ವೀಣಾ ಮಲಿಕ್ ಗೆ 26 ವರ್ಷ ಜೈಲು ಶಿಕ್ಷೆ
ಪಾಕಿಸ್ತಾನದ ಮೂಲದ ಬಾಲಿವುಡ್‌ನ ಹಾಟ್ ನಟಿ ವೀಣಾ ಮಲಿಕ್ ಮತ್ತು ಆಕೆಯ...

ಇಸ್ಲಾಮಾಬಾದ್: ಪಾಕಿಸ್ತಾನದ ಮೂಲದ ಬಾಲಿವುಡ್‌ನ ಹಾಟ್ ನಟಿ ವೀಣಾ ಮಲಿಕ್ ಮತ್ತು ಆಕೆಯ ಪತಿ ಅಸದ್ ಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಕೋರ್ಟ್ 26 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಾಹಿನಿಯೊಂದರಲ್ಲಿ ಧರ್ಮ ವಿರೋಧಿ ವಿಷಯಗಳನ್ನು ಪ್ರಸ್ತಾಪಿಸಿದಕ್ಕೆ ನಟಿ ವೀಣಾ ಮತ್ತು ಆಕೆಯ ಪತಿ ಅಸದ್ ಹಾಗೂ ಕಾರ್ಯಕ್ರಮ ಪ್ರಸಾರ ಮಾಡಿದ ಜಿಯೋ ಟಿವಿ ಮಾಲೀಕ ಶಕೀಲ್ ಉರ್ ರೆಹಮಾನ್ ಅವರಿಗೆ ಕೋರ್ಟ್ 26 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 12,500 ಡಾಲರ್ ದಂಡ ಹಾಕಿದೆ.
ಜಿಯೋ ಟಿವಿ ಆಹ್ವಾನದ ಮೇರೆಗೆ ಕಾರ್ಯಕ್ರಮವೊಂದಕ್ಕೆ ವೀಣಾ ಮಲಿಕ್ ಮತ್ತು ಆಕೆಯ ಪತಿ ಅಸದ್ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಪವಿತ್ರವಾದ ಹಾಡನ್ನು ಹಾಕಲಾಗಿತ್ತು. ಆಗ ದಂಪತಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಹಮದ್ ಕುಟುಂಬ ಸದಸ್ಯರನ್ನು ಅವಮಾನಿಸಲಾಯಿತು ಎಂದು ಆರೋಪಿಸಿ ಕೆಲವರು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ವೀಣಾ ಮಲಿಕ್, ಅಸದ್ ಮತ್ತು ನೀರ್‌ಶಕೀಲ್ ಅವರಿಗೆ 26 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


