ನಟಿ ಶ್ವೇತಾ ಬಸು ಈಗ ಚಿತ್ರಕಥೆ ಬರಹಗಾರ್ತಿ!
ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ..

ಹೈದ್ರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ಪುನರ್ವಸತಿ ಕೇಂದ್ರದಿಂದ ಬಿಡುಗಡೆಗೊಂಡಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಅವರು ಸದ್ಯ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಥೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಿನಿಮಾಗಳಲ್ಲಿ ತಮಗೆ ಅವಕಾಶ ಸಿಗುವುದು ಕಡಿಮೆಯಾದ ಕಾರಣ ಜೀವನ ನಿರ್ವಹಣೆಗಾಗಿ ವೇಶ್ಯಾವಾಟಿಕೆ ದಂದೆಗೆ ಇಳಿಯಬೇಕಾಯಿತು ಎಂದು ಹೇಳಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಶ್ವೇತಾ ಪುನರ್ವಸತಿ ಕೇಂದ್ರದಿಂದ ಬಿಡುಗಡೆಗೊಂಡ ನಂತರ ಇದೀಗ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಫ್ಯಾಂಟಮ್ ಪ್ರೊಡಕ್ಷನ್‌ನಲ್ಲಿ ಸ್ಕ್ರೀಪ್ಟ್ ಸಲಹೆಗಾರ್ತಿಯಾಗಿ ಕೆಲಸ ಸಂಪಾದಿಸಿದ್ದಾರೆ.
ಫ್ಯಾಂಟಮ್ ಪ್ರೊಡಕ್ಷನ್‌ನಲ್ಲಿ ಕಥೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಬಂದಿದೆ ಎಂದು ಶ್ವೇತ ಖಚಿತಪಡಿಸಿದ್ದಾರೆ. ಇದರಿಂದಾಗಿ ನನಗೆ ಒಳ್ಳೆಯ ಕಥೆಗಳನ್ನು ಕೇಳುವ ಅವಕಾಶ ನಿಗಲಿದೆಯಲ್ಲದೇ ಮುಂದೆ ಇದು ತಮ್ಮ ನಟನೆಗೂ ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಹನ್ಸಲ್ ಮೆಹ್ತಾರವರ ಚಿತ್ರದಲ್ಲಿ ತಾವು ಕಾರ್ಯ ನಿರ್ವಹಿಸುವುದಾಗಿ ಕೇಳಿ ಬಂದಿರುವ ವದಂತಿಯನ್ನು ನಿರಾಕರಿಸಿದ ನಟಿ ಶ್ವೇತಾ ಪ್ರಸಾದ್, ತಾವು ಸಾಕ್ಷ್ಯ ಚಿತ್ರದಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ ಸಾಧ್ಯ ಎಂದು ಮರು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


