ನನಗೆ ನಿಶ್ಚಿತಾರ್ಥವಾಗಿಲ್ಲ: ತ್ರೀಶಾ
ನಿರ್ಮಾಪಕ, ಉದ್ಯಮಿ ವರುಣ್ ಮನಿಯನ್ ಅವರೊಡನೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕ್ರಿಷ್ಣನ್...

ಚೆನ್ನೈ: ನಿರ್ಮಾಪಕ, ಉದ್ಯಮಿ ವರುಣ್ ಮನಿಯನ್ ಅವರೊಡನೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ನಿಶ್ಚಿತಾರ್ಥವಾಗಿದ್ದು, ತ್ರಿಶಾ ಶೀಘ್ರದಲ್ಲೇ ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ ಎಂಬ ಗಾಳಿ ಮಾತಿಗೆ ತ್ರಿಶಾ ಗರಂ ಆಗಿದ್ದಾರೆ.
ಕನ್ನಡದಲ್ಲಿ ಬಿಡುಗಡೆಯಾದ 'ಪವರ್' ಚಿತ್ರದ ಯಶಸ್ಸಿನ ನಂತರ ಮತ್ತೆ ನಟನೆಯಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರೀಶಾ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಗಾಳಿ ಮಾತನ್ನು ತ್ರಿಶಾ ತಳ್ಳಿ ಹಾಕಿದ್ದಾರೆ.
ನನಗೆ ನಿಶ್ಚಿತಾರ್ಥವಾಗಿಲ್ಲ. ಇದೊಂದು ವದಂತಿ ಎಂದು ಹೇಳುವ ಮೂಲಕ ಗಾಳಿ ಮಾತಿಗೆ ಎಳ್ಳುನೀರು ಬಿಟ್ಟಿದ್ದಾರೆ.
ತೆಲುಗು ಚಿತ್ರದಲ್ಲಿ ನಟ ಬಾಲಕೃಷ್ಣ ಅವರ ಜೋಡಿಯಾಗಿ ನಟಿಸುತ್ತಿರುವ ತ್ರೀಶಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಚಿತ್ರರಂಗದಲ್ಲಿ ತ್ರಿಶಾಗೆ ನಿಶ್ಚಿತಾರ್ಥವಾಗಿದೆ ಎಂಬ ಗಾಳಿ ಮಾತು ಹಬ್ಬಿದೆ. ನಿನ್ನೆಯಷ್ಟೇ ಟ್ವಿಟರ್‌ನಲ್ಲಿ ತ್ರಿಶಾ ಮತ್ತು ಉದ್ಯಮಿ ವರಣ್ ಮನಿಯನ್ ಜೊತೆ ನಿಶ್ಚಿತಾರ್ಥವಾಗಿದೆ ಎಂದು ಟ್ವೀಟ್ ಮಾಡಲಾಗಿತ್ತು.
ಇದಕ್ಕೆ ಗರಂ ಆಗಿರುವ ತ್ರಿಶಾ ನನಗೆ ನಿಶ್ಚಿತಾರ್ಥವಾಗಿಲ್ಲ. ಇದೆಲ್ಲಾ ಗಾಳಿ ಮಾತು ಎಂದು ಸ್ಪಷ್ಟನೆ ನೀಡಿದ್ದಾರೆ.
ತೆಲುಗು ನಟ ರಾಣಾ ಮತ್ತು ತ್ರಿಶಾ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂದು ಇಡೀ ಟಾಲಿವುಡ್‌ಗೆ ಗೊತ್ತಿತ್ತು. ಇತ್ತೀಚೆಗಷ್ಟೇ ಇವರಿಬ್ಬರ ನಡುವೆ ನಟಿ ರಾಗಿಣಿ ಎಂಟ್ರಿಕೊಟ್ಟಿದ್ದಾರೆ ಎಂಬ ವಿಷಯ ಹಬ್ಬುತ್ತಿದ್ದಂತೆ, ಇತ್ತ ತ್ರಿಶಾಗೆ ನಿಶ್ಚಿತಾರ್ಥವಾಗಿದೆ ಎಂಬ ವದಂತಿ ಹರಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


