕ್ಸ್ ಪ್ಯಾಕ್ ಲುಕ್
ಇತ್ತೀಚೆಗೆ ಆರು ಪ್ಯಾಕ್ ದೇಹ ಬೆಳೆಸಿಕೊಳ್ಳುವವರು ಅಪರೂಪವೇನಲ್ಲ. ಇದು ಒಬ್ಬ ವ್ಯಕ್ತಿಯ ಸೌಂದರ್ಯವನ್ನು ಮೇಲೆತ್ತುವುದಲ್ಲದೆ ಸಿನೆಮಾದ ಪ್ರದರ್ಶನವನ್ನೂ ಕೂಡ

ಬೆಂಗಳೂರು: ಇತ್ತೀಚೆಗೆ ಆರು ಪ್ಯಾಕ್ ದೇಹ ಬೆಳೆಸಿಕೊಳ್ಳುವವರು ಅಪರೂಪವೇನಲ್ಲ. ಇದು ಒಬ್ಬ ವ್ಯಕ್ತಿಯ ಸೌಂದರ್ಯವನ್ನು ಮೇಲೆತ್ತುವುದಲ್ಲದೆ ಸಿನೆಮಾದ ಪ್ರದರ್ಶನವನ್ನೂ ಕೂಡ ಮೇಲೆತ್ತುತ್ತದೆ. ಸ್ಯಾಂಡಲ್ ವುಡ್ ಚಿತ್ರೋದ್ಯಮಕ್ಕೆ ಸಿಕ್ಸ್ ಪ್ಯಾಕ್ ನಟರ ಸಾಲಿಗೆ ದರ್ಶನ್ ಹೊಸ ಸೇರ್ಪಡೆ. ಅವರ ಐರಾವತ ಸಿನೆಮಾಗೆ ಈ ಹೊಸ ಅವತಾರ. ಈ ಸೂಪರ್ ಮಾಂಸಖಂಡಗಳಿಂದ ಸಿನೆಮಾ ಗೆಲ್ಲುವುದಿಲ್ಲ ಎನ್ನುವ ನಟ ದರ್ಶನ್ "ಸಿಕ್ಸ್ ಪ್ಯಾಕ್ ದೇಹಕ್ಕೆ ಸಿನೆಮಾಗಳು ಓಡುವುದಿಲ್ಲ, ಸಿನೆಮಾದಲ್ಲಿ ಒಳ್ಳೆಯ ಕಂಟೆಂಟ್ ಅಗತ್ಯ. ಸಿಕ್ಸ್ ಪ್ಯಾಕ್ ಇದಕ್ಕೆ ಸಾಥ್ ನೀಡುತ್ತದೆ ಅಷ್ಟೇ" ಎಂದಿದ್ದಾರೆ.
ಆರು ತಿಂಗಳುಗಳಿಂದ ತಮ್ಮ ದೇಹವನ್ನು ಹುರಿಗೊಳಿಸಲು ಕಸರತ್ತು ಮಾಡುತ್ತಿರುವ ನಟ "ಈ ದೇಹ ಬೆಳೆಸಿಕೊಳ್ಳಲು ಹಲವು ತ್ಯಾಗ ಮಾಡಿದ್ದೇನೆ. ನನ್ನ ಊಟದ ದಿನಚರಿಯನ್ನು ಬದಲಾಯಿಸಿದ್ದೇನೆ. ಕಳೆದ ಒಂದು ವರ್ಷದಿಂದ ಅನ್ನ ತಿಂದಿಲ್ಲ. ನಮ್ಮ ಮನೆಯಲ್ಲೇ ಜಿಮ್ ಇದ್ದು ಕಸರತ್ತು ಮಾಡುತ್ತೇನೆ. ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಚಾಂಪಿಯನ್ ಹೇಮಂತ್ ನನ್ನ ತರಬೇತುದಾರ" ಎನ್ನುತ್ತಾರೆ ದರ್ಶನ್.
"ನಿರ್ದೇಶಕ ಅರ್ಜುನ್ ಅವರಿಗೆ ಐರಾವತಕ್ಕಾಗಿ ಈ ಹೊಸ ಲುಕ್ ಬೇಕಾಗಿತ್ತು. ಹಾಗೆಯೇ 'ಗಜನಿ'ಗಾಗಿ ಅಮೀರ್ ಖಾನ್ ಅವರು ಬದಲಾಗಿದ್ದನ್ನು ಗಮನಿಸಿದ್ದೆ. ಆದುದರಿಂದಲೇ ನಾನು ಕೂಡ ಸಿಕ್ಸ್ ಪ್ಯಾಕ್ ಬಾಡಿ ಬೆಳೆಸಿಕೊಳ್ಳಲು ಮುಂದಾದೆ" ಎನ್ನುತ್ತಾರೆ ದರ್ಶನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


