ಖತರ್‌ನಾಕ್ ನಾಯಕಿಯರು
ನಟ ಕೋಮಲ್ ಅಭಿನಯದ 'ನಮೋ ಭೂತಾತ್ಮ' ಚಿತ್ರಕ್ಕೆ ಹುಡುಗಿ..

ನಟ ಕೋಮಲ್ ಅಭಿನಯದ 'ನಮೋ ಭೂತಾತ್ಮ' ಚಿತ್ರಕ್ಕೆ ಹುಡುಗಿಯರದ್ದೇ ಕಾಟವಂತೆ!
ಹಾಗಂತ ಬಿಡುಗಡೆಯ ಹಂತದಲ್ಲಿರುವ ಕೋಮಲ್ ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಯಿತೆ? ಎಂದುಕೊಳ್ಳಬೇಡಿ. ಭೂತ, ಪ್ರೇತಾತ್ಮಗಳ ಕಥೆ ಹೇಳುವ ಈ ಚಿತ್ರದಲ್ಲಿ ನಾಲ್ಕು ಮಂದಿ ನಾಯಕಿಯರಿಗೇನು ಕೆಲಸ ಎನ್ನುವುದೇ ಮುಖ್ಯ. ಅಲ್ಲದೆ ಹಾರರ್ ಕಂ ಕಾಮಿಡಿ ಸಿನಿಮಾದಲ್ಲಿ ನಾಲ್ಕು ಮಂದಿ ನಾಯಕಿಯರು ಇದ್ದಾರೆ ಎನ್ನುವುದೇ ಅಚ್ಚರಿ. ಈಗಾಗಲೇ ದಾಸ್ವಾಳ ಚಿತ್ರದ ಮೂಲಕ ಗಾಂಧಿನಗರಕ್ಕೆ ಬಂದಿರುವ ಐಶ್ವರ್ಯ ಮೆನನ್, ಗಾಯಿತ್ರಿ ಅಯ್ಯರ್, ನಿಖಿತಾ, ಅನಸ್ವರ ಕುಮಾರ್ ನಮೋ ಭೂತಾತ್ಮ ಚಿತ್ರದ ಬ್ಯೂಟಿ ಫ್ಲವರ್‌ಗಳು. ನೃತ್ಯ ನಿರ್ದೇಶಕ ಮುರಳಿ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ದೆವ್ವದ ಜತೆಗೆ ಗ್ಲಾಮರ್ ಕೊಂಚ ಜಾಸ್ತಿಯಾಗಿಯೇ ಕೊಡಲು ಹೊರಟಿದ್ದಾರೆಯೇ? ಎನ್ನುವ ಗುಮಾನಿ ಹುಟ್ಟುತ್ತದೆ. ಅಲ್ಲದೆ ನರ್ಸ್ ಜಯಲಕ್ಷ್ಮೀ ಕೂಡ ಇಲ್ಲಿ ಬ್ಯೂಟಿಫುಲ್ ಶಿಕ್ಷಕಿ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ ಎನ್ನುವುದು ಮತ್ತೊಂದು ಹೈಲೈಟ್.
ಇಲ್ಲಿ ನಟಿ ಐಶ್ವರ್ಯ ಮೆನನ್ ಹಾಗೂ ಗಾಯಿತ್ರಿ ಅಯ್ಯರ್ ಮುಖ್ಯ ನಾಯಕಿಯರು. ಉಳಿದಂತೆ ಕನ್ನಡದ ನೇಟಿವಿಟಿಗೆ ಸಿನಿಮಾ ಕೊಂಚ ಬದಲಾವಣೆ ಮಾಡಿಕೊಂಡಿರುವುದರಿಂದ ನಿಖಿತಾಳ ಪಾತ್ರವನ್ನು ಹೆಚ್ಚುವರಿಯಾಗಿ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ನಿಖಿತಾ ಇಮೇಜ್‌ನಿಂದ ಚಿತ್ರಕ್ಕೆ ಕಮಿರ್ಷಿಯಲ್ ಬೆಲೆ ಹೆಚ್ಚಾಗುತ್ತದೆಂಬ ಉದ್ದೇಶದಿಂದ ನಿಖಿತಾ ಭೂತದ ಜತೆ ನಂಟು ಬೆಳೆಸಿಕೊಂಡಿದ್ದಾರೆ. ಇನ್ನು ಅನಸ್ವರ ಕುಮಾರ್ ಇಲ್ಲಿ ಒಂಚೂರು ಬಬ್ಲಿಯಾಗಿ ಕಾಣಿಸಿಕೊಂಡಿದ್ದಾಳೆ.
ಒಟ್ಟಿನಲ್ಲಿ ಭೂತದ ಸುತ್ತ ನಾಲ್ಕು ಮಂದಿ ನಾಯಕಿಯರು ಇರುವುದರಿಂದ ಪಡ್ಡೆಗಳಿಗೂ ಈ ಸಿನಿಮಾ ರುಚಿಸುತ್ತದೆ. ಈ ಚಿತ್ರದಲ್ಲಿ ವಿನಾಯಕ್ ಜೋಷಿ ಹಾಗೂ ತೆಲುಗಿನ ಸ್ಟಾರ್ ಹಾಸ್ಯ ನಟ ಆಲಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೋಷಿ ತುಂಬಾ ದಿನಗಳ ನಂತರ ಈ ಚಿತ್ರದ ಮೂಲಕ ಸ್ಕ್ರೀನ್ ಮೇಲೆ ಬಂದಿದ್ದಾರೆ. ಇನ್ನೂ ಆಲಿ ಎರಡನೇ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ.
ಈ ಹಿಂದೆ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಆಲಿ, ಈಗ ನಮೋ ಭೂತಾತ್ಮ ಚಿತ್ರದ ಮೂಲಕ ಮಗದೊಮ್ಮೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ದೆವ್ವ ಓಡಿಸುವ ಪಾತ್ರಧಾರಿಯಾಗಿ ಆಲಿ ಕಾಮಿಡಿ ಸೂಪರ್ ಎಂಬುದು ಚಿತ್ರ ತಂಡದ ಅಭಿಪ್ರಾಯ. ಎಮಿಲ್ ಸಂಗೀತಕ್ಕೆ ಹೃದಯ ಶಿವ ಅದ್ಭುತವಾದ ಹಾಡುಗಳನ್ನೂ ಬರೆದಿದ್ದು, ಪ್ರತಿ ಹಾಡನ್ನು ಪ್ರೇಕ್ಷಕರು ಎನ್‌ಜಾಯ್ ಮಾಡುತ್ತಾರಂತೆ. ಪೈಸಾ ಪೈಸಾ.... ಎನ್ನುವ ಹಾಡಿನಲ್ಲಿ ಐಶ್ವರ್ಯ ಹಾಗೂ ಗಾಯಿತ್ರಿ ಅಯ್ಯರ್ ಗ್ಲಾಮರ್ ಹುಡುಗರ ಕಣ್ಣಿಗೆ ತಂಪು ನೀಡುತ್ತಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


